ಗಂಡನ ಮನೆಗೆ ಹೊರಡುವ ಮುನ್ನ ಹೆಣ್ಣು ಮಕ್ಕಳಿಗೆ ಈ ಐದು ವಿಚಾರಗಳನ್ನು ತಿಳಿ ಹೇಳಲೇ ಬೇಕಂತೆ !

ಪ್ರತಿಯೊಬ್ಬ ತಾಯಿಯು ತನ್ನ ಮಗಳಿಗೆ ಮದುವೆಗೆ ಮೊದಲು ಕೆಲವು ವಿಷಯಗಳನ್ನು ತಿಳಿಸಿಕೊಟ್ಟರೆ ಹೊಸ ಕುಟುಂಬಕ್ಕೆ, ಹೊಸ ಜಗತ್ತಿಗೆ ಹೊಂದಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯನ್ನು ಎದುರಾಗುವುದಿಲ್ಲ. 

Written by - Ranjitha R K | Last Updated : Mar 11, 2024, 06:08 PM IST
  • ಹೆಣ್ಣು ಮಕ್ಕಳಿಗೆ ತಿಳಿದಿರಬೇಕು ಈ ವಿಚಾರ
  • ಅತ್ತೆಯ ಮನೆಯಲ್ಲಿ ಸುಖವಾಗಿ ಬದುಕುವುದಕ್ಕೆ ಈ ಸೂತ್ರ
  • ತಿಳಿಸಿ ಹೇಳಿ ಕೊಡುವ ಜವಾಬ್ದಾರಿ ತಾಯಿಯದ್ದು
ಗಂಡನ ಮನೆಗೆ ಹೊರಡುವ ಮುನ್ನ ಹೆಣ್ಣು ಮಕ್ಕಳಿಗೆ ಈ ಐದು ವಿಚಾರಗಳನ್ನು ತಿಳಿ ಹೇಳಲೇ ಬೇಕಂತೆ ! title=

ಬೆಂಗಳೂರು : ಮಗಳು ಹುಟ್ಟಿದ ತಕ್ಷಣ ತಂದೆ  ತಾಯಿಗೆ ಮೊದಲು ಕಾಡುವುದೇ ಆಕೆಯ  ಮದುವೆಯ ಚಿಂತೆ. ಆದರೆ,ವಾಸ್ತವದಲ್ಲಿ ಹೆಣ್ಣು ಮಗು ಅಂದ ತಕ್ಷಣ ಅವಳಿಗೆ ಮದುವೆ ಮಾಡಿ ಅತ್ತೆಯ ಮನಗೆ ಅಟ್ಟುವುದೊಂದೇ ಪೋಷಕರ ಜವಾಬ್ದಾರಿಯಲ್ಲ. ಮದುವೆ ಮಾಡಿಸುವುದಕ್ಕೂ ಮುನ್ನ ಆಕೆಯನ್ನು ಹೊಸ ಬದುಕಿಗೆ ಮಾನಸಿಕವಾಗಿ ತಯಾರು ಮಾಡಬೇಕು. 

ಹೆಣ್ಣು ಮಕ್ಕಳನ್ನು ಮದುವೆಗೂ ಮುನ್ನ ಆಕೆಯ ಹೊಸ ಬದುಕಿಗೆ ಯಾವ ರೀತಿ ತಯಾರು ಮಾಡಬೇಕು ಎನ್ನುವುದರಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅತ್ತೆಯ ಮನೆಯಲ್ಲಿ ವಿಷಯಗಳನ್ನು ಹೇಗೆ ನಿರ್ವಹಿಸಬಹುದು, ನಿರ್ವಹಿಸಬೇಕು ಎನ್ನುವುದನ್ನು ಒಬ್ಬ ಸ್ತ್ರೀ ಮಾತ್ರ ಇನ್ನೊಬ್ಬಳಿಗೆ ತಿಳಿಸಿ ಹೇಳಬಹುದು. ಪ್ರತಿಯೊಬ್ಬ ತಾಯಿಯು ತನ್ನ ಮಗಳಿಗೆ ಮದುವೆಗೆ ಮೊದಲು ಕೆಲವು ವಿಷಯಗಳನ್ನು ತಿಳಿಸಿಕೊಟ್ಟರೆ ಹೊಸ ಕುಟುಂಬಕ್ಕೆ, ಹೊಸ ಜಗತ್ತಿಗೆ ಹೊಂದಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯನ್ನು ಎದುರಾಗುವುದಿಲ್ಲ. 

ಇದನ್ನೂ ಓದಿ : Travel Hacks: ವಿಮಾನ ಹತ್ತದೆ ವಿದೇಶಕ್ಕೆ ಹೋಗಿ ಎಂಜಾಯ್ ಮಾಡಬಹುದು..! ಹೇಗೆ ಗೊತ್ತಾ

ಎಲ್ಲರೊಂದಿಗೆ ಬೆರೆಯುವುದು : 
 ಹೆಣ್ಣಿಗೆ ಮನೆಯನ್ನು ಮುನ್ನಡೆಸಿಕೊಂಡು ಹೋಗುವ ಪ್ರಮುಖ ಜವಾಬ್ದಾರಿ ಇರುತ್ತದೆ.   ಹೀಗಿರುವಾಗ ಆಕೆ ಎಲ್ಲರನ್ನು  ಜೊತೆಯಾಗಿ ಕರೆದುಕೊಂಡು ಹೆಜ್ಜೆ ಹಾಕಬೇಕಾಗುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು,ತನ್ನ ಮಾತ್ರವಲ್ಲ ಇಡೀ ಕುಟುಂಬದ ಸಂತೋಷದ ಬಗ್ಗೆ ಯೋಚಿಸಬೇಕಾಗುತ್ತದೆ.  

 ಪ್ರತಿಯೊಂದು ವಿಚಾರವನ್ನು ಮನಸಿಗೆ ಹಚ್ಚಿಕೊಳ್ಳಬಾರದು : 
ಒಂದೇ ಕುಟುಂಬದಲ್ಲಿ ಹಲವು ರೀತಿಯ ಜನರಿರುತ್ತಾರೆ.ಕೆಲವರು ನಿಮಗೆ ಬೆಂಬಲವಾಗಿ ನಿಂತರೆ ಇನ್ನು ಕೆಲವರು ವಿರುದ್ದವಾಗಿರುತ್ತಾರೆ. ಹೀಗಿರುವಾಗ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳುವ ಅಗತ್ಯವಿಲ್ಲ ಎನ್ನುವುದನ್ನು ತಾಯಿ ತಿಳಿಸಿ ಹೇಳಬೇಕು. 

ಸಮಯದೊಂದಿಗೆ  ಎಲ್ಲವೂ ಬದಲಾಗುತ್ತವೆ :
ಮದುವೆಯ ಆರಂಭಿಕ ವರ್ಷಗಳು ಪ್ರತಿ ಹುಡುಗಿಗೆ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಿನ ಹೊಂದಾಣಿಕೆಗಳನ್ನು ಮಾಡಬೇಕಾಗಿ ಬರುತ್ತದೆ. ಪ್ರತಿಯೊಬ್ಬ ತಾಯಿಯು ತನ್ನ ಮಗಳನ್ನು ಇಂಥಹ ಸನ್ನಿವೇಶಕ್ಕಾಗಿ ಮಾನಸಿಕವಾಗಿ ಸಿದ್ಧಪಡಿಸಬೇಕು.ಕಾಲಕ್ಕೆ ತಕ್ಕಂತೆ ಬದಲಾಗುವುದನ್ನು ಕಲಿಸಬೇಕು. 

ಇದನ್ನೂ ಓದಿ : 2 ಚಮಚ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಬಿಳಿಕೂದಲಿಗೆ ಹಚ್ಚಿ: ತಕ್ಷಣವೇ ಗಾಢ ಕಪ್ಪಾಗುವುದಲ್ಲದೆ ರೇಷ್ಮೆಯಂತೆ ಶೈನ್ ಆಗುತ್ತೆ!

ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಬಾರದು : 
ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದು ಎಂದರೆ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದಲ್ಲ. ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ, ಸ್ವಾಭಿಮಾನವನ್ನು ಎತ್ತಿ ಹಿಡಿದು ಹೇಗೆ ಬದುಕಬೇಕು ಎನ್ನುವುದನ್ನು ಕೂಡಾ ತಾಯಿ ತಿಳಿ ಹೇಳಬೇಕು.

ಕ್ಷಮೆ ಕೇಳುವುದು ಮತ್ತು  ಕ್ಷಮಿಸುವುದು ಎರಡೂ ಅಗತ್ಯ : 
ತಪ್ಪಿಗೆ ಕ್ಷಮೆ ಕೋರುವುದಕ್ಕೂ, ಕ್ಷಮಿಸುವುದಕ್ಕೂ ಎರಡಕ್ಕೂ ದೊಡ್ಡ ಮನಸ್ಸಿರಬೇಕು.  ಹುಡುಗಿಗೆ ಈ ಗುಣಗಳಿದ್ದರೆ ತನ್ನ ಅತ್ತೆಯ ಮನೆಯಲ್ಲಿ ಸುಲಭವಾಗಿ ಹೊಂದಿಕೊಂಡು  ನಡೆಯಬಲ್ಲಳು.  

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ.  )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News