Palmistry: ನಿಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಕುರಿತು ಹೇಳುತ್ತವೆ ಅಂಗೈಯಲ್ಲಿನ ಈ ನಾಲ್ಕು ರೇಖೆಗಳು

Hast Rekha Shastra - ನಮ್ಮ ಅಂಗೈಯಲ್ಲಿರುವ ಎಲ್ಲಾ ರೇಖೆಗಳಲ್ಲಿ ನಾಲ್ಕು ರೇಖೆಗಳು ತುಂಬಾ ಪ್ರಮುಖವಾಗಿರುತ್ತವೆ. ವ್ಯಕ್ತಿಯ ಜೀವನ, ಅವನ ಗುಣಗಳು ಮತ್ತು ಸಾಮರ್ಥ್ಯಗಳು, ಅದೃಷ್ಟ ಮತ್ತು ಬುದ್ಧಿವಂತಿಕೆಯ ಬಗ್ಗೆ ಇವು ಶಕುನ ಹೇಳುತ್ತವೆ. ಹಸ್ತ್ ರೇಖಾ ಸಾಮುದ್ರಿಕದಲ್ಲಿ ಇವುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

Written by - Nitin Tabib | Last Updated : Aug 21, 2021, 11:47 AM IST
  • ಅಂಗೈಯಲ್ಲಿನ ಒಟ್ಟು ನಾಲ್ಕು ರೇಖೆಗಳು ತುಂಬಾ ಪ್ರಮುಖವಾಗಿವೆ.
  • ಈ ರೇಖೆಗಳು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಕುರಿತು ಮಾಹಿತಿ ನೀಡುತ್ತವೆ.
  • ವಯಸ್ಸಿನ ಮಾಹಿತಿ ಕೂಡ ಸಿಗುತ್ತವೆ.
Palmistry: ನಿಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಕುರಿತು ಹೇಳುತ್ತವೆ ಅಂಗೈಯಲ್ಲಿನ ಈ ನಾಲ್ಕು ರೇಖೆಗಳು title=
Hast Rekha Shastra

ನವದೆಹಲಿ: Hast Rekha Shastra - ಹಸ್ತ ರೇಖಾ ಶಾಸ್ತ್ರದಲ್ಲಿ (Hast Rekha Shastra) ಅಂಗೈಯಲ್ಲಿನ ರೇಖೆಗಳು, ಆಕೃತಿಗಳು, ಗುರುತುಗಳು, ಮಚ್ಚೆಗಳು ಇತ್ಯಾದಿಗಳ ಮೂಲಕ ವ್ಯಕ್ತಿಯ ಜೀವನಕ್ಕೆ (Life Line) ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರಗಳ ಕುರಿತು ಶಕುನ ಹೇಳುತ್ತವೆ. ಇವುಗಳಲ್ಲಿ ಒಟ್ಟು ನಾಲ್ಕು ರೇಖೆಗಳು ತುಂಬಾ ಪ್ರಮುಖವಾಗಿವೆ. ಏಕೆಂದರೆ ಇವು ಯಕ್ತಿಯ ಜೀವನದ ಪ್ರತಿಯೊಂದು ಸಂಗತಿಗಳ ಆಳವಾದ ಮಾಹಿತಿ ನೀಡುತ್ತವೆ. ಹಾಗಾದರೆ ಬನ್ನಿ ಆ ರೇಖೆಗಳು (Palm Lines) ಯಾವುವು ಮತ್ತು ಅವು ನಮ್ಮ ಜೀವನಕ್ಕೆ ಸಂಬಂಧಿಸಿದ ಯಾವ ಸಂಗತಿಗಳ ಭವಿಷ್ಯ (Astrology) ನುಡಿಯುತ್ತವೆ ಎಂಬುದನ್ನು ತಿಳಿಯೋಣ.

ಇಲ್ಲಿವೆ ಆ ಪ್ರಮುಖ ನಾಲ್ಕು ರೇಖೆಗಳು
1. ಜೀವನ ರೇಖೆ -
ಈ ರೇಖೆಯು ಮನಕಟ್ಟಿನಿಂದ ಹೊರಟು ಹೆಬ್ಬೆರಳು ಮತ್ತು ತೋರುಬೆರಳಿನ ನಡುವಿನವರೆಗೆ ಮುಟ್ಟುತ್ತವೆ. ಈ ರೇಖೆ ವ್ಯಕ್ತಿಯ ವಯಸ್ಸು, ಸಾವಿನ ಕಾರಣ, ಜೀವನದ ಪ್ರಮುಖ ಬಿಕ್ಕಟ್ಟು ಅಥವಾ ಅಪಘಾತವನ್ನು ಸೂಚಿಸುತ್ತದೆ. ಈ ರೇಖೆ ಗಾಢವಾಗಿದ್ದರೆ ಜೀವನವು ಸಂತೋಷ ಮತ್ತು ಆರೋಗ್ಯಕರವಾಗಿರುತ್ತದೆ. ಇನ್ನೊಂದೆಡೆ ಮುರಕಲು ಅಥವಾ ಅಪೂರ್ಣವಾದ ರೇಖೆಯು ಅಶುಭಕರವಾಗಿರುತ್ತದೆ.

ಇದನ್ನೂ ಓದಿ-Raksha Bandhan 2021: ರಕ್ಷಾಬಂಧನದ ದಿನ ರಾಶಿಗನುಗುಣವಾಗಿ ನೀಡಿ ಉಡುಗೊರೆ , ಗಟ್ಟಿಯಾಗಿರಲಿ ಸಹೋದರ ಸಹೋದರಿ ಸಂಬಂಧ

2. ಹೃದಯ ರೇಖೆ - ಈ ರೇಖೆ ಕಿರುಬೆರಳಿನ ಕೆಳಗಿನಿಂದ ಆರಂಭಗೊಂಡು ತೋರುಬೆರಳಿನವರೆಗೆ ಹೋಗುತ್ತದೆ. ಈ ರೇಖೆ ವ್ಯಕ್ತಿಯ ಗುಣಗಳು, ಅವನ ಸೂಕ್ಷ್ಮತೆ ಮತ್ತು ಸ್ವಭಾವದ ಬಗ್ಗೆ ಹೇಳುತ್ತದೆ. ಈ ರೇಖೆ ತೋರು ಬೆರಳಿನ ಕೆಳಗೆ ಉಬ್ಬಿದ ರೀತಿಯಲ್ಲಿ ಇರುವುದು ಒಳ್ಳೆಯ ಸಂಗತಿ.

3. ಮಸ್ತಿಷ್ಕ ರೇಖೆ - ತೋರು ಬೆರಳು ಹಾಗೂ ಹೆಬ್ಬೆಟ್ಟಿನ ನಡುವಿನಿಂದ ಆರಂಭಗೊಂಡು ಅಂಗೈನ ಮತ್ತೊಂದು ಭಾಗಕ್ಕೆ ತಲುಪುವ ರೇಖೆಯನ್ನು ಮಸ್ತಿಷ್ಕ ರೇಖೆ ಎಂದು ಕರೆಯಲಾಗುತ್ತದೆ.  ಈ ರೇಖೆ ವ್ಯಕ್ತಿಯ ಬುದ್ಧಿಮತ್ತೆ, ಮಾನಸಿಕ ಸ್ಥಿತಿ ಹಾಗೂ ಆಲೋಚನೆಯ ಕುರಿತು ಹೇಳುತ್ತವೆ. ಈ ರೇಖೆ ಸ್ವಚ್ಛ ಹಾಗೂ ಸ್ಪಷ್ಟವಾಗಿರುವುದು ಶುಭಕರ.

ಇದನ್ನೂ ಓದಿ-Raksha Bandhan: ರಕ್ಷಾ ಬಂಧನದಂದು ರೂಪುಗೊಳ್ಳಲಿದೆ 'ಗಜ ಕೇಸರಿ ಯೋಗ', ಯಾರ ಮೇಲೆ ನೇರ ಪರಿಣಾಮ!

4. ಭಾಗ್ಯ ರೇಖೆ - ಈ ರೇಖೆ ಅಂಗೈಯ ಮಧ್ಯಭಾಗದಲ್ಲಿ ಉದ್ದವಾಗಿ ಮೂಡಿರುತ್ತದೆ. ಈ ರೇಖೆ ಸ್ಪಷ್ಟ, ಸ್ವಚ್ಛ ಹಾಗೂ ಗಾಢವಾಗಿದ್ದು, ಮನಕಟ್ಟಿನಿಂದ ಆರಂಭಬೊಂದು ಶನಿ ಪರ್ವತದ ವರೆಗೆ ತಲುಪಿದ್ದರೆ, ಅಂತಹ ವ್ಯಕ್ತಿ ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಗಳನ್ನು ಅನುಸರಿಸುವ ಮೊದಲು ಈ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Raksha Bandhan 2021 Things To Avoid: ರಕ್ಷಾ ಬಂಧನದ ದಿನ ಸಹೋದರಿಯರು ಮರೆತೂ ಸಹ ಈ ತಪ್ಪು ಮಾಡಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News