ಈ ರೀತಿ ಎಣ್ಣೆ ಹಚ್ಚಿದರೂ ಉದುರುವುದು ಕೂದಲು ! ನೆನಪಿರಲಿ Hair Oiling ವಿಧಾನ ಹೀಗಿರಬೇಕು

Hair Oiling Tips : ತಜ್ಞರ ಪ್ರಕಾರ, ನಿಮ್ಮ ಕೂದಲನ್ನು ಸಮರ್ಪಕವಾಗಿ ಪೋಷಿಸಬೇಕಾದರೆ, ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಎಣ್ಣೆ ಹಚ್ಚಬೇಕು.

Written by - Ranjitha R K | Last Updated : Jan 31, 2024, 06:16 PM IST
  • ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಶಕ್ತಿ ಹೆಚ್ಚಾಗುತ್ತದೆ
  • ತಪ್ಪಾದ ರೀತಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದುರಿಂದ ಕೂದಲು ಉದುರುತ್ತದೆ
  • ನಿಮ್ಮ ಕೂದಲನ್ನು ಮಸಾಜ್ ಮಾಡುವಾಗ ಉಜ್ಜಲು ಹೋಗಬೇಡಿ
ಈ ರೀತಿ ಎಣ್ಣೆ ಹಚ್ಚಿದರೂ ಉದುರುವುದು ಕೂದಲು ! ನೆನಪಿರಲಿ  Hair Oiling ವಿಧಾನ ಹೀಗಿರಬೇಕು  title=

ಬೆಂಗಳೂರು : ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಶಕ್ತಿ ಹೆಚ್ಚಾಗುತ್ತದೆ. ಕೂದಲಿನ ಬೆಳವಣಿಗೆಗೆ ಸುಲಭವಾಗುತ್ತದೆ.ಆದರೆ, ಕೆಲವೊಮ್ಮೆ ತಪ್ಪಾದ ರೀತಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದುರಿಂದ ಕೂದಲು ಉದುರಲು ಆರಂಭವಾಗುತ್ತದೆ.   ಕೂದಲಿಗೆ ಸರಿಯಾದ ರೀತಿಯಲ್ಲಿ ಎಣ್ಣೆ ಹಚ್ಚುವುದು ಬಹಳ ಮುಖ್ಯವಾಗುತ್ತದೆ. ತಜ್ಞರ ಪ್ರಕಾರ, ನಿಮ್ಮ ಕೂದಲನ್ನು ಸಮರ್ಪಕವಾಗಿ ಪೋಷಿಸಬೇಕಾದರೆ, ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಎಣ್ಣೆ ಹಚ್ಚಬೇಕು.

ನಿಮ್ಮ ಕೂದಲನ್ನು ಮಸಾಜ್ ಮಾಡುವಾಗ ಉಜ್ಜಲು ಹೋಗಬೇಡಿ :
ಕೂದಲಿಗೆ ಎಣ್ಣೆ ಹಚ್ಚುವ ಸಮಯದಲ್ಲಿ ಅನೇಕ ಜನರು ತಮ್ಮ ಕೂದಲನ್ನು ಬಲವಾಗಿ ಉಜ್ಜಿಕೊಂಡು ಮಸಾಜ್ ಮಾಡುತ್ತಾರೆ. ಈ ರೀತಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದೇ ಹೆಚ್ಚು. ಆದ್ದರಿಂದ, ಕೂದಲಿಗೆ ಎಣ್ಣೆ ಹಚ್ಚುವಾಗ ತುಂಬಾ ವೇಗವಾಗಿ ಉಜ್ಜಬಾರದು.  

ಇದನ್ನೂ ಓದಿ : Peanuts: ಕಡಲೆಕಾಯಿಯನ್ನು ಹೆಚ್ಚು ತಿಂದರೆ ತೂಕ ಹೆಚ್ಚುತ್ತದೆಯೇ? ಇದರ ಬಗ್ಗೆ ತಿಳಿಯಿರಿ..

ಎಣ್ಣೆ ಹಚ್ಚಿ ರಾತ್ರಿಯಿಡೀ ಬಿಡಬೇಡಿ : 
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿಗೆ ಆಳವಾದ ಪೋಷಣೆ ದೊರೆಯುತ್ತದೆ. ಕೂದಲ ಮೇಲೆ ಎಣ್ಣೆಯನ್ನು ಬಹಳ ಹೊತ್ತಿನವರೆಗೆ ಬಿಡುವುದರಿಂದ ಕೂದಲಿಗೆ ಹೆಚ್ಚಿನ ಆರೈಕೆ  ಸಿಗುತ್ತದೆ ಎನ್ನುವ ತಪ್ಪು ಕಲ್ಪನೆ ಕೂಡಾ ಬಹಳಷ್ಟು ಮಂದಿಗೆ ಇರುತ್ತದೆ. ಆದರೆ,  ಈ ಹವ್ಯಾಸ  ಕೂದಲಿಗೆ ಹಾನಿ ಉಂಟು ಮಾಡುತ್ತದೆ.

ಎಣ್ಣೆ ಹಚ್ಚಿದ ನಂತರ ಕೂದಲನ್ನು ಬಾಚಬಾರದು : 
ಎಣ್ಣೆ ಹಚ್ಚಿದ ನಂತರ ಕೂದಲನ್ನು ಬಾಚುವುದರಿಂದ ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕೂದಲಿಗೆ ಎಣ್ಣೆ ಹಚ್ಚಿದ ನಂತರ,ಸ್ವಲ್ಪ ಸಮಯದವರೆಗೆ ನೆತ್ತಿಗೆ ವಿಶ್ರಾಂತಿ ನೀಡಬೇಕಾಗುತ್ತದೆ.ನೆತ್ತಿಯನ್ನು ತುಂಬಾ ವೇಗವಾಗಿ ಉಜ್ಜಲು ಪ್ರಾರಂಭಿಸಿದರೆ,  ಕೂದಲು ಒಡೆಯಲು ಕಾರಣವಾಗಬಹುದು. 

ಇದನ್ನೂ ಓದಿ : White hair Remedies:ಈ ಎಲೆಯನ್ನು ಹೀಗೆ ಬಳಸಿ ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಾಣಿಸುವುದಿಲ್ಲ !ಬುಡದಿಂದಲೇ ಕಪ್ಪಾಗುವುದು ಬಿಳಿ ಕೂದಲು

ಕೂದಲಿಗೆ ಎಣ್ಣೆ ಹಚ್ಚಿದ ನಂತರ ಕೂದಲನ್ನು ಬಿಗಿಯಾಗಿ ಕಟ್ಟಬೇಡಿ :
ಕೂದಲಿಗೆ ಎಣ್ಣೆಯನ್ನು ಹಚ್ಚಿದ ಮೇಲೆ ಅದನ್ನು ಬಿಗಿಯಾಗಿ ಕಟ್ಟುವ ತಪ್ಪನ್ನು ಎಂದಿಗೂ ಮಾಡಬಾರದು. ನಿಮ್ಮ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಅದು ಅತಿಯಾದ ಕೂದಲು ಒಡೆಯುವಿಕೆಗೆ ಕಾರಣವಾಗಬಹುದು.ಎಣ್ಣೆಯನ್ನು ಹಚ್ಚಿದ ನಂತರ, ಕೂದಲು ತುಂಬಾ ಸಡಿಲಗೊಳ್ಳುತ್ತದೆ. ಆಗ ತುಂಬಾ ಬಿಗಿಯಾಗಿ ಕೂದಲು ಕಟ್ಟುವುದರಿಂದ ನೆತ್ತಿಯ ಮೇಲೆ ಒತ್ತಡ ಉಂಟಾಗಿ, ನಿಮ್ಮ ಕೂದಲು ಒಡೆಯಲು ಪ್ರಾರಂಭಿಸುತ್ತದೆ.

ಕೂದಲಿಗೆ ಎಣ್ಣೆ ಹಚ್ಚುವುದು ಹೇಗೆ? : 
ಕೂದಲಿಗೆ ಎಣ್ಣೆ ಹಚ್ಚುವಾಗ ಎಣ್ಣೆಯನ್ನು ಯಾವಾಗಲೂ ಉಗುರು ಬೆಚ್ವಾಗಿಸಬೇಕು.  ಇದರ ನಂತರ, ಒಣ ಕೂದಲಿಗೆ ಎಣ್ಣೆಯನ್ನು ಹಚ್ಚಿ ಮತ್ತು ಸುಮಾರು 1 ರಿಂದ 2 ಗಂಟೆಗಳವರೆಗೆ ಬಿಟ್ಟರೆ ಸಾಕು. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ಸಮಯದಲ್ಲಿ ಕೂದಲನ್ನು ಹೆಚ್ಚು ಉಜ್ಜಲು ಹೋಗಬಾರದು. ಎಣ್ಣೆ ಹಚ್ಚಿದ ನಂತರ ಹೇರ್ ಕ್ಯಾಪ್ ಧರಿಸಿ ಸ್ವಲ್ಪ ಸಮಯದವರೆಗೆ ಬಿಡಬೇಕು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News