ಸೂರ್ಯಗ್ರಹಣ: ಈ 6 ರಾಶಿಯವರಿಗೆ ಹಣಕಾಸಿನ ಲಾಭದಿಂದ ವೃತ್ತಿ ಲಾಭದವರೆಗೆ ಅದೃಷ್ಟ ಲಭಿಸಲಿದೆ

ಸೂರ್ಯಗ್ರಹಣ-ಚಂದ್ರಗ್ರಹಣವನ್ನು ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ಗ್ರಹಣಗಳು ಕೆಲವು ರಾಶಿಯ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

Written by - Puttaraj K Alur | Last Updated : Nov 27, 2021, 07:53 AM IST
  • ಈ ವರ್ಷದ ಕೊನೆಯ ಸೂರ್ಯಗ್ರಹಣವು ಡಿ.4ರಂದು ಶನಿವಾರ ಸಂಭವಿಸಲಿದೆ
  • ಸೂರ್ಯಗ್ರಹಣವು ವೃಷಭ ರಾಶಿಯ ಜನರಿಗೆ ತುಂಬಾ ಶುಭಕರವಾಗಿರುತ್ತದೆ
  • ಮಕರ ರಾಶಿಯ ಜನರಿಗೆ ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ
ಸೂರ್ಯಗ್ರಹಣ: ಈ 6 ರಾಶಿಯವರಿಗೆ ಹಣಕಾಸಿನ ಲಾಭದಿಂದ ವೃತ್ತಿ ಲಾಭದವರೆಗೆ ಅದೃಷ್ಟ ಲಭಿಸಲಿದೆ

ನವದೆಹಲಿ: ಈ ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ಶನಿವಾರ ಸಂಭವಿಸಲಿದೆ. ಅಂದಹಾಗೆ ಈ ಸೂರ್ಯಗ್ರಹಣ(Surya Grahan 2021)ವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿಲ್ಲದಿದ್ದರೂ, ಅದರ ಶುಭ ಮತ್ತು ಅಶುಭ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ.

ಸೂರ್ಯಗ್ರಹಣ-ಚಂದ್ರಗ್ರಹಣ(Surya Grahan Impact On Zodiac Signs)ವನ್ನು ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ಗ್ರಹಣಗಳು ಕೆಲವು ರಾಶಿಯ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಮುಂಬರುವ ಸೂರ್ಯಗ್ರಹಣವು  ವಿಶೇಷವಾಗಿ 7 ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವೆಂದು ಸಾಬೀತುಪಡಿಸಲಿದೆ. ಯಾವ ರಾಶಿಯವರಿಗೆ ಈ ಸೂರ್ಯಗ್ರಹಣ ಶುಭ ಫಲ ನೀಡುತ್ತದೆ  ತಿಳಿದುಕೊಳ್ಳಿರಿ.

ವೃಷಭ ರಾಶಿ: ಈ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ತುಂಬಾ ಶುಭಕರ(Surya Grahan Is Auspicious)ವಾಗಿರುತ್ತದೆ. ಗ್ರಹಣವು ಈ ರಾಶಿಚಕ್ರದ ಜನರಿಗೆ ಗೌರವವನ್ನು ತರಲಿದ್ದು, ಹಣಕಾಸಿನ ಸ್ಥಿತಿಯನ್ನು ಮತ್ತಷ್ಟು ಉತ್ತಮಪಡಿಸಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು, ವ್ಯಾಪಾರದಲ್ಲಿ ಲಾಭ ಇರುತ್ತದೆ. ಒಟ್ಟಾರೆ ಈ ಸಮಯವು ಹಣ ಮತ್ತು ವೃತ್ತಿಯ ವಿಷಯದಲ್ಲಿ ಉತ್ತಮವಾಗಿರುತ್ತದೆ. 

ಇದನ್ನೂ ಓದಿ: ಡಿಸೆಂಬರ್ ನಲ್ಲಿ ಆರಕ್ಕಿಂತ ಹೆಚ್ಚು ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ, ಈ ರಾಶಿಯವರ ಪಾಲಿಗೆ ಎಲ್ಲವೂ ಶುಭ

ಮಿಥುನ ರಾಶಿ: ಈ ಸಮಯವು ಮಿಥುನ ರಾಶಿ(Lucky Zodiac Signs)ಯವರಿಗೆ ಹಳೆಯ ವಿವಾದಗಳಿಂದ ಮುಕ್ತಿ ನೀಡುತ್ತದೆ. ಇದಲ್ಲದೆ ಅವರ ಯಾವುದೇ ಆಸೆಗಳನ್ನು ಪೂರೈಸುವ ಸಾಧ್ಯತೆಗಳಿವೆ. ಮಿಥುನ ರಾಶಿಯ ಜನರು ಒಳ್ಳೆಯ ಸುದ್ದಿ ಪಡೆಯಬಹುದು. 

ಸಿಂಹ ರಾಶಿ: ಈ ಸೂರ್ಯಗ್ರಹಣವು ಸಿಂಹ ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅವರ ಕೆಲವು ಹಳೆಯ ಸಮಸ್ಯೆಗಳು ಬಗೆಹರಿಯಬಹುದು. ಸ್ಥಗಿತಗೊಂಡ ಕೆಲಸಗಳು ಈಗ ಪ್ರಾರಂಭವಾಗಲಿವೆ.

ಕನ್ಯಾ ರಾಶಿ: ಸೂರ್ಯಗ್ರಹಣವು ಕನ್ಯಾ ರಾಶಿಯ ಜನರ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಸ್ಥೈರ್ಯ ಮತ್ತಷ್ಟು ಹೆಚ್ಚಾಗಬಹುದು. ಸ್ಥಿಗತಗೊಂಡಿದ್ದ ಅನೇಕ ಕೆಲಸಗಳು ಮುಗಿಯುತ್ತವೆ. ನೀವು ಮಾಡುವ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. 

ಇದನ್ನೂ ಓದಿ: ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ

ಮಕರ ರಾಶಿ: ಮಕರ ರಾಶಿ(Solar Eclipse 2021)ಯವರಿಗೆ ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಾಕಾಂಕ್ಷಿಗಳು ತಮ್ಮ ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಒಟ್ಟಾರೆ ಆದಾಯ ಸಂಬಂಧಿತ ಮೂಲಗಳ ಬಗ್ಗೆ ಲಾಭದ ಪರಿಸ್ಥಿತಿ ಇರುತ್ತದೆ. 

ಕುಂಭ ರಾಶಿ: ಕುಂಭ ರಾಶಿಯವರಿಗೆ ಸೂರ್ಯಗ್ರಹಣವು ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ಅವರು ಹಠಾತ್ ಹಣದ ಲಾಭವನ್ನು ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News