Surya Gochar 2023: ಈ ರಾಶಿಯವರಿಗೆ ಇಂದಿನಿಂದ ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನೊಂದಿಗೆ ಅಪಾರ ಲಾಭ!

ಸೂರ್ಯ ಸಂಕ್ರಮಣ 2023: ಜನವರಿ 14ರಂದು ಸೂರ್ಯದೇವರು ಮಕರ ರಾಶಿಯನ್ನು ಪ್ರವೇಶಿಸಲಿದೆ. ಆದ್ದರಿಂದ ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದಾಗಿ ಕೆಲವು ರಾಶಿಯ ಸ್ಥಳೀಯರ ಅದೃಷ್ಟವು ಬೆಳಗಲಿದೆ.  

Written by - Puttaraj K Alur | Last Updated : Jan 14, 2023, 09:33 AM IST
  • ಮೇಷ ರಾಶಿಯ ಜನರು ವೃತ್ತಿಪರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ
  • ಕನ್ಯಾ ರಾಶಿಯವರಿಗೆ ಸೂರ್ಯದೇವರ ಆಶೀರ್ವಾದದಿಂದ ಯಶಸ್ಸಿನ ಜೊತೆಗೆ ಆರ್ಥಿಕ ಲಾಭ ದೊರೆಯಲಿದೆ
  • ಧನು ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ
Surya Gochar 2023: ಈ ರಾಶಿಯವರಿಗೆ ಇಂದಿನಿಂದ ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನೊಂದಿಗೆ ಅಪಾರ ಲಾಭ! title=
ಸೂರ್ಯನ ರಾಶಿ ಪರಿವರ್ತನ 2023

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನನ್ನು ಎಲ್ಲಾ 12 ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮಾಘ ಮಾಸದಲ್ಲಿ ಸೂರ್ಯನು ಜನವರಿ 14ರಂದು ಮಕರ ರಾಶಿ ಪ್ರವೇಶಿಸುತ್ತಾನೆ. ಕೆಲವು ರಾಶಿಗಳ ಸ್ಥಳೀಯರಿಗೆ ಈ ಬಾರಿ ಈ ಸಂಕ್ರಮವು ತುಂಬಾ ಮಂಗಳಕರ ಮತ್ತು ಫಲಪ್ರದವಾಗಲಿದೆ. ಇಂದು ರಾತ್ರಿ 8:22ಕ್ಕೆ ಸೂರ್ಯನು ಶನಿದೇವನ ಚಿಹ್ನೆ ಮಕರ ರಾಶಿಯನ್ನು ಪ್ರವೇಶಿಸಲಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನನ್ನು ಸಾಧನೆ, ಆತ್ಮಗೌರವ, ಘನತೆ, ಅಹಂಕಾರ ಮತ್ತು ವೃತ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅನೇಕ ರಾಶಿಗಳ ಜನರು ಸೂರ್ಯನ ಸಂಚಾರದಿಂದ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಈ ಅವಧಿಯಲ್ಲಿ ಯಾವ ರಾಶಿಯವರಿಗೆ ಲಾಟರಿ ಹೊಡೆಯಲಿದೆ ಎಂದು ತಿಳಿಯಿರಿ.

ಇದನ್ನೂ ಓದಿ: Vastu Tips : ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಔಷಧಿಗಳನ್ನು ಇಡಬೇಡಿ! ರೋಗಗಳು ಮನೆ ಮಾಡುತ್ತವೆ

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ 5ನೇ ಮನೆಯ ಅಧಿಪತಿ ಮತ್ತು ಸೂರ್ಯನು 10ನೇ ಮನೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ವೃತ್ತಿಪರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಮಾಡಿದ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೂ ಈ ಸಮಯ ಅನುಕೂಲಕರವಾಗಲಿದೆ. ಪರೀಕ್ಷೆಯ ಫಲಿತಾಂಶವು ಮಂಗಳಕರವಾಗಿರುತ್ತದೆ.

ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರಿಗೆ ಸೂರ್ಯನು 12ನೇ ಮನೆಯ ಅಧಿಪತಿ. ಮತ್ತೊಂದೆಡೆ ಈ ರಾಶಿಯ ಸ್ಥಳೀಯರ ಸಂಕ್ರಮಣ ಜಾತಕದಲ್ಲಿ ಸೂರ್ಯನ 5ನೇ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನವು ಹೆಚ್ಚಾಗುತ್ತದೆ. ಆರ್ಥಿಕ ಲಾಭ ದೊರೆಯಲಿದೆ. ಇದಲ್ಲದೆ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿದೇಶದಲ್ಲಿ ಕಲಿಯಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ಸೂರ್ಯ ದೇವರ ಆಶೀರ್ವಾದದಿಂದ ಯಶಸ್ಸನ್ನು ಪಡೆಯುತ್ತಾರೆ. 

ಇದನ್ನೂ ಓದಿ: Today Horoscope 14-01-2023: ಮಕರ ಸಂಕ್ರಾಂತಿ ಶುಭದಿನದಂದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ…!

ಧನು ರಾಶಿ: ಈ ರಾಶಿಯ ಸ್ಥಳೀಯರ 9ನೇ ಮನೆಗೆ ಸೂರ್ಯನು ಅಧಿಪತಿ. ಈ ರಾಶಿಯ ಸಂಕ್ರಮಣದ ಜಾತಕದ 2ನೇ ಮನೆಯಲ್ಲಿ ಸೂರ್ಯನು ಸಾಗಲಿದ್ದಾನೆ. ಈ ಅವಧಿಯಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ತೀರ್ಥಯಾತ್ರೆಗೆ ಹೋಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇದಲ್ಲದೆ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಕುಟುಂಬದ ಬೆಂಬಲ ಸಿಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News