ಹೇರ್ ಫಾಲ್ ಸಮಸ್ಯೆಯೇ? ಈ ಆಯುರ್ವೇದ ಸಲಹೆ ಅನುಸರಿಸಿದರೆ ಶೀಘ್ರವೇ ಪರಿಹಾರ ಪಡೆಯಿರಿ

Ayurvedic Hair Care Tips: ಬದಲಾದ ಜೀವನ ಶೈಲಿಯಿಂದಾಗಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಆದರೆ, ಆಯುರ್ವೇದದ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಕೂದಲಿನ ಬೆಳವಣಿಗೆಗೂ ಸಹಕಾರಿ ಆಗಲಿದೆ. ಅಂತಹ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿಯಿರಿ. 

Written by - Yashaswini V | Last Updated : Oct 6, 2022, 02:03 PM IST
  • ಕೂದಲಿನ ಬೆಳವಣಿಗೆಗೆ ತೆಂಗಿನಕಾಯಿಯನ್ನು ರಾಮಬಾಣವೆಂದು ಪರಿಗಣಿಸಲಾಗಿದೆ.
  • ಇದಕ್ಕೆ ಕಾರಣ ತೆಂಗಿನಕಾಯಿಯಲ್ಲಿ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಫಂಗಲ್ ಗುಣಗಳಿವೆ.
  • ಇದರಿಂದಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಹೇರ್ ಫಾಲ್ ಸಮಸ್ಯೆಯೇ? ಈ ಆಯುರ್ವೇದ ಸಲಹೆ ಅನುಸರಿಸಿದರೆ ಶೀಘ್ರವೇ ಪರಿಹಾರ ಪಡೆಯಿರಿ
Ayurvedic Hair Care Tips

ಕೂದಲು ಉದುರುವುದನ್ನು ನಿಲ್ಲಿಸಲು ಆಯುರ್ವೇದ ಪರಿಹಾರಗಳು: ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದ ಕಾರಣದಿಂದಾಗಿ, ಕೂದಲು ಉದುರುವಿಕೆ ಮತ್ತು ಅಕಾಲಿಕ ಬಿಳಿ ಕೂದಲಿನಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ನಿವಾರಿಸುವ ಹಲವಾರು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ, ಹಲವು ಬಾರಿ ಈ ಉತ್ಪನ್ನಗಳಿಂದ ವ್ಯತಿರಿಕ್ತ ಪರಿಣಾಮವೂ ಉಂಟಾಗಬಹುದು. ಅದಕ್ಕಾಗಿಯೇ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಬಳಸುವುದಕ್ಕೆ ತುಂಬಾ ಯೋಚಿಸುತ್ತಾರೆ.  ಆದರೆ, ಆಯುರ್ವೇದದ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಕೂದಲಿನ ಬೆಳವಣಿಗೆಗೂ ಸಹಕಾರಿ ಆಗಲಿದೆ. ಅಂತಹ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿಯಿರಿ. 

ಕೂದಲು ಉದುರುವಿಕೆ ಸಮಸ್ಯೆಗೆ ಆಯುರ್ವೇದ ಪರಿಹಾರಗಳು:-
ವಾಸ್ತವವಾಗಿ, ನಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯುವುದರ ಜೊತೆಗೆ ಉದ್ದನೆಯ ದಪ್ಪವಾದ ಕೂದಲನ್ನು ನಿಮ್ಮದಾಗಿಸಬಹುದು. ಅಂತಹ ಕೆಲವು ಪರಿಹಾರಗಳೆಂದರೆ...

* ಮೆಂತ್ಯ ಪರಿಹಾರದೊಂದಿಗೆ ಕೂದಲನ್ನು ಬಲಪಡಿಸುವುದು:
ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಪೋಷಿಸಲು ನೀವು ಮೆಂತ್ಯವನ್ನು ಬಳಸಬಹುದು. ಅದನ್ನು ಬಳಸಲು 2 ಮಾರ್ಗಗಳಿವೆ. 
>> ಮೆಂತ್ಯ ಬೀಜಗಳನ್ನು ತೆಗೆದುಕೊಂಡು ತೆಂಗಿನ ಎಣ್ಣೆಯಿಂದ ಬಿಸಿ ಮಾಡುವುದು ಒಂದು ಮಾರ್ಗವಾಗಿದೆ. ಅದರ ನಂತರ ಆ ಎಣ್ಣೆಯಿಂದ ತಲೆಯ ಕೂದಲಿಗೆ ಮಸಾಜ್ ಮಾಡಿ. 
>> ಇನ್ನೊಂದು ವಿಧಾನವೆಂದರೆ ಒಣಗಿದ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಡುವುದು. ಇದರ ನಂತರ, ನೆನೆಸಿದ ಧಾನ್ಯಗಳನ್ನು ಮರುದಿನ ಪೇಸ್ಟ್ ಮಾಡಿ. ನಂತರ ಆ ಪೇಸ್ಟ್ ಅನ್ನು ಕೂದಲಿಗೆ ಸುಮಾರು ಅರ್ಧ ಗಂಟೆ ಹಚ್ಚಿ. ಅದರ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ನೀವು ಈ ಪರಿಹಾರವನ್ನು ವಾರಕ್ಕೆ 2 ಬಾರಿ ಬಳಸಬಹುದು. 

ಇದನ್ನೂ ಓದಿ- Hair Care Tips : ತಲೆ ಕೂದಲು ರಕ್ಷಣೆಗೆ ಶಾಂಪೂ ಬದಲು ಮೊಸರು ಬಳಸಿ! ಹೇಗೆ ಇಲ್ಲಿದೆ ನೋಡಿ

* ಕೂದಲ ಬೆಳವಣಿಗೆಗೆ ನೆಲ್ಲಿಕಾಯಿ ಬಳಸಿ: 
ಆಮ್ಲಾ ಎಂದರೆ ನೆಲ್ಲಿಕಾಯಿಯನ್ನು ಕೂದಲು ಮತ್ತು ಕಣ್ಣುಗಳಿಗೆ ಅತ್ಯುತ್ತಮ ಆಯುರ್ವೇದ ಅಂಶವೆಂದು ಪರಿಗಣಿಸಲಾಗಿದೆ. ಇದರ ಬಳಕೆಯಿಂದ ಕೂದಲು ಉದುರುವುದು ನಿಲ್ಲುವುದಲ್ಲದೆ, ಅವುಗಳ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಈ ಪರಿಹಾರವನ್ನು ಬಳಸಲು, ನೀವು ಆಮ್ಲಾ ಪುಡಿಯನ್ನು ತೆಗೆದುಕೊಳ್ಳಬೇಕು. ಇದರ ನಂತರ, ಪುಡಿಗೆ ನಿಂಬೆ ರಸವನ್ನು ಸೇರಿಸಿ ಮತ್ತು ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು ಅರ್ಧ ಗಂಟೆಯ ನಂತರ, ಸರಳ ನೀರಿನಿಂದ ತೊಳೆಯಿರಿ. ಈ ಪರಿಹಾರದಿಂದ, ಕೂದಲಿನ ಬೇರುಗಳು ಮೊದಲಿಗಿಂತ ಬಲವಾಗಿರುತ್ತವೆ ಮತ್ತು ಅವು ಹೊಳೆಯುತ್ತವೆ.  

ಇದನ್ನೂ ಓದಿ- Hair Care Tips: ಕೂದಲು ಉದುರುವಿಕೆಯಿಂದ ನಿಮಗೂ ತೊಂದರೆಯಾಗುತ್ತಿದೆಯೇ- ಈ ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಿ

* ತೆಂಗಿನಕಾಯಿ ಕೂದಲಿಗೆ ರಾಮಬಾಣ :
ಕೂದಲಿನ ಬೆಳವಣಿಗೆಗೆ ತೆಂಗಿನಕಾಯಿಯನ್ನು ರಾಮಬಾಣವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ತೆಂಗಿನಕಾಯಿಯಲ್ಲಿ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಫಂಗಲ್ ಗುಣಗಳಿವೆ. ಇದರಿಂದಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಸರಿಯಾಗಿ ಬಳಸಲು, ತೆಂಗಿನ ತುರಿಯನ್ನು ಬಾಣಲೆಯಲ್ಲಿ ಹಾಕಿ 5 ನಿಮಿಷ ಬೇಯಿಸಿ. ಇದರ ನಂತರ, ಅದನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಮೆಂತ್ಯವನ್ನು ಮಿಶ್ರಣ ಮಾಡಿ. ಇದರ ನಂತರ, ಆ ಪೇಸ್ಟ್ ಅನ್ನು ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿ ಸುಮಾರು ಅರ್ಧ ಘಂಟೆಯವರೆಗೆ ಇರಿಸಿ. ವಾರದಲ್ಲಿ 2 ದಿನ ಈ ಪರಿಹಾರವನ್ನು ಮಾಡುವುದರಿಂದ, ನೀವು ಶೀಘ್ರದಲ್ಲೇ ಪರಿಣಾಮವನ್ನು ನೋಡುತ್ತೀರಿ.
 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News