Plant For Wealth: ಈ ಸಸ್ಯ ಮನೆಯಲ್ಲಿ ಧನವೃಷ್ಟಿಗೆ ಕಾರಣ! ಯಾವ ಸಸ್ಯ ತಿಳಿಯಲು ಸಂಪೂರ್ಣ ವರದಿ ಓದಿ

This Plant Will Make You Rich - ಈ ಹೂವಿನ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಪಿತೃ ದೋಷ ಮತ್ತು ವಾಸ್ತು ದೋಷವನ್ನು ನಿವಾರಿಸುತ್ತದೆ. ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ಬಹಳಷ್ಟು ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ.

Written by - Nitin Tabib | Last Updated : Feb 13, 2022, 04:36 PM IST
  • ಮಯೂರ್ಶಿಖಾ ಸಸ್ಯವು ತುಂಬಾ ಉಪಯುಕ್ತ ಸಸ್ಯವಾಗಿದೆ
  • ಈ ಗಿಡದ ಹೂವುಗಳು ನವಿಲಿನ ಕಿರೀಟದಂತಿರುತ್ತವೆ
  • ಮನೆಯಲ್ಲಿ ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ
Plant For Wealth: ಈ ಸಸ್ಯ ಮನೆಯಲ್ಲಿ ಧನವೃಷ್ಟಿಗೆ ಕಾರಣ! ಯಾವ ಸಸ್ಯ ತಿಳಿಯಲು ಸಂಪೂರ್ಣ ವರದಿ ಓದಿ title=
Morshikha Plant (File Photo)

ನವದೆಹಲಿ: Mayurshikha Plant Benefits - ವಾಸ್ತು ಶಾಸ್ತ್ರ (Vastu Shastra) ಅಥವಾ ಧರ್ಮದ ಪ್ರಕಾರ ಮಂಗಳಕರವೆಂದು ಪರಿಗಣಿಸುವ ಮರ-ಗಿಡಗಳ ಹೆಸರು ಕೇಳಿದ ತಕ್ಷಣ ತುಳಸಿ, ಬಾಳೆಹಣ್ಣು, ಅಶ್ವತ್ಥ ಮರ ಇತ್ಯಾದಿ ಹೆಸರುಗಳು ನೆನಪಿಗೆ ಬರುತ್ತವೆ. ಈ ಸಸ್ಯಗಳು ಸಹ ಪೂಜಿಸಲ್ಪಡುತ್ತವೆ ಮತ್ತು ಜೀವನದ ಅನೇಕ ತೊಂದರೆಗಳನ್ನು ತೆಗೆದುಹಾಕುವಲ್ಲಿ ಅವು ಸಹಾಯಕವಾಗಿವೆ. ಆದರೆ ಇವುಗಳ ಹೊರತಾಗಿ ಇನ್ನೂ ಕೆಲವು ಸಸ್ಯಗಳು ಕೂಡ ತುಂಬಾ ಉಪಯುಕ್ತವಾಗಿವೆ. ಮನೆಯಲ್ಲಿ ಅವುಗಳು ಇದ್ದರೆ ಅಪಾರ ಹಣ ಮತ್ತು ಸಂತೋಷವನ್ನು ಅವು ತರುತ್ತವೆ. ಆಶ್ಚರ್ಯಕರ ವಿಷಯವೆಂದರೆ ಈ ಸಸ್ಯಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇಂತಹುದೇ ಒಂದು ಸಸ್ಯ ಎಂದರೆ ಅದು ಮಯೂರ್ಶಿಖಾ ಪ್ಲಾಂಟ್ ಮತ್ತು ಇಂಗ್ಲಿಷ್ನಲ್ಲಿ ಅದಕ್ಕೆ ಪೀಕಾಕ್ಸ್ ಟೈಲ್ ಪ್ಲಾಂಟ್ ಎಂದು ಕರೆಯುತ್ತಾರೆ.

ಇದರ ಹೂವುಗಳು ತುಂಬಾ ಸುಂದರವಾಗಿರುತ್ತವೆ (Mayurshikha Medicine)
ಮಯೂರ್ಶಿಖಾ ಸಸ್ಯದ (Morshikha Plant) ಹೂವುಗಳು ತುಂಬಾ ಸುಂದರವಾರುತ್ತವೆ. ಇವು ನವಿಲಿನ ತಲೆಯ ತುದಿಯಲ್ಲಿರುವ ತುರಾಯಿಯಂತೆ ಕಾಣಿಸುತ್ತವೆ ಮತ್ತು ಅದರ ಎಲೆಗಳು ನವಿಲು ಗರಿಗಳಂತೆ ಕಾಣುತ್ತವೆ. ಈ ಸಸ್ಯವು ತನ್ನ ಸೌಂದರ್ಯದೊಂದಿಗೆ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದೆ ವೇಳೆ ಅದು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ. ಏಕೆಂದರೆ ಈ ಸಸ್ಯವನ್ನು ನೆಟ್ಟ ನಂತರ, ಮನೆಯಲ್ಲಿ ಧನವೃಷ್ಟಿಯಾಗಲು ಆರಂಭಿಸುತ್ತದೆ.

ಇದನ್ನೂ ಓದಿ-Weekly Horoscope : ಈ ವಾರ ಯಾರಿಗೆ ಒಲಿಯಲಿದೆ ಅದೃಷ್ಟ : ಇಲ್ಲಿದೆ ಈ ವಾರದ 12 ರಾಶಿಗಳ ಭವಿಷ್ಯ!

ಈ ಸಸ್ಯ ಮನೆಯಲ್ಲಿ ಹಣ ಮತ್ತು ಧನಾತ್ಮಕತೆಯನ್ನು ತರುತ್ತದೆ
ಮಯೂರ್ಶಿಖಾ ಸಸ್ಯವು ಅನೇಕ ರೀತಿಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಇದು ಮನೆಯ ನಕಾರಾತ್ಮಕತೆಯನ್ನು ನಿವಾರಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಈ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವ ಮೂಲಕ, ಪಿತೃದೋಷದಿಂದ ಮುಕ್ತಿ ಪಡೆಯಬಹುದು. ಇದರಿಂದ ದುಷ್ಟಶಕ್ತಿಗಳು ಮನೆಯಿಂದ ದೂರ ಉಳಿಯುತ್ತವೆ. ಮನೆಯ ಜನರ ಪ್ರಗತಿ ಮತ್ತು ಅವರ ಆದಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ-Health Tips: ಯಾವಾಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಈ 5 ಜ್ಯೂಸ್ ಸೇವಿಸಿರಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Kiss Day 2022: ಶರೀರದ ವಿವಿಧ ಭಾಗಗಳ ಮೇಲೆ ನೀಡಲಾಗುವ ಮುತ್ತಿನ ಹಿಂದೆಯೂ ವಿಶೇಷತೆ ಅಡಗಿದೆ, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News