September ತಿಂಗಳಿನಲ್ಲಿ ಹುಟ್ಟಿದ ಜನರು Perfectionist ಆಗಿರುತ್ತಾರಂತೆ, ಇವರ ಇತರ ವೈಶಿಷ್ಟ್ಯಗಳೇನು ತಿಳಿಯೋಣ ಬನ್ನಿ

September Born People - ಸೆಪ್ಟೆಂಬರ್ (September Month) ತಿಂಗಳಲ್ಲಿ ಜನಿಸಿದ ಜನರು ಹಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ.  ವೃತ್ತಿ (Career),ವೈವಾಹಿಕ ಜೀವನದ (Married Life)ವಿಷಯದಲ್ಲಿಯೂ ಅವರು ಅದೃಷ್ಟವಂತರು. ಈ ಜನರು ರಾಜಕೀಯ, ಸಂಶೋಧನೆಯಲ್ಲಿ ಉತ್ತಮ ವೃತ್ತಿಜೀವನ ನಡೆಸುತ್ತಾರೆ.

Written by - Nitin Tabib | Last Updated : Sep 1, 2021, 11:50 AM IST
  • ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಜನರು ಪರ್ಫೆಕ್ಷನಿಸ್ಟ್ ಹಾಗೂ ದಿಲ್ದಾರ್ ಆಗಿರುತ್ತಾರೆ.
  • ಜೀವನದಲ್ಲಿ ಇವರು ಉನ್ನತ ಸ್ಥಾನ ಅಲಂಕರಿಸುತ್ತಾರೆ.
  • ಇವರಿಗೆ ಉತ್ತಮ ಜೀವನ ಸಂಗಾತಿ ಸಿಗುತ್ತಾರೆ.
September ತಿಂಗಳಿನಲ್ಲಿ ಹುಟ್ಟಿದ ಜನರು Perfectionist ಆಗಿರುತ್ತಾರಂತೆ, ಇವರ ಇತರ ವೈಶಿಷ್ಟ್ಯಗಳೇನು ತಿಳಿಯೋಣ ಬನ್ನಿ  title=
September Born People (File Photo)

ನವದೆಹಲಿ: September Born People - ಪ್ರತಿಯೊಂದು ತಿಂಗಳಿನಲ್ಲಿ ಜನಿಸಿರುವ ಜನರು ತಮ್ಮದೇ ಆದ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಈ ಗುಣಗಳು ಅವರ ಜೀವನ, ವ್ಯಕ್ತಿತ್ವ ಹಾಗೂ ನಡವಳಿಕೆಯಲ್ಲಿಯೂ ಕೂಡ ಕಂಡುಬರುತ್ತದೆ. ಇದೇ ರೀತಿ ಸೆಪ್ಟೆಂಬರ್ ತಿಂಗಳಿನಲ್ಲಿ ಜನಿಸಿದ ಜನರ ಕುರಿತು ಹೇಳುವುದಾದರೆ, ಸಂಖ್ಯಾ ಶಾಸ್ತ್ರದ (Numarology) ಪ್ರಕಾರ ವರ್ಷದ 9 ನೇ ತಿಂಗಳಿನಲ್ಲಿ ಇವರ ಜನನ. ಇದಲ್ಲದೆ ಜ್ಯೋತಿಷ್ಯದ (Jyotishya Shastra) ಪ್ರಕಾರ ಸೆಪ್ಟೆಂಬರ್ ತಿಂಗಳು ಮಂಗಳ ಗ್ರಹಕ್ಕೆ ಸಂಬಂಧಿಸಿದೆ ಎನ್ನಲಾಗುತ್ತದೆ. ಈ ಗ್ರಹವನ್ನು ಧೈರ್ಯ ಮತ್ತು ಶಕ್ತಿಯ ಅಂಶ ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ತಿಂಗಳಿನಲ್ಲಿ ಜನಿಸಿದ ಜನರು ತುಂಬಾ ಧೈರ್ಯಶಾಲಿಗಳು ಹಾಗೂ ತುಂಬಾ ಬಹಿರಂಗವಾಗಿ ಮಾತನಾಡುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಇವರು ತಮ್ಮದೇ ಆಧ ಛಾಪು ಮೂಡಿಸುತ್ತಾರೆ.

ತುಂಬಾ ಪರ್ಫೆಕ್ಷನಿಸ್ಟ್ ಆಗಿರುತ್ತಾರೆ (Perfectionists People)
ಈ ತಿಂಗಳಲ್ಲಿ ಜನಿಸಿದ ಜನರು ವೃತ್ತಿಜೀವನದ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ  ಮತ್ತು ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆಯನ್ನು ಮಾಡುತ್ತಾರೆ.  ಈ ಜನರು ಜೀವನದಲ್ಲಿ ಉತ್ತಮ ಸ್ಥಾನ-ಮಾನ  ಪಡೆಯುತ್ತಾರೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಜನಿಸಿದ ಜನರು ಸಂಶೋಧನೆ, ಶಿಕ್ಷಣ, ರಾಜಕೀಯದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಆದರೆ, ಅವರು ತಮ್ಮ ವಿರುದ್ಧ ಏನನ್ನೂ ಸಹಿಸಿಕೊಳ್ಳಲು ಶಕ್ತರಾಗಿರುವುದ್ದಿಲ್ಲ ಮತ್ತು ತಮ್ಮ ಮೇಲಿನ ಸೀಮಿತವನ್ನು ಕಳೆದುಕೊಂಡು ದೊಡ್ಡ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ-Herbal Body Wash: ಚರ್ಮ ಸುಂದರವಾಗಿರಲು ಸಾಬೂನಿಂದಲ್ಲ ಈ ವಸ್ತುವನ್ನು ಬಳಸಿ ಸ್ನಾನ ಮಾಡಿ

ಇವರ ವೈವಾಹಿಕ ಜೀವನ ತುಂಬಾ ಸುಖಮಯವಾಗಿರುತ್ತದೆ (Specialities of September Born )
ಇವರು ಆಯ್ಕೆಮಾಡುವ ಅಥವಾ ಇವರಿಗೆ ಸಿಗುವ ಜೀವನ ಸಂಗಾತಿಯಲ್ಲಿ ಇವರಿಗೆ ಮೆಚ್ಚುಗೆಯಾಗುವ ಎಲ್ಲಾ ಗುಣಧರ್ಮಗಳು ಇರುತ್ತವೆ. ಇದೇ ಕಾರಣದಿಂದ ಅರೆಂಜ್ ಮ್ಯಾರೇಜ್  ನಲ್ಲಿಯೂ ಕೂಡ ಇವರಿಗೆ ಹೊಂದಾಣಿಕೆಯಾಗುವ ಲೈಫ್ ಪಾರ್ಟ್ನರ್ ಸಿಗುತ್ತಾಳೆ. ಸಾಮಾನ್ಯವಾಗಿ ಇವರು ತಮ್ಮ ಸಂಪೂರ್ಣ ವೈವಾಹಿಕ ಜೀವನವನ್ನು ಸುಖದಿಂದ ಕಳೆಯುತ್ತಾರೆ.

ಇದನ್ನೂ ಓದಿ-Weight Loss: ತ್ವರಿತ ತೂಕ ನಷ್ಟದ ಅನ್ವೇಷಣೆಯಲ್ಲಿ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡದಿರಿ, ವಾರದಲ್ಲಿ ಇಷ್ಟು ಮಾತ್ರ ತೂಕ ಇಳಿಸಿ

ಶುಭ ಅಂಕ - 4, 5, 16, 90, 29
ಶುಭ ಬಣ್ಣ- ಕಂದು, ನೀಲಿ, ಹಸಿರು
ಶುಭ ದಿನ - ಬುಧವಾರ
ಶುಭ ರತ್ನ - ಪಚ್ಚೆ

ಇದನ್ನೂ ಓದಿ-Palmistry: ಅಂಗೈಯಲ್ಲಿರುವ ಈ ಚಿಹ್ನೆ ಅಪಾರ ಧನಪ್ರಾಪ್ತಿಯ ಸಂಕೇತ ನೀಡುತ್ತದೆ, ನಿಮ್ಮ ಕೈಯಲ್ಲೂ ಇದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News