Astro Tips: ಅರಿಶಿನದ ಈ ಪರಿಹಾರಗಳಿಂದ ಪ್ರಗತಿಯ ಜೊತೆಗೆ ಹಣದ ಮಳೆಯಾಗಲಿದೆ!

Turmeric Remedies: ಜ್ಯೋತಿಷ್ಯದಲ್ಲಿ ಅರಿಶಿನ ತಂತ್ರಗಳನ್ನು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇವುಗಳಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಅದೇ ರೀತಿ ಇದನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. 

Written by - Puttaraj K Alur | Last Updated : Jan 11, 2023, 06:43 PM IST
  • ಆಯುರ್ವೇದದಲ್ಲಿ ಅರಿಶಿನಕ್ಕೆ ಬಹಳ ಮಹತ್ವದ ಸ್ಥಾನವಿದೆ
  • ಹಿಂದೂ ಧರ್ಮದಲ್ಲಿ ಅರಿಶಿನವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ
  • ಅರಿಶಿನದಿಂದ ದೇವರನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳಿವೆ
Astro Tips: ಅರಿಶಿನದ ಈ ಪರಿಹಾರಗಳಿಂದ ಪ್ರಗತಿಯ ಜೊತೆಗೆ ಹಣದ ಮಳೆಯಾಗಲಿದೆ! title=
ಅರಿಶಿನದ ಪ್ರಯೋಜನಗಳು

ನವದೆಹಲಿ: ಕೆಲವೊಮ್ಮೆ ಅದೃಷ್ಟದ ಕೊರತೆಯಿಂದ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿ ವೈಫಲ್ಯವನ್ನು ಎದುರಿಸುತ್ತಾನೆ. ಇದಕ್ಕೆ ಜನರ ವಕ್ರದೃಷ್ಟಿಯೂ ಕಾರಣವಾಗಿರಬಹುದು. ಆದರೆ ಜ್ಯೋತಿಷ್ಯದಲ್ಲಿ ಅದೃಷ್ಟವನ್ನು ಎಚ್ಚರಗೊಳಿಸುವ ಮತ್ತು ವಕ್ರದೃಷ್ಟಿಯ ದೋಷ ನಿವಾರಣೆಗೆ ಹಲವು ಮಾರ್ಗಗಳ ಬಗ್ಗೆ ಹೇಳಲಾಗಿದೆ. ಈ ಪರಿಹಾರಗಳಲ್ಲಿ ಅರಿಶಿನ ಕೂಡ ಒಂದು.

ಆಯುರ್ವೇದದಲ್ಲಿ ಅರಿಶಿನಕ್ಕೆ ಬಹಳ ಮಹತ್ವದ ಸ್ಥಾನವಿದೆ. ಅದೇ ರೀತಿ ಇದನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಅನೇಕ ವಿಧದ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ಕೆಲವು ಪರಿಣಾಮಕಾರಿ ಪರಿಹಾರಗಳು ಅಥವಾ ಅರಿಶಿನ ತಂತ್ರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಅದೃಷ್ಟವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: Horoscope predictions : ಹಣಕಾಸಿನ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕು ಈ 3 ರಾಶಿಯವರು!

ಅರಿಶಿನದ ಗಂಟು

ಬುಧವಾರ ಅಥವಾ ಗುರುವಾರದಂದು ಗಣೇಶನಿಗೆ ಅರಿಶಿನದ ಗಂಟಿನ ಮಾಲೆಯನ್ನು ಅರ್ಪಿಸಿ. ಇದು ನಿಮ್ಮ ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತದೆ. ಕೆಂಪು ಬಟ್ಟೆಯಲ್ಲಿ ಅರಿಶಿನದ ಗಂಟನ್ನು ಕಟ್ಟಿ ಕಮಾನಿನಲ್ಲಿಟ್ಟು ಪ್ರತಿದಿನ ಪೂಜಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗಿ ತನ್ನ ಆಶೀರ್ವಾದವನ್ನು ನಿಮಗೆ ನೀಡುತ್ತಾಳೆ.

ಕೆಟ್ಟ ದೃಷ್ಟಿ

ಅರಿಶಿನವು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಇದಕ್ಕಾಗಿಯೇ ಅರಿಶಿನ ತಂತ್ರಗಳನ್ನು ಗುರುವಾರ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ದುಷ್ಟರ ಕಣ್ಣನ್ನು ತಪ್ಪಿಸಲು ಅರಿಶಿನದ ಗಂಟು ಕಟ್ಟಿಕೊಳ್ಳಿ ಮತ್ತು ಅದನ್ನು ನಿಮ್ಮ ತಲೆಯ ಮೇಲೆ ಇಟ್ಟುಕೊಂಡು ಮಲಗಿಕೊಳ್ಳಿ. ಇದರಿಂದ ನಿಮ್ಮ ಮೇಲಿನ ಕೆಟ್ಟ ದೃಷ್ಟಿ ದೂರವಾಗುತ್ತದೆ.

ಮದುವೆಯಲ್ಲಿನ ತೊಂದರೆ

ದೇವಗುರು ಬೃಹಸ್ಪತಿಯು ಅರಿಶಿನದ ಪರಿಹಾರಗಳಿಂದ ಸಂತುಷ್ಟರಾಗಬಹುದು. ಇದಕ್ಕಾಗಿ ಗುರುವಾರ ಬೇಳೆ ಮತ್ತು ಅರಿಶಿನವನ್ನು ದಾನ ಮಾಡಿ. ಇದನ್ನು ಮಾಡುವುದರಿಂದ ಭಗವಾನ್ ವಿಷ್ಣುವೂ ಪ್ರಸನ್ನನಾಗುತ್ತಾನೆ. ಮತ್ತೊಂದೆಡೆ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿ ಮೂರ್ತಿಗಳ ಮುಂದೆ ಪ್ರತಿದಿನ ಒಂದು ಚಿಟಿಕೆ ಅರಿಶಿನವನ್ನು ಅರ್ಪಿಸುವುದರಿಂದ ಮದುವೆಯಲ್ಲಿನ ತೊಂದರೆಗಳು ದೂರವಾಗುತ್ತವೆ.

ಸಾಲದ ಹಣ

ಸಾಲವಾಗಿ ಬೇರೆಯವರಿಗೆ ನೀಡಿದ ಹಣವನ್ನು ಮರಳಿ ಪಡೆಯಲು ಅಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ಅರಿಶಿನದೊಂದಿಗೆ ಕಟ್ಟಿ ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಹಣ ವಾಪಸ್ ಸಿಗುತ್ತದೆ. ಯಾವುದೇ ಶುಭ ಕಾರ್ಯಕ್ಕಾಗಿ ಮನೆಯಿಂದ ಹೊರಡುವ ಮುನ್ನ ಗಣೇಶನಿಗೆ ಅರಿಶಿನದ ತಿಲಕವನ್ನು ಹಚ್ಚಿ ನಂತರ ನಿಮ್ಮ ಹಣೆಯ ಮೇಲೆಯೂ ಹಚ್ಚಿಕೊಳ್ಳಿರಿ. ಇದರಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಇದನ್ನೂ ಓದಿ: Astro tips: ಮನಿ ಪ್ಲಾಂಟ್ ನೆಡುವಾಗ ಇಂತಹ ತಪ್ಪು ಮಾಡಿದ್ರೆ ಬಡವರಾಗುತ್ತಾರೆ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News