Naag Panchami 2022: ಕಾಲ ಸರ್ಪ ದೋಷ ನಿವಾರಣೆಗೆ ನಾಗ ಪಂಚಮಿಯ ದಿನ ಈ ರೀತಿ ಮಾಡಿ

Kaal Sarp Dosh: ಶ್ರಾವಣದಲ್ಲಿ ಬರುವ ನಾಗ ಪಂಚಮಿಯ ದಿನ ನಾಗದೇವತೆಯನ್ನು ಪೂಜಿಸಲು ಕೆಲವು ನಿಯಮಗಳಿವೆ. ಈ ದಿನ ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವುದರಿಂದ ಜಾತಕದಲ್ಲಿನ ಕಾಲ ಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

Written by - Chetana Devarmani | Last Updated : Jul 20, 2022, 12:17 PM IST
  • ಕಾಲ ಸರ್ಪ ದೋಷ ನಿವಾರಣೆಗೆ ಉಪಾಯ
  • ನಾಗ ಪಂಚಮಿಯ ದಿನ ಈ ರೀತಿ ಮಾಡಿ
  • ನಾಗ ಪಂಚಮಿಯಂದು ಈ ಪರಿಹಾರಗಳನ್ನು ಮಾಡಿ
Naag Panchami 2022: ಕಾಲ ಸರ್ಪ ದೋಷ ನಿವಾರಣೆಗೆ ನಾಗ ಪಂಚಮಿಯ ದಿನ ಈ ರೀತಿ ಮಾಡಿ title=
ನಾಗ ಪಂಚಮಿ

Naag Panchami 2022: ಶ್ರಾವಣ ಮಾಸದಲ್ಲಿ ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸುವ ನಿಯಮವಿದೆ. ಈ ವರ್ಷ ನಾಮ ಪಂಚಮಿ ಹಬ್ಬವನ್ನು 2ನೇ ಆಗಸ್ಟ್ 2022, ಮಂಗಳವಾರದಂದು ಆಚರಿಸಲಾಗುತ್ತದೆ. ಈ ಬಾರಿ ಶಿವನ ಜತೆಗೆ ಮಾತೆ ಪಾರ್ವತಿಯ ಆಶೀರ್ವಾದ ಪಡೆಯುವ ಯೋಗವೂ ರೂಪುಗೊಳ್ಳುತ್ತಿದೆ. ಶ್ರಾವಣ ಮಂಗಳವಾರಗಳು ಪಾರ್ವತಿ ದೇವಿಗೆ ಸಮರ್ಪಿತವಾಗಿವೆ. ಧರ್ಮಗ್ರಂಥಗಳ ಪ್ರಕಾರ, ಈ ದಿನದಂದು ನಾಗಗಳನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ಕಾಲ ಸರ್ಪ ದೋಷದಿಂದ ಮುಕ್ತನಾಗುತ್ತಾನೆ. ಇದರೊಂದಿಗೆ ಆಧ್ಯಾತ್ಮಿಕ ಶಕ್ತಿ, ಸಂಪತ್ತು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗುತ್ತದೆ. ನಾಗ ಪಂಚಮಿಯ ದಿನ ಈ ಕ್ರಮಗಳನ್ನು ಕೈಗೊಳ್ಳುವುದರಿಂದ ಕಾಲ ಸರ್‌ ಪದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಶನಿವಾರ ಇವುಗಳಲ್ಲಿ ಯಾವುದಾದರೂ ಒಂದನ್ನು ನೋಡಿದ್ರೆ ಸಿಗುತ್ತೆ ಶನಿ ಅನುಗ್ರಹ

ನಾಗ ಪಂಚಮಿಯಂದು ಈ ಪರಿಹಾರಗಳನ್ನು ಮಾಡಿ:

ಜಾತಕದಲ್ಲಿ ಕಾಲ ಸರ್ಪ ದೋಷ ಇರುವವರು ಪ್ರತಿ ವರ್ಷ ಶ್ರಾವಣದಲ್ಲಿ ನಾಗ ಪಂಚಮಿಯ ದಿನದಂದು ರುದ್ರಾಭಿಷೇಕವನ್ನು ಮಾಡಬೇಕು ಎಂದು ನಂಬಲಾಗಿದೆ. ಬಳಿಕ ತಮ್ಮ ಕೈಯಿಂದ ಬೆಳ್ಳಿಯ ನಾಗ-ನಾಗಿಣಿಯನ್ನು ದಾನ ಮಾಡಬೇಕು. ಈ ದಾನವನ್ನು ನಿರ್ಗತಿಕ ಅಥವಾ ಬಡ ಬ್ರಾಹ್ಮಣನಿಗೆ ನೀಡಬೇಕು ಎಂದು ಹೇಳಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಕಾಲ ಸರ್ಪದೋಷವಿದ್ದರೆ, ನಾಸಿಕ್‌ನ ಬಾಬಾ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಹೋಗಿ ನಾಗ ಪಂಚಮಿಯ ದಿನ ಪೂಜೆ ಮಾಡಿದರೆ ಕಾಲ ಸರ್ಪದೋಷದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ವ್ಯಕ್ತಿಯ ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ, ಆ ವ್ಯಕ್ತಿಯು 8, 9 ಮತ್ತು 10 ಮುಖಿ ನೇಪಾಳಿ ರುದ್ರಾಕ್ಷಿಯನ್ನು ಕುತ್ತಿಗೆಗೆ ಧರಿಸಬೇಕು. ಅಲ್ಲದೆ, ಮಹಾಮೃತ್ಯುಂಜಯ ಮಂತ್ರವನ್ನು ನಿಯಮಿತವಾಗಿ ಜಪಿಸಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲ ಸರ್ಪ ದೋಷ ನಿವಾರಣೆ ಕವಚವನ್ನೂ ಧರಿಸಿ. ರಾಹು-ಕೇತುಗಳ ಮಂತ್ರಗಳನ್ನು ಶ್ರಾವಣದಲ್ಲಿ ನಿಯಮಿತವಾಗಿ ಪಠಿಸುವ ಮೂಲಕ ಸಹ ಕಾಲ ಸರ್ಪ ದೋಷದ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ನಾಗ ಪಂಚಮಿ 2022 ಶುಭ ಸಮಯ:

ನಾಗ ಪಂಚಮಿಯ ಪೂಜೆಯ ಶುಭ ಸಮಯವು 2ನೇ ಆಗಸ್ಟ್ 2022 ರಂದು ಬೆಳಿಗ್ಗೆ 05:42 ರಿಂದ 08:24 ರವರೆಗೆ ಇರುತ್ತದೆ. ಪೂಜೆಯ ಮುಹೂರ್ತದ ಒಟ್ಟು ಅವಧಿಯು ಕೇವಲ 02 ಗಂಟೆ 41 ನಿಮಿಷಗಳ ವರೆಗೆ ಇರಲಿದೆ. ಪೂಜಾ ಮುಹೂರ್ತದಲ್ಲಿ ನಾಗಪ್ಪನನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತದೆ ಮತ್ತು ದೇವರ ಕೃಪೆಗೆ ಪಾತ್ರರಾಗುವಿರಿ. 

ಇದನ್ನೂ ಓದಿ: ಅಪ್ಪಿತಪ್ಪಿಯೂ ಸಹ ಮನೆಯಲ್ಲಿ ಶಿವನ ಇಂತಹ ಫೋಟೋಗಳನ್ನು ಇಡಬೇಡಿ

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News