ನವದೆಹಲಿ: ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಶುಭ ಅಥವಾ ಅಶುಭ ಸಮಯವನ್ನು ನೋಡಲಾಗುತ್ತದೆ. ಯಾವುದೇ ಕೆಲಸವನ್ನು ಶುಭ ಮುಹೂರ್ತದಲ್ಲಿ ಆರಂಭಿಸಿದರೆ ಆ ಕೆಲಸ ಯಶಸ್ವಿಯಾಗುತ್ತದೆಂದು ಹೇಳಲಾಗುತ್ತದೆ. ಶ್ರಾದ್ಧ ಅಥವಾ ಇತರ ಅಶುಭ ಸಮಯದಲ್ಲಿ ಜನರು ಯಾವುದೇ ರೀತಿಯ ಶುಭ ಕಾರ್ಯ ಮಾಡುವುದನ್ನು ತಡೆಯಲು ಇದು ಕಾರಣವಾಗಿದೆ. ಹಿಂದೂ ಪಂಚಾಂಗದ ಕುರಿತು ಹೇಳುವುದಾದರೆ, ಪ್ರತಿ ತಿಂಗಳು ಅಂತಹ 5 ದಿನಗಳು ಇರುತ್ತವೆ, ಈ ದಿನಗಳಲ್ಲಿ ಯಾವುದೇ ರೀತಿಯ ಮಂಗಳಕರ ಅಥವಾ ಶುಭ ಕಾರ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಈ 5 ದಿನಗಳನ್ನು ಪಂಚಕವೆಂದು ಕರೆಯಲಾಗುತ್ತದೆ. ಈಗ ಫೆಬ್ರವರಿ 20ರಿಂದ ಮತ್ತೆ ಈ ಪಂಚಕಗಳನ್ನು ಆರಂಭಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ 5 ದಿನಗಳವರೆಗೆ ನೀವು ಕೆಲವು ಕೆಲಸಗಳನ್ನು ಮಾಡಬಾರದು, ಇಲ್ಲದಿದ್ದರೆ ನೀವು ದೊಡ್ಡ ನಷ್ಟ ಅನುಭವಿಸಬೇಕಾಗಬಹುದು.
ರಾಜ ಪಂಚಕ ಸಮಯದಲ್ಲಿ ಏನು ಮಾಡಬಾರದು?
ಪಂಚಕ ನಡೆಯುವಾಗ ಮರಕ್ಕೆ ಸಂಬಂಧಿಸಿದ ಅನೇಕ ಕೆಲಸಗಳನ್ನು ನಿಷೇಧಿಸಲಾಗಿದೆ. ಹೀಗಾಗಿಯೇ ನೀವು ಈ ಸಮಯದಲ್ಲಿ ಕಟ್ಟಿಗೆ ಸುಡುವುದು, ಒಣ ಹುಲ್ಲನ್ನು ಸಂಗ್ರಹಿಸುವುದು ಅಥವಾ ಸುಡುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಬರುತ್ತದೆ.
ಪಂಚಕ ಸಮಯದಲ್ಲಿ ಮಂಚಗಳನ್ನು ತಯಾರಿಸುವುದು ಧರ್ಮಗ್ರಂಥಗಳಿಗೆ ವಿರುದ್ಧವೆಂದು ಪರಿಗಣಿಸಲಾಗಿದೆ. ಈ ಅಶುಭ ಸಮಯದಲ್ಲಿ ಮಂಚವನ್ನು ತಯಾರಿಸುವುದರಿಂದ ಭವಿಷ್ಯದಲ್ಲಿ ವ್ಯಕ್ತಿ ತೊಂದರೆಗೆ ಸಿಲುಕಬಹುದೆಂದು ಹೇಳಲಾಗುತ್ತದೆ. ಆ ವ್ಯಕ್ತಿಗೆ ಕೆಲವು ಗಂಭೀರ ಕಾಯಿಲೆಗಳು ಬರಬಹುದು, ಇದರಿಂದ ಅವನು ಹಾಸಿಗೆಯಲ್ಲಿಯೇ ಬೆಡ್ ರೆಸ್ಟ್ ಮಾಡಬಹುದು.
ಇದನ್ನೂ ಓದಿ: ಶನಿದೋಷ ನಿವಾರಣೆಗೆ ಈ ಖಾರದ ಮಸಾಲೆ ವಸ್ತುವಿನಿಂದ ಪರಿಹಾರ ಮಾಡಿ: ಕ್ಷಣದಲ್ಲಿ ಪರಿಹಾರ ಖಂಡಿತ!
ಪಂಚಕದಲ್ಲಿ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮೃತ್ಯುದೇವನಾದ ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಹೀಗಾಗಿಯೇ ಪಂಚಕ ಕಾಲದಲ್ಲಿ ಈ ದಿಕ್ಕಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಒಂದು ವೇಳೆ ಹೋಗಬೇಕಾದರೂ ಮೊಸರು ತಿಂದು ಮನೆಯಿಂದ ಹೊರಡಬೇಕು.
ಪಂಚಕ ಅವಧಿಯಲ್ಲಿ ಮನೆಗೆ ಹೊಸ ಛಾವಣಿ ಹಾಕಬಾರದು. ಈ ರೀತಿ ಮಾಡುವುದರಿಂದ ಮನೆಯವರಲ್ಲಿ ಕಲಹಗಳು ಹೆಚ್ಚಾಗುತ್ತವೆ. ಇದರಿಂದ ಧನಹಾನಿ, ಸಂಸಾರದಲ್ಲಿ ಕಲಹಗಳು ಹೆಚ್ಚಾಗುತ್ತವೆ ಎನ್ನಲಾಗಿದೆ. ಆದ್ದರಿಂದ ಈ ಅಶುಭ ಸಮಯ ಮುಗಿದ ನಂತರವೇ ಈ ಕೆಲಸ ಮಾಡಿ.
ಇದನ್ನೂ ಓದಿ: ಶಿವರಾತ್ರಿಯಂದೇ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚಿರತೆಗಳು..!
ಪಂಚಕ ಎಷ್ಟು ಕಾಲ ಇರುತ್ತದೆ?
ಹಿಂದೂ ಪಂಚಾಗದ ಪ್ರಕಾರ, ಈ ತಿಂಗಳ ಪಂಚಕ ಫೆಬ್ರವರಿ 20ರಂದು ಬೆಳಗ್ಗೆ 1.14ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆ.24ರ ಶುಕ್ರವಾರದಂದು 3.44ಕ್ಕೆ ಕೊನೆಗೊಳ್ಳುತ್ತದೆ. ಸೋಮವಾರ ಆರಂಭವಾಗುವುದರಿಂದ ಇದನ್ನು ರಾಜ ಪಂಚಕವೆಂದು ಕರೆಯಲಾಗುವುದು. ಈ ಸಮಯದಲ್ಲಿ ನೀವು ಹೊಸ ಕಾರ್ಯ ಪ್ರಾರಂಭಿಸುವುದನ್ನು ತಪ್ಪಿಸಬೇಕು. ಆದರೆ ಈಗಾಗಲೇ ನಡೆಯುತ್ತಿರುವ ಕಾರ್ಯ ಮಾಡಲು ಯಾವುದೇ ಅಡ್ಡಿಯಿಲ್ಲ
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.