ಈ ದಿನದಂದು ತಪ್ಪಿಯೂ ಬಂಗಾರ ಖರೀದಿಸಬೇಡಿ.! ಮನೆಯಲ್ಲಿ ಉಳಿಯುವುದೇ ಇಲ್ಲ ಸಂಪತ್ತು

Gold Shopping Auspicious Day: ಚಿನ್ನವನ್ನು ಇಷ್ಟಪಡದವರು ಯಾರಿದ್ದಾರೆ ? ಚಿನ್ನ ಅಮೂಲ್ಯ ಮಾತ್ರವಲ್ಲ ಅದನ್ನು ಮಂಗಳಕರ ಎಂದು ಕೂಡಾ ಹೇಳಲಾಗುತ್ತದೆ. ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಾರೆ ಆದರೆ ಚಿನ್ನ ಖರೀದಿಗೂ ವಿಶೇಷ ದಿನ ಮತ್ತು ಮುಹೂರ್ತ ಇದೆ ಎನ್ನುವುದು ತಿಳಿದಿದೆಯಾ ? 

Written by - Ranjitha R K | Last Updated : Aug 11, 2022, 12:29 PM IST
  • ಹಿಂದೂ ಧರ್ಮದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
  • ಚಿನ್ನಕ್ಕೂ ಭಗವಾನ್ ಕುಬೇರನ ಉಗ್ರಾಣಕ್ಕೂ ಸಂಬಂಧವಿದೆ
  • ಚಿನ್ನ ಖರೀದಿ ಮಾಡುವಾಗ ಮಂಗಳಕರ ದಿನವನ್ನು ನೋಡಿಕೊಳ್ಳಬೇಕು
  ಈ ದಿನದಂದು ತಪ್ಪಿಯೂ ಬಂಗಾರ ಖರೀದಿಸಬೇಡಿ.! ಮನೆಯಲ್ಲಿ ಉಳಿಯುವುದೇ ಇಲ್ಲ ಸಂಪತ್ತು  title=
Gold Shopping Auspicious Day (file photo)

Gold Shopping Auspicious Day : ಹಿಂದೂ ಧರ್ಮದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.  ಚಿನ್ನಕ್ಕೂ ಭಗವಾನ್ ಕುಬೇರನ ಉಗ್ರಾಣಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಚಿನ್ನವನ್ನು ಶುಭ ಮುಹೂರ್ತದಲ್ಲಿಯೇ ಖರೀದಿಸಬೇಕು ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಮನೆಯ ಆರ್ಥಿಕ ಸ್ಥಿತಿಯು ಹದಗೆಡುತ್ತದೆ ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಚಿನ್ನ ಖರೀದಿ  ಮಾಡುವಾಗ ಮಂಗಳಕರ ದಿನವನ್ನು ನೋಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ಯಾವ ದಿನ ಚಿನ್ನವನ್ನು ಖರೀದಿಸಬೇಕು ಯಾವ ದಿನ ಖರೀದಿಸಬಾರದು ಎನ್ನುವುದನ್ನು ತಿಳಿಯೋಣ. 

ಒಲಿದು ಬರುವುದು ಅದೃಷ್ಟ : 
ಜನರು ಸಾಮಾನ್ಯವಾಗಿ ಅಕ್ಷಯ ತೃತೀಯದ ದಿನ ಚಿನ್ನವನ್ನು ಖರೀದಿಸುತ್ತಾರೆ. ಈ ದಿನ ಚಿನ್ನವನ್ನು ಖರೀದಿಸಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿಂದ ಅಕ್ಷಯ ತೃತೀಯದ ದಿನ ಬಂಗಾರವನ್ನು ಖರೀದಿಸಲಾಗುತ್ತದೆ. ಆದರೆ, ಅಕ್ಷಯ ತೃತೀಯದ ದಿನ ಕೂಡಾ ಚಿನ್ನ ಖರೀದಿಸುವಾಗ ದಿನ ಮತ್ತು ಶುಭ ಮುಹೂರ್ತವನ್ನು ಪರಿಗಣಿಸಿ ಚಿನ್ನವನ್ನು ಖರೀದಿಸಬೇಕು.

ಇದನ್ನೂ ಓದಿ : Numerology : ಈ ದಿನ ಹುಟ್ಟಿದ ಜನ ತುಂಬಾ ಸೀಕ್ರೇಟ್‌ ಮೆಂಟೇನ್‌ ಮಾಡ್ತಾರೆ!!

ಚಿನ್ನ ಖರೀದಿಗೆ ಈ ದಿನ ಸೂಕ್ತ : 
ವಾರದ ಪ್ರಕಾರ, ನೋಡುವುದಾದರೆ, ಭಾನುವಾರ ಮತ್ತು ಗುರುವಾರ ಚಿನ್ನವನ್ನು ಖರೀದಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಎರಡೂ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಲಕ್ಷ್ಮೀ ದೇವಿಯ ಜೊತೆಗೆ ಸೂರ್ಯನ ಆಶೀರ್ವಾದ ಕೂಡಾ ಸಿಗುತ್ತದೆ.

ಈ ದಿನ  ತಪ್ಪಿಯೂ ಬಂಗಾರ ಖರೀದಿ ಬೇಡ : 
ಚಿನ್ನವನ್ನು ಸೂರ್ಯ ದೇವರ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಶನಿ ನಡುವೆ ವಿಪರೀತ ದ್ವೇಷವಿದೆ. ಶನಿವಾರವನ್ನು ಶನಿದೇವನ ದಿನವೆಂದು ಪರಿಗಣಿಸಲಾಗಿದೆ. ಹಾಗಾಗಿ ಶನಿವಾರದಂದು ತಪ್ಪಿಯೂ ಕೂಡಾ ಚಿನ್ನವನ್ನು ಖರೀದಿಸಬಾರದು. ಶನಿವಾರದಂದು ಚಿನ್ನವನ್ನು ಖರೀದಿಸುವುದರಿಂದ ವ್ಯಕ್ತಿಗೆ ಸಾಕಷ್ಟು ನಷ್ಟವಾಗುತ್ತದೆ. ಮನೆಯ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. 

ಇದನ್ನೂ ಓದಿ : ರಕ್ಷಾ ದಾರ ಮೊದಲು ಕಟ್ಟಿದ್ದು ಯಾರು ಗೊತ್ತಾ? ಅಣ್ಣ ತಂಗಿಯರ ಸಂಬಂಧದಲ್ಲಿ ಇರಲಿಲ್ಲ ಈ ಪದ್ಧತಿ!

 

 ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News