ಅಡುಗೆ ಮನೆಯ ಉಪ್ಪು ಜಾತಕ ದೋಷ ನಿವಾರಣೆಗೂ ಸಹಕಾರಿ, ಅಳವಡಿಸುವುದು ಹೇಗೆ ತಿಳಿಯಿರಿ

ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಉಪ್ಪನ್ನು ಬಳಸಲಾಗುತ್ತದೆ. ಮನೆಯಲ್ಲಿ ವಾಸ್ತು ದೋಷದಿಂದ ಉಂಟಾಗುವ ಸಮಸ್ಯೆಗಳಿಗೂ ಉಪ್ಪು ಪರಿಹಾರವಾಗಬಹುದು.

Written by - Ranjitha R K | Last Updated : Sep 17, 2021, 03:35 PM IST
  • ಉಪ್ಪು ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ
  • ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉಪ್ಪು ಪರಿಹಾರವಾಗಬಹುದು
  • ಉಪ್ಪು ರಾಹುವಿನ ಕೆಟ್ಟ ಪರಿಣಾಮವನ್ನು ತೆಗೆದುಹಾಕುತ್ತದೆ
ಅಡುಗೆ ಮನೆಯ ಉಪ್ಪು ಜಾತಕ ದೋಷ ನಿವಾರಣೆಗೂ ಸಹಕಾರಿ, ಅಳವಡಿಸುವುದು ಹೇಗೆ ತಿಳಿಯಿರಿ

ನವದೆಹಲಿ : ವಾಸ್ತು ಶಾಸ್ತ್ರ (Vastu Shastra) ಮತ್ತು ಜ್ಯೋತಿಷ್ಯ (Astrology) ಎರಡರಲ್ಲೂ ಉಪ್ಪಿಗೆ ಬಹಳ ಮಹತ್ವವಿದೆ. ಉಪ್ಪನ್ನು ಅನೇಕ ಸಮಸ್ಯೆಗಳ ಪರಿಹಾರವಾಗಿ ಬಳಸಲಾಗುತ್ತದೆ.  ವಾಸ್ತು ದೋಷಗಳಿಂದ (Vastu dosha) ಉಂಟಾಗುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಉಪ್ಪನ್ನು ಬಳಸಲಾಗುತ್ತದೆ. ಇದರ ಹೊರತಾಗಿ, ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿಯೂ ಉಪ್ಪು ತುಂಬಾ ಉಪಯುಕ್ತವಾಗಿದೆ. ಉಪ್ಪಿಗೆ ರಾಹು ಸಂಬಂಧವಿದೆ. ಒಂದು ವೇಳೆ ರಾಹು ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಉಪ್ಪನ್ನು ಬಳಸಿ ಕೆಲವು ಪರಿಹಾರಗಳನ್ನು ಮಾಡಬಹುದು.   

ಉಪ್ಪಿಗೆ ಪ್ರಮುಖ ಪರಿಹಾರಗಳು :
ಋಣಾತ್ಮಕ ಶಕ್ತಿಯನ್ನು (Negetive energy) ತೆಗೆದುಹಾಕಲು ಉಪ್ಪನ್ನು ಬಳಸಲಾಗುತ್ತದೆ.  ಮನೆಯಲ್ಲಿ ವಾಸ್ತು ದೋಷದಿಂದ ಉಂಟಾಗುವ ಸಮಸ್ಯೆಗಳಿಗೂ ಉಪ್ಪು ಪರಿಹಾರವಾಗಬಹುದು. ಇದಕ್ಕಾಗಿ, ಬಾತ್ ರೂಮಿನಲ್ಲಿ (Bath room) ಉಪ್ಪನ್ನು ಗಾಜಿನ ಡಬ್ಬದಲ್ಲಿರಿಸಿ. ಕೆಲವು ದಿನಗಳಲ್ಲಿ ಈ ಉಪ್ಪನ್ನು ಬದಲಿಸುತ್ತಿರಿ. ಹೀಗೆ ಮಾಡಿದರೆ, ನಕಾರಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : Astrology: ಅದ್ಬುತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು..!

ರಾಹುವಿನ ಕೆಟ್ಟ ಪರಿಣಾಮವನ್ನು ತೆಗೆದುಹಾಕಲು, ಮನೆಯ ಯಾವುದೇ ಮೂಲೆಯಲ್ಲಿ ಉಪ್ಪನ್ನು (Salt) ಗಾಜಿನ ಪಾತ್ರೆಯಲ್ಲಿ ತುಂಬಿಸಿ ಇಡಬೇಕು. ಇದರಿಂದ ರಾಹು ಕೆಟ್ಟ ಫಲಗಳನ್ನು ನೀಡುವುದನ್ನು ನಿಲ್ಲಿಸುತ್ತಾನೆ ಎಂದು ಹೇಳಲಾಗಿದೆ. 

ರಾಹುವಿನ ಅಶುಭ ಪರಿಣಾಮದಿಂದ ಮಾನಸಿಕ ಒತ್ತಡದಲ್ಲಿದ್ದರೆ, ಸ್ನಾನದ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಸ್ನಾನ ಮಾಡಬೇಕಂತೆ. ಇದಲ್ಲದೇ ಉಗುರುಬೆಚ್ಚಗಿನ ನೀರಿಗೆ (warm water) ಅರ್ಧ ಚಮಚ ಉಪ್ಪನ್ನು ಹಾಕಿ  ಆ ನೀರನ್ನು ಕೈ ಕಾಲುಗಳಿಗೆ ಹಾಕಿದರೆ ತಕ್ಷಣವೇ ಒತ್ತಡ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : Home Vastu: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ? ಈ 4 ಚಿಹ್ನೆಗಳೊಂದಿಗೆ ಸುಲಭವಾಗಿ ಕಂಡುಹಿಡಿಯಿರಿ

ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉಪ್ಪಿನ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ಗಾಜಿನ ಲೋಟದಲ್ಲಿ ನೀರು ಮತ್ತು ಉಪ್ಪನ್ನು ಬೆರೆಸಿ ಮನೆಯ ನೈಋತ್ಯ ಭಾಗದ ಮಧ್ಯದಲ್ಲಿ ಇರಿಸಿ ಮತ್ತು ಅದರ ಹಿಂದೆ ಕೆಂಪು ಬಣ್ಣದ ಬಲ್ಬನ್ನು ಹಚ್ಚಿ. ನೀರು (Water) ಬತ್ತಿದಾಗಲೆಲ್ಲ, ಲೋಟವನ್ನು ಮತ್ತೆ ತೊಳೆದು ಉಪ್ಪು ಮತ್ತು ನೀರಿನಿಂದ ತುಂಬಿಸಿ. ಇದು ಶೀಘ್ರದಲ್ಲೇ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. 

ವ್ಯಾಪಾರದಲ್ಲಿ ಪ್ರಗತಿಗಾಗಿ, ನೀರಿನಲ್ಲಿ ಬೆರೆಸಿ ಉಪ್ಪನ್ನು ಕೆಂಪು ಬಟ್ಟೆಯ ಕಚೇರಿ, ಅಂಗಡಿಯ ಮುಖ್ಯ ದ್ವಾರ ಮತ್ತು ಮನೆಯ ಮುಖ್ಯ ದ್ವಾರದ ಮೇಲೆ ನೇತು ಹಾಕಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯವಹಾರದಲ್ಲಿ ಲಾಭ ಬರಲು ಆರಂಭವಾಗುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಹಿಂದೂಸ್ತಾನ್  ಇದನ್ನೂ ದೃಢೀಕರಿಸುವುದಿಲ್ಲ )

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News