Sankashti Chaturthi 2022: ನಾಳೆ ಸಂಕಷ್ಟ ಚತುರ್ಥಿ : ಗಣಪತಿ ಪೂಜೆ ವೇಳೆ ಈ ಕೆಲಸ ಮಾಡಲೇ ಬೇಡಿ, ಚಂದ್ರೋದಯದ ಸಮಯ ತಿಳಿಯಿರಿ

Sankashti Chaturthi 2022: ಸಂಕಷ್ಟಿ ಚತುರ್ಥಿಯ ದಿನದಂದು ಗಣಪತಿಯನ್ನು ಪೂಜಿಸಿದ ನಂತರ ರಾತ್ರಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರ ಹೊರತಾಗಿ, ಇತರ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ.  

Written by - Ranjitha R K | Last Updated : Apr 18, 2022, 10:25 AM IST
  • ನಾಳೆ ಅಂದರೆ ಏಪ್ರಿಲ್ 19 ರಂದು ಸಂಕಷ್ಟಿ ಚತುರ್ಥಿ
  • ನಾಳೆ ಗಣಪತಿ ಪೂಜೆ ಬಳಿಕ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು.
  • ಸಂಕಷ್ಟಿ ಚತುರ್ಥಿಯಂದು ರಾತ್ರಿ 09:50 ಕ್ಕೆ ಚಂದ್ರೋದಯವಾಗಲಿದೆ.
Sankashti Chaturthi 2022: ನಾಳೆ ಸಂಕಷ್ಟ ಚತುರ್ಥಿ : ಗಣಪತಿ ಪೂಜೆ ವೇಳೆ ಈ ಕೆಲಸ ಮಾಡಲೇ ಬೇಡಿ, ಚಂದ್ರೋದಯದ ಸಮಯ ತಿಳಿಯಿರಿ  title=
Sankashti Chaturthi 2022 (file photo)

ಬೆಂಗಳೂರು  :  Sankashti Chaturthi 2022 : ಎಲ್ಲಾ ಚತುರ್ಥಿಗಳು ಗಣೇಶನಿಗೆ ಸಮರ್ಪಿತವಾಗಿವೆ. ಪ್ರತಿ ತಿಂಗಳಲ್ಲಿ 2 ಚತುರ್ಥಿಗಳು ಬರುತ್ತವೆ.  ಇವುಗಳಲ್ಲಿ ಒಂದು ಕೃಷ್ಣ ಪಕ್ಷದಲ್ಲಿ ಮತ್ತು ಇನ್ನೊಂದು ಶುಕ್ಲ ಪಕ್ಷದಲ್ಲಿ ಬರುತ್ತದೆ. ಇದರಲ್ಲಿ ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಆಚರಿಸಲಾಗುತ್ತದೆ. ನಾಳೆ ಅಂದರೆ ಏಪ್ರಿಲ್ 19 ರಂದು ವೈಶಾಖ ಮಾಸದ ಚತುರ್ಥಿ ತಿಥಿ. ಸಂಕಷ್ಟಿ ಶ್ರೀ ಗಣೇಶ ಚತುರ್ಥಿ ಉಪವಾಸವನ್ನು ಈ ದಿನ ಆಚರಿಸಲಾಗುತ್ತದೆ. ಸಂಕಷ್ಟಿ ಚತುರ್ಥಿ ಉಪವಾಸ ಮತ್ತು ಪೂಜೆ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಸಂಕಷ್ಟಿ ಚತುರ್ಥಿಯ ಪೂಜೆಯನ್ನು ಶುಭ ಮುಹೂರ್ತದಲ್ಲಿ ಮಾಡಿ ಚಂದ್ರನಿಗೆ ಅರ್ಘ್ಯ ನೀಡಬೇಕು. 

ಸಂಕಷ್ಟಿ ಚತುರ್ಥಿ ಪೂಜೆ ಮುಹೂರ್ತ : 
ನಾಳೆ ಅಂದರೆ ಏಪ್ರಿಲ್ 19, ಮಂಗಳವಾರ ಸಂಜೆ   04:38 ರಿಂದ ಚತುರ್ಥಿ ತಿಥಿಯು ಪ್ರಾರಂಭವಾಗುತ್ತದೆ. ಚತುರ್ಥಿಯ ಉಪವಾಸದ ಸಮಯದಲ್ಲಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದು ಅಗತ್ಯ. ಈ ಬಾರಿ ಸಂಕಷ್ಟಿ ಚತುರ್ಥಿಯಂದು  ರಾತ್ರಿ 09:50 ಕ್ಕೆ ಚಂದ್ರೋದಯವಾಗಲಿದೆ. 

ಇದನ್ನೂ ಓದಿ Chanakya Niti: ಈ ಗುಣಗಳಿದ್ದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಕೂಡಾ ಗೆಲ್ಲುವುದು ಸಾಧ್ಯ

ಸಂಕಷ್ಟ ಚತುರ್ಥಿಯಂದು ಈ ಕೆಲಸ ಮಾಡಬೇಡಿ :
1.ಅಪ್ಪಿತಪ್ಪಿಯೂ ಗಣಪತಿಗೆ ತುಳಸಿಯನ್ನು ಅರ್ಪಿಸಬೇಡಿ. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. 

2.ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಎಂದಿಗೂ ಕಿರುಕುಳ ನೀಡಬಾರದು. ಅದರಲ್ಲಿಯೂ ಸಂಕಷ್ಟ ಚತುರ್ಥಿಯ ದಿನದಂದು ಹಾಗೆ ಮಾಡಿದರೆ ಭಾರೀ ಬೆಲೇ ತೆರಬೇಕಾಗುತ್ತದೆ. ಈ ದಿನ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಲು ಪ್ರಯತ್ನಿಸಿ. 

3. ಸಂಕಷ್ಟ ಚತುರ್ಥಿಯ ದಿನದಂದು ಹಿರಿಯರನ್ನು, ಬ್ರಾಹ್ಮಣರನ್ನು ನಿಂದಿಸುವ ತಪ್ಪನ್ನು ಮಾಡಬೇಡಿ. ಇದರಿಂದ ಗಣಪತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು. 

ಇದನ್ನೂ ಓದಿ:  ಸಾಡೇ ಸಾತಿ ಶನಿ ಪ್ರಭಾವದಿಂದ ಮುಕ್ತಿ ಪಡೆಯಲು ಸರಳ ಸಲಹೆಗಳು

4. ಸಂಕಷ್ಟಿ ಚತುರ್ಥಿಯ ದಿನದಂದು ನಿಮ್ಮ ನಡವಳಿಕೆಯನ್ನು ಉತ್ತಮವಾಗಿ ಇಟ್ಟುಕೊಳ್ಳಿ. ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ. 

5. ಸಂಕಷ್ಟ ಚತುರ್ಥಿಯ ದಿನದಂದು ಮಾಂಸ ಮತ್ತು ಮದ್ಯ ಸೇವಿಸಬೇಡಿ. ಈ ದಿನ ಮನೆಯಲ್ಲಿ ಬೆಳ್ಳುಳ್ಳಿ-ಈರುಳ್ಳಿಯನ್ನು ಆಹಾರದಲ್ಲಿ ಬಳಸಬೇಡಿ. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News