ನವದೆಹಲಿ: ಎಲ್ಲಾ 9 ಗ್ರಹಗಳು ಕಾಲಕಾಲಕ್ಕೆ ತಮ್ಮ ಕಕ್ಷೆ ಮತ್ತು ಚಲನೆಯನ್ನು ಬದಲಾಯಿಸುತ್ತಲೇ ಇರುತ್ತವೆ ಎಂದು ವೈದಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಕೆಲವೊಮ್ಮೆ ಅವು ರಾಶಿಗಳನ್ನು ಪ್ರವೇಶಿಸಿದ್ರೆ, ಕೆಲವೊಮ್ಮೆ ಅವು ಇತರ ಗ್ರಹಗಳೊಂದಿಗೆ ಸಂಯೋಜಿಸುತ್ತವೆ. ಕೆಲವೊಮ್ಮೆ ಈ ರೀತಿಯ ಮೈತ್ರಿಯು ಸ್ಥಳೀಯರಿಗೆ ಉತ್ತಮ ಫಲಿತಾಂಶ ನೀಡಲಿದೆ ಮತ್ತು ಕೆಲವೊಮ್ಮೆ ಇದು ಅವರಿಗೆ ತೊಂದರೆ ನೀಡುತ್ತವೆ.
ಈ ಬಾರಿ ಫೆ.19ರಿಂದ ಷಷ, ಜ್ಯೋಷ್ಠ, ಶಂಖ, ಸರ್ವಾರ್ಥಸಿದ್ಧಿ, ಕೇದಾರ ಸೇರಿದಂತೆ 5 ಯೋಗಗಳನ್ನು ರೂಪುಗೊಂಡಿದೆ. ಈ 5 ಮಹಾ ಯೋಗಗಳ ಅಪರೂಪದ ಕಾಕತಾಳೀಯ 70 ವರ್ಷಗಳ ನಂತರ ಕಾಣುತ್ತಿದೆ. ಇದರ ಪರಿಣಾಮ 4 ರಾಶಿಗಳ ಜೀವನದಲ್ಲಿ ಸಂತೋಷ ಹರಿದುಬರಲಿದೆ, ಅಲ್ಲದೇ ಈ ರಾಶಿಯವರ ಮನೆಗೆ ಸಂಪತ್ತು ಹರಿದುಬರುತ್ತದೆ. ಆ 4 ರಾಶಿಗಳು ಯಾವುವು ಎಂದು ತಿಳಿಯಿರಿ.
ಇದನ್ನೂ ಓದಿ: Grah Gochar 2023: ಇನ್ನೇನು ಮೂರು ದಿನಗಳಲ್ಲಿ ಈ 5 ರಾಶಿಯವರಿಗೆ ಒಲಿಯುತ್ತಾಳೆ ಧನಲಕ್ಷ್ಮಿ: ಬೀರು ತುಂಬಾ ಹಣವೋ ಹಣ!
ಪಂಚ ಮಹಾ ಯೋಗದ ಪ್ರಯೋಜನಗಳು
ಕುಂಭ ರಾಶಿ: 5 ಮಹಾ ಯೋಗಗಳ ಈ ಅಪರೂಪದ ಸಂಯೋಜನೆಯು ನಿಮಗೆ ಅದೃಷ್ಟವನ್ನು ಸಾಬೀತುಪಡಿಸಲಿದೆ. ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರದಲ್ಲಿ ನೀವು ಲಾಭ ಪಡೆಯುತ್ತೀರಿ. ಹೊಸ ವ್ಯವಹಾರ ಪ್ರಾರಂಭಿಸುವ ಆಲೋಚನೆಯಲ್ಲಿರುವವರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಮತ್ತು ಉತ್ತಮ ಲಾಭ ದೊರೆಯುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿ: ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವೃತ್ತಿಪರ ಜೀವನವು ಉತ್ತಮವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ನಿಮ್ಮ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಈ ಶುಭ ಮುಹೂರ್ತದಲ್ಲಿ ನೀವು ಯಾವುದೇ ಕೆಲಸ ಪ್ರಾರಂಭಿಸಿದರೂ ಅದು ಲಾಭದಾಯಕವಾಗಿರುತ್ತದೆ. ನಿಮಗೆ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
ಧನು ರಾಶಿ: ಕೆಲಸ ಮಾಡುವವರಿಗೆ ಇನ್‌ಕ್ರಿಮೆಂಟ್ ಮತ್ತು ಬಡ್ತಿ ದೊರೆಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಮನೆಗೆ ವಾಹನ ಅಥವಾ ಹೊಸ ಆಸ್ತಿ ಆಗಮನವಾಗಬಹುದು. ವ್ಯಾಪಾರದಲ್ಲಿ ನೀವು ಅನೇಕ ದೊಡ್ಡ ಲಾಭ ಪಡೆಯಬಹುದು.
ಇದನ್ನೂ ಓದಿ: Today Horoscope: ಈ ರಾಶಿಯವರಿಗೆ ಆಕಸ್ಮಿಕ ಧನಲಾಭವಾಗಲಿದೆ
ಮಿಥುನ ರಾಶಿ: ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮ ನೋಡಿದರೆ, ಕೆಲವು ದೊಡ್ಡ ಜವಾಬ್ದಾರಿ ನಿಮಗೆ ಸಿಗಲಿವೆ. ವ್ಯಾಪಾರ ಮಾಡುವ ಜನರು ಹೊಸ ಪಾಲುದಾರಿಕೆ ಪ್ರಾರಂಭಿಸಬಹುದು. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.