Orange Peel Lip Scrub: ನಿಮ್ಮ ಕೋಮಲವಾದ ತುಟಿಗಳಿಗೆ ವರದಾನ ಕಿತ್ತಳೆ ಸಿಪ್ಪೆಯ ಸ್ಕ್ರಬ್

Orange Peel Lip Scrub: ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಹೆಚ್ಚಾಗಿ ಕಂಡು ಬರುವ ಹಣ್ಣಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಕಿತ್ತಳೆ ಹಣ್ಣನ್ನು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುತ್ತಾರೆ.  ಚಳಿಗಾಲದಲ್ಲಿ ನಿಮ್ಮ ತುಟಿಗಳು ಬಿರುಕು ಬಿಡಬಾರದು ಎಂದು ನೀವು ಬಯಸಿದರೆ, ನೀವು ಕಿತ್ತಳೆ ಸಿಪ್ಪೆಯೊಂದಿಗೆ ಆರೆಂಜ್ ಪೀಲ್ ಲಿಪ್ ಸ್ಕ್ರಬ್ ಅನ್ನು ತಯಾರಿಸಬಹುದು.

Written by - Yashaswini V | Last Updated : Dec 6, 2021, 02:14 PM IST
  • ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ
  • ಇದು ತುಟಿಗಳ ಕಪ್ಪನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ
  • ಈ ಸ್ಕ್ರಬ್ ಬಳಸುವುದರಿಂದ ತುಟಿಗಳು ತೇವಾಂಶದಿಂದ ಕೂಡಿರುತ್ತವೆ
Orange Peel Lip Scrub: ನಿಮ್ಮ ಕೋಮಲವಾದ ತುಟಿಗಳಿಗೆ ವರದಾನ ಕಿತ್ತಳೆ ಸಿಪ್ಪೆಯ ಸ್ಕ್ರಬ್ title=
Orange Peel Lip Scrub Benefits

Orange Peel Lip Scrub: ಚಳಿಗಾಲದ ಆರಂಭದೊಂದಿಗೆ, ನಿಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ತ್ವಚೆಯ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ ಚರ್ಮ ಮತ್ತು ತುಟಿಗಳು ಬಿರುಕು ಬಿಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಇವುಗಳ ಬಗ್ಗೆ ಹೆಚ್ಚಿನ ಕೇರ್ ಮಾಡುವುದು ಅತ್ಯಗತ್ಯ. 

ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಹೆಚ್ಚಾಗಿ ಕಂಡು ಬರುವ ಹಣ್ಣಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಕಿತ್ತಳೆ ಹಣ್ಣನ್ನು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುತ್ತಾರೆ.  ಚಳಿಗಾಲದಲ್ಲಿ ನಿಮ್ಮ ತುಟಿಗಳು ಬಿರುಕು ಬಿಡಬಾರದು ಎಂದು ನೀವು ಬಯಸಿದರೆ, ನೀವು ಕಿತ್ತಳೆ ಸಿಪ್ಪೆಯೊಂದಿಗೆ ಆರೆಂಜ್ ಪೀಲ್ ಲಿಪ್ ಸ್ಕ್ರಬ್ (Orange Peel Lip Scrub) ಅನ್ನು ತಯಾರಿಸಬಹುದು. ಕಿತ್ತಳೆ ಸಿಪ್ಪೆಯ ಸ್ಕ್ರಬ್ ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಇದನ್ನೂ ಓದಿ- ಉದ್ದನೆಯ ಕಪ್ಪು ಕೂದಲಿಗಾಗಿ ಪೇರಳೆ ಎಲೆಯನ್ನು ಈ ರೀತಿ ಬಳಸಿ ನೋಡಿ

ಕಿತ್ತಳೆ ಸಿಪ್ಪೆಯ ಲಿಪ್ ಸ್ಕ್ರಬ್ ಅನ್ನು ಈ ರೀತಿ ತಯಾರಿಸಿ:
ಕಿತ್ತಳೆ ಸಿಪ್ಪೆಯ ಲಿಪ್ ಸ್ಕ್ರಬ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ತೆಂಗಿನ ಎಣ್ಣೆ
* ಸಕ್ಕರೆ
* ಜೇನುತುಪ್ಪ ಮತ್ತು 
* ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯ ಲಿಪ್ ಸ್ಕ್ರಬ್ ತಯಾರಿಸುವ ವಿಧಾನ:
ಕಿತ್ತಳೆ ಸಿಪ್ಪೆಯ ಲಿಪ್ ಸ್ಕ್ರಬ್  (Orange Peel Lip Scrub Benefits)  ತಯಾರಿಸಲು ಮೊದಲು ಕಿತ್ತಳೆ ಸಿಪ್ಪೆಗಳನ್ನು ತೆಗೆದುಕೊಳ್ಳಿ. ಅದರ ನಂತರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ಇದರ ನಂತರ, ಈ ಸಿಪ್ಪೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಪುಡಿಗೆ ಸಕ್ಕರೆ ಸೇರಿಸಿ. ಈ ಮಿಶ್ರಣಕ್ಕೆ ತೆಂಗಿನೆಣ್ಣೆ ಮತ್ತು ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದರ ನಂತರ, ಈ ಮಿಶ್ರಣದಿಂದ ತುಟಿಗಳನ್ನು ಸ್ಕ್ರಬ್ ಮಾಡಿ. 20 ರಿಂದ 30 ಸೆಕೆಂಡುಗಳ ಕಾಲ ಸ್ಕ್ರಬ್ ಮಾಡಿದ ನಂತರ, ಉಗುರು ಬೆಚ್ಚಗಿನ ನೀರಿನಿಂದ ತುಟಿಗಳನ್ನು ತೊಳೆಯಿರಿ. ಸ್ಕ್ರಬ್ ಮಾಡಿದ ನಂತರ ತೆಂಗಿನಕಾಯಿಯನ್ನು ತುಟಿಗಳ ಕೆಳಗೆ ಹಚ್ಚಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಕೋಮಲವಾದ ತುಟಿ ಪಡೆಯಬಹುದು. 

ಇದನ್ನೂ ಓದಿ-  Black Tea For Grey Hairs: ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲ ಸಮಸ್ಯೆಗೆ ಪರಿಹಾರ ನೀಡುತ್ತೆ ಬ್ಲಾಕ್ ಟೀ

ಕಿತ್ತಳೆ ಸಿಪ್ಪೆಯ ಸ್ಕ್ರಬ್‌ನ ಪ್ರಯೋಜನಗಳು:
ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ. ಇದು ತುಟಿಗಳ ಕಪ್ಪನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ. ಇದು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಈ ಸ್ಕ್ರಬ್ ಬಳಸುವುದರಿಂದ ತುಟಿಗಳು ತೇವಾಂಶದಿಂದ ಕೂಡಿರುತ್ತವೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News