Dandruff Remedies: ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಮನೆಮದ್ದುಗಳು

Home Remedies For Dandruff: ಭುಜ ಮತ್ತು ಬಟ್ಟೆಗಳ ಮೇಲೆ ಬೀಳುವ ತಲೆಹೊಟ್ಟಿನ ಸಮಸ್ಯೆಯಿಂದ ನೀವೂ ಸಹ ತೊಂದರೆಗೀಡಾಗಿದ್ದೀರಾ..? ಈ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಪಡೆಯಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳು ನಿಮಗೆ ಸಹಕಾರಿ ಆಗಿವೆ. ಇದು ತಲೆಹೊಟ್ಟು ಸಮಸ್ಯೆಯಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

Written by - Yashaswini V | Last Updated : Nov 7, 2022, 07:36 AM IST
  • ಕೆಲವರಿಗೆ ಅದರಲ್ಲೂ ಮನೆಯಲ್ಲಿಯೇ ಇರುವವರಿಗೆ ಪ್ರತಿದಿನ ತಲೆ ಬಾಚುವ ಅಭ್ಯಾಸ ಇರುವುದಿಲ್ಲ.
  • ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿನಿತ್ಯ ಕೂದಲನ್ನು ಬಾಚಿಕೊಳ್ಳಬೇಕು.
  • ತಲೆ ಬಾಚುವುದರಿಂದ ನೆತ್ತಿಯು ಉತ್ತೇಜಿತವಾಗುತ್ತದೆ ಮತ್ತು ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ
Dandruff Remedies: ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಮನೆಮದ್ದುಗಳು  title=
Dandruff Home Remedies

Home Remedies For Dandruff: ಚಳಿಗಾಲದಲ್ಲಿ ಡ್ಯಾಂಡ್ರಫ್ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿದೆ. ತಲೆಹೊಟ್ಟು ಉಂಟಾದಾಗ, ಮೊದಲು ನೆತ್ತಿಯ ಮೇಲೆ ಹುರುಪು ಸಂಗ್ರಹವಾಗುತ್ತದೆ ಮತ್ತು ನಂತರ ತುರಿಕೆ ಸಮಸ್ಯೆಯೂ ಪ್ರಾರಂಭವಾಗುತ್ತದೆ. ನಂತರ, ಈ ನೆತ್ತಿಯ ಚರ್ಮವು ನಿಮ್ಮ ಭುಜಗಳು ಮತ್ತು ಬಟ್ಟೆಗಳ ಮೇಲೆ ಬೀಳಲು ಪ್ರಾರಂಭಿಸಿದಾಗ, ಅದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಒಣ ನೆತ್ತಿಯ ಸಮಸ್ಯೆ ಇರುವವರು ಹೆಚ್ಚು ತಲೆಹೊಟ್ಟು ಹೊಂದಿರುತ್ತಾರೆ. ಇದಲ್ಲದೇ ನೆತ್ತಿ ಸೂಕ್ಷ್ಮವಾಗಿರುವವರು ಹೆಚ್ಚು ಹೇರ್ ಪ್ರಾಡಕ್ಟ್ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದರಿಂದ ತಲೆಹೊಟ್ಟು ಸಮಸ್ಯೆಯೂ ಹೆಚ್ಚಾಗುತ್ತದೆ. ಕಾರಣ ಏನೇ ಇರಲಿ, ನೀವೂ ಸಹ ತಲೆಹೊಟ್ಟಿನ ಅಂದರೆ ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ನಿಮ್ಮ ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಪಡೆಯಬಹುದು. ಈ ಲೇಖನದಲ್ಲಿ ಅಂತಹ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ...

ಡ್ಯಾಂಡ್ರಫ್ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಪಡೆಯಲು ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ:
ಪ್ರತಿದಿನ ತಲೆ ಬಾಚಿ:

ಕೆಲವರಿಗೆ ಅದರಲ್ಲೂ ಮನೆಯಲ್ಲಿಯೇ ಇರುವವರಿಗೆ ಪ್ರತಿದಿನ ತಲೆ ಬಾಚುವ ಅಭ್ಯಾಸ ಇರುವುದಿಲ್ಲ. ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿನಿತ್ಯ ಕೂದಲನ್ನು ಬಾಚಿಕೊಳ್ಳಬೇಕು. ಬಾಚಣಿಗೆಯಿಂದ ನೆತ್ತಿಯು ಉತ್ತೇಜಿತವಾಗುತ್ತದೆ ಮತ್ತು ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ, ಇದರಿಂದಾಗಿ ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆಯ ಸ್ರವಿಸುವಿಕೆಯು ಹೆಚ್ಚಾಗುತ್ತದೆ. ತಲೆ ಬಾಚುವುದರಿಂದ ಕೂದಲು ಮತ್ತು ತಲೆಬುರುಡೆ ಎರಡೂ ಆರೋಗ್ಯವಾಗಿರುತ್ತದೆ. ಮಾತ್ರವಲ್ಲ, ಇದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ- Hair Care : ಕೂದಲಿನ ಹಲವು ಸಮಸ್ಯೆಗಳಿಗೆ ಬೀಟ್ರೂಟ್‌ ರಾಮಬಾಣ! ಇಲ್ಲಿದೆ ಬಳಸುವ ಸರಿಯಾದ ವಿಧಾನ

ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿ: 
ತಲೆಹೊಟ್ಟಿನ ಅಂದರೆ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿಯೂ ಸಹಕಾರಿ ಆಗಿದೆ. ಇದಕ್ಕಾಗಿ, ಮೊದಲು ಟೊಮೆಟೊ ರಸ ಮತ್ತು ಮುಲ್ತಾನಿ ಮಿಟ್ಟಿಯನ್ನು ಒಟ್ಟಿಗೆ ಸೇರಿಸಿ ದ್ರಾವಣವನ್ನು ತಯಾರಿಸಿ. ಅದರ ನಂತರ ಅದನ್ನು ತಲೆಗೆ ಹಚ್ಚಿ ಅದು ಡ್ರೈ ಆಗುವವರೆಗೂ ಹಾಗೇ ಬಿಡಿ. ನಂತರ ಸಾಮಾನ್ಯ ನೀರಿನಲ್ಲಿ ಹೇರ್ ವಾಶ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆಯಿಂದ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ.

ಅಲೋವೆರಾ:
ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ಮತ್ತೊಂದು ಸುಲಭ ಪರಿಹಾರ ಎಂದರೆ ಅಲೋವೆರಾ. ಇದಕ್ಕಾಗಿ ಅಲೋವೆರಾದ ಲೋಳೆಯನ್ನು ತೆಗೆದು ಕೂದಲಿನ ಬುಡಕ್ಕೆ ಹಚ್ಚಿ. ಸ್ವಲ್ಪಸಮಯದ ನಂತರ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

ಇದನ್ನೂ ಓದಿ- Hair Care: ಕಾಂತಿಯುತ ಕೂದಲಿಗೆ ವಿಟಮಿನ್ ಸಿ ಇರುವ ಈ ಪದಾರ್ಥಗಳನ್ನು ಬಳಸಿ

ಮೆಂತ್ಯ:
ತಲೆಹೊಟ್ಟು ಹೋಗಲಾಡಿಸಲು, ನೀವು ಮೆಂತ್ಯ ಬೀಜಗಳನ್ನು ಸಹ ಬಳಸಬಹುದು. ಇದಕ್ಕಾಗಿ ಮೊದಲು ಮೆಂತ್ಯ ಬೀಜಗಳನ್ನು ನೆನೆಸಿಡಿ. ಚೆನ್ನಾಗಿ ನೆನೆಸಿದ ನಂತರ ಇದರ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಅದರ ನಂತರ ಕೂದಲನ್ನು ತೊಳೆಯಿರಿ.  

ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಮತ್ತು ಕರ್ಪೂರ: 
ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರವನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News