ಈ ಎರಡು ರಾಶಿಯವರಿಗೆ ಶೀಘ್ರವೇ ಶುರುವಾಗಲಿದೆ ಎರಡೂವರೆ ವರ್ಷದ ಶನಿ ಕಾಟ

ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಧೈಯ್ಯಾ ಪ್ರಾರಂಭವಾಗಲಿದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರ ಎರಡೂವರೆ ವರ್ಷದ ಶನಿ ದೆಸೆ ಕೊನೆಯಾಗಲಿದೆ.

Written by - Ranjitha R K | Last Updated : Jun 6, 2022, 05:38 PM IST
  • ಇತ್ತೀಚೆಗೆ, ಶನಿಯ ಹಿಮ್ಮುಖ ಚಲನೆ ಆರಂಭವಾಗಿದೆ.
  • 2 ರಾಶಿಯವರಿಗೆ ಶನಿ ದೆಸೆ ಆರಂಭವಾಗಲಿದೆ.
  • ಇನ್ನೆರಡು ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ ಸಿಗಲಿದೆ
ಈ ಎರಡು ರಾಶಿಯವರಿಗೆ ಶೀಘ್ರವೇ ಶುರುವಾಗಲಿದೆ ಎರಡೂವರೆ ವರ್ಷದ ಶನಿ ಕಾಟ  title=
Shani Gochar July 2022 (file photo)

ಬೆಂಗಳೂರು : ಶನಿಯ ಸ್ಥಾನದಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಕೂಡ ದೊಡ್ಡ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತದೆ. ಇತ್ತೀಚೆಗೆ, ಶನಿಯ ಹಿಮ್ಮುಖ ಚಲನೆ ಆರಂಭವಾಗಿದೆ. ಜುಲೈ 12 ರಂದು ಶನಿಯು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿಯು ಪ್ರಸ್ತುತ ಕುಂಭದಲ್ಲಿದ್ದು ರಾಶಿಯನ್ನು ಬದಲಾಯಿಸುವ ಮೂಲಕ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ಶನಿಯ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ಕಾಟ 2 ರಾಶಿಯವರಿಗೆ ಕೊನೆಯಾಗುತ್ತದೆ. ಆದರೆ 2 ರಾಶಿಯವರಿಗೆ ಶನಿ ದೆಸೆ ಆರಂಭವಾಗಲಿದೆ.  

ಈ ಎರಡು ರಾಶಿಯವರಿಗೆ ಆರಂಭವಾಗಲಿದೆ ಶನಿ ದೆಸೆ : 
ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಧೈಯ್ಯಾ ಪ್ರಾರಂಭವಾಗಲಿದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರ ಎರಡೂವರೆ ವರ್ಷದ ಶನಿ ದೆಸೆ ಕೊನೆಯಾಗಲಿದೆ. ಇದೀಗ ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯಾ ನಡೆಯುತ್ತಿದೆ. ಶನಿಯು ಜುಲೈ 12 ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಮಕರ ರಾಶಿಯನ್ನು ಪ್ರವೇಶಿಸಿ, ಜನವರಿ 17 ರವರೆಗೆ ಇದೇ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ, ಮಿಥುನ ಮತ್ತು ತುಲಾ ರಾಶಿಯವರು ಶನಿಯ ಪ್ರಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ, ಜನವರಿ 17 ರಂದು ಶನಿಯು ಮತ್ತೆ ರಾಶಿಯನ್ನು ಬದಲಾಯಿಸಿದ ತಕ್ಷಣ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ದೆಸೆ ಮತ್ತೆ ಶುರುವಾಗುತ್ತದೆ. ನಂತರ ಮಾರ್ಚ್ 29, 2025 ರವರೆಗೆ ಈ ಎರಡು ರಾಶಿಯವರು ಶನಿಯ ಕಾಟವನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ: 9 ದಿನಗಳ ಬಳಿಕ ಈ ಮೂರು ರಾಶಿಯವರ ಭಾಗ್ಯ ಬೆಳೆಗಲಿದ್ದಾನೆ ಸೂರ್ಯ

2022ರ ಶನಿಗ್ರಹದ ವಿಶೇಷ :
2022 ರ ವರ್ಷವು ಶನಿಗ್ರಹದ ವಿಷಯದಲ್ಲಿ ಬಹಳ ವಿಶೇಷವಾಗಿದೆ. ಈ ವರ್ಷ ಶನಿಯ ಸ್ಥಾನದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿವೆ. ಎರಡೂವರೆ ವರ್ಷದಲ್ಲಿ ರಾಶಿಚಕ್ರವನ್ನೇ ಬದಲಿಸದ ಈ ಗ್ರಹ, ಈ ವರ್ಷ ಏಪ್ರಿಲ್ 29ರಂದು ತನ್ನ ರಾಶಿಯನ್ನು ಬದಲಿಸಿದೆ. 30 ವರ್ಷಗಳ ನಂತರ, ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದೆ. ಇದರ ನಂತರ, ಶನಿಯು ಜೂನ್ 5 ರಂದು ಹಿಮ್ಮುಖ ಚಲನೆ ಆರಂಭಿಸಿದೆ. ಇದೀಗ ಜುಲೈ 12 ರಂದು ಮತ್ತೆ ಕುಂಭ ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.  

ಧೈಯ್ಯಾ ಸಮಯದಲ್ಲಿ ಈ ಕೆಲಸವನ್ನು ಮಾಡಿ  : 
ಶನಿಯ ಮಹಾದಶವನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಈ ಸಮಯದಲ್ಲಿ, ಶನಿಯ ಸಾಡೇಸಾತಿ ಅಥವಾ ಧೈಯ್ಯಾದಿಂದ ಬಳಲುತ್ತಿರುವ ಜನರಿಗೆ ಬಹಳಷ್ಟು ತೊಂದರೆಗಳನ್ನು ನೀಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಶನಿಗ್ರಹದ ದುಷ್ಪರಿಣಾಮಗಳಿಂದ ಮುಕ್ತಿ ಹೊಂದಲು ಶುಭ ಕಾರ್ಯಗಳನ್ನು ಮಾಡಿ. ಬಡವರಿಗೆ ಸಹಾಯ ಮಾಡಿ. ಮನೆಯಿಲ್ಲದ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ನೀಡಿ. ಶನಿವಾರದಂದು ಶನಿ ದೇವಸ್ಥಾನದಲ್ಲಿ ಅಥವಾ ಆಶ್ವಥ ಮರದ ಕೆಳಗೆ ಎಳ್ಳೆಣ್ಣೆ  ದೀಪವನ್ನು ಬೆಳಗಿಸಿ. 

ಇದನ್ನೂ ಓದಿ: Vastu Tips For Tulsi : ತುಳಸಿ ಗಿಡದ ಜೊತೆಗೆ ಈ ಸಸ್ಯ ನೆಡಿ, ಇದು ಅಪಾರ ಸಂಪತ್ತು- ಯಶಸ್ಸು ನೀಡುತ್ತದೆ!

 

( ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News