2022ರ ಗ್ರಹಣದಿಂದ 2 ರಾಶಿಯವರ ಮೇಲೆ ಪರಿಣಾಮ: ದಿನಾಂಕ-ಸಮಯ ಸೇರಿ ಎಲ್ಲಾ ವಿವರ ತಿಳಿಯಿರಿ

ಎರಡೂ ಚಂದ್ರಗ್ರಹಣಗಳ ಸೂತಕ ಅವಧಿಯು ಮಾನ್ಯವಾಗಿರುತ್ತದೆ ಮತ್ತು ಅವು ದೇಶ, ಪ್ರಪಂಚ ಮತ್ತು ಜನರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.

Written by - Puttaraj K Alur | Last Updated : Dec 27, 2021, 09:56 PM IST
  • 2022ರಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣ ಸಂಭವಿಸಲಿವೆ
  • 2022ರಲ್ಲಿ ವೃಷಭ & ವೃಶ್ಚಿಕ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ
  • ಈ ರಾಶಿಯವರು ಗ್ರಹಣದ 11 ದಿನಗಳ ಹಿಂದಿನಿಂದಲೂ ಜಾಗರೂಕರಾಗಿರಬೇಕು
2022ರ ಗ್ರಹಣದಿಂದ 2 ರಾಶಿಯವರ ಮೇಲೆ ಪರಿಣಾಮ: ದಿನಾಂಕ-ಸಮಯ ಸೇರಿ ಎಲ್ಲಾ ವಿವರ ತಿಳಿಯಿರಿ title=
2022ರಲ್ಲಿ ಗ್ರಹಣಗಳ ಪ್ರಭಾವ ಹೇಗಿರುತ್ತದೆ..?

ನವದೆಹಲಿ: 2022ರ ನೂತನ ವರ್ಷ ಪ್ರಾರಂಭವಾಗಲು ಇನ್ನು ಕೇವಲ 4 ದಿನಗಳು ಮಾತ್ರ ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ವರ್ಷ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಇದಲ್ಲದೆ ಮುಂಬರುವ ವರ್ಷದಲ್ಲಿ ಎಷ್ಟು ಸೂರ್ಯಗ್ರಹಣಗಳು ಮತ್ತು ಚಂದ್ರಗ್ರಹಣಗಳು ಸಂಭವಿಸುತ್ತವೆ. ಅವು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿಯೂ ಇದೆ. ಮುಂದಿನ ವರ್ಷ ಸಂಭವಿಸಲಿರುವ ಗ್ರಹಣಗಳು(Eclipse Of 2022) ಯಾವ ರಾಶಿಚಕ್ರ ಚಿಹ್ನೆಗಳಲ್ಲಿ ನಡೆಯುತ್ತವೆ ಮತ್ತು ಯಾವ ರಾಶಿಯ ಜನರ ಮೇಲೆ ಅವು ಹೆಚ್ಚು ಪ್ರಭಾವ ಬೀರುತ್ತವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.  

2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು

2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. ಇವುಗಳಲ್ಲಿ 2 ಸೂರ್ಯಗ್ರಹಣ(Surya Grahan In 2022)ಗಳು ಮತ್ತು 2 ಚಂದ್ರಗ್ರಹಣಗಳು. ಈ ಗ್ರಹಣಗಳು ಕ್ರಮವಾಗಿ ಏಪ್ರಿಲ್ 30 (ಸೂರ್ಯಗ್ರಹಣ), ಮೇ 16 (ಚಂದ್ರಗ್ರಹಣ), 25 ಅಕ್ಟೋಬರ್ (ಸೂರ್ಯಗ್ರಹಣ) ಮತ್ತು 8 ನವೆಂಬರ್ (ಚಂದ್ರಗ್ರಹಣ) ರಂದು ನಡೆಯಲಿವೆ. ಈ ಎರಡೂ ಸೂರ್ಯಗ್ರಹಣಗಳು ಭಾಗಶಃವಾದರೆ ಚಂದ್ರಗ್ರಹಣಗಳು ಸಂಪೂರ್ಣ ಗ್ರಹಣಗಳಾಗಿರುತ್ತವೆ. ಅದೇನೆಂದರೆ ಎರಡೂ ಚಂದ್ರಗ್ರಹಣಗಳ ಸೂತಕ ಅವಧಿಯು ಮಾನ್ಯವಾಗಿರುತ್ತದೆ ಮತ್ತು ಅವು ದೇಶ, ಪ್ರಪಂಚ ಮತ್ತು ಜನರ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. 16 ಮೇ 2022ರಂದು ಚಂದ್ರಗ್ರಹಣವು ಬೆಳಿಗ್ಗೆ 7:58 ರಿಂದ ಮಧ್ಯಾಹ್ನ 11:58ರವರೆಗೆ ಇರುತ್ತದೆ. ಅದೇ ರೀತಿ 8 ನವೆಂಬರ್ 2022ರಂದು ಚಂದ್ರಗ್ರಹಣವು ಮಧ್ಯಾಹ್ನ 2:41ರಿಂದ ಸಂಜೆ 6:20ರವರೆಗೆ ಇರುತ್ತದೆ.

ಇದನ್ನೂ ಓದಿ: Goddess Lakshmi: ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಶುಕ್ರವಾರ ಮಾಡುವ ಈ ಸರಳ ಉಪಾಯದಿಂದ ಶ್ರೀಮಂತರಾಗಬಹುದು

ಈ 2 ರಾಶಿಯವರಿಗೆ ಗ್ರಹಣಗಳಿಂದ ಪರಿಣಾಮ

2022ರಲ್ಲಿ ವೃಷಭ ರಾಶಿಯಲ್ಲಿ 2 ಗ್ರಹಣಗಳು ಸಂಭವಿಸಲಿದ್ದು, ಉಳಿದ 2 ಗ್ರಹಣಗಳು ವೃಶ್ಚಿಕ ರಾಶಿಯಲ್ಲಿ ಆಗಲಿವೆ. ಈ ರಾಶಿಚಕ್ರದ ಚಿಹ್ನೆಗಳಲ್ಲಿ ಗ್ರಹಣದಿಂದ ಗರಿಷ್ಠ ಪರಿಣಾಮವು ಈ 2 ರಾಶಿಯ ಜನರ ಮೇಲೂ ಇರುತ್ತದೆ. ಈ ಜನರಿಗೆ ಒತ್ತಡ, ನಿದ್ರಾಹೀನತೆ ಸಮಸ್ಯೆ ತಲೆದೋರಬಹುದು. ಇದಲ್ಲದೆ ಅವರ ವರ್ತನೆಯಲ್ಲಿ ಬದಲಾವಣೆಯಾಗುವ ಹಾಗೂ ಸಂಬಂಧಗಳಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತವೆ. ಗ್ರಹಣದ ಹಿಂದಿನ 11 ದಿನಗಳು ಮತ್ತು ನಂತರದ 11 ದಿನಗಳು ಬಹಳ ವಿಶೇಷವಾಗಿರುವುದರಿಂದ ಈ 2 ರಾಶಿಯ ಜನರು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದಲ್ಲದೆ ಗ್ರಹಣವು ಮೇಷ, ತುಲಾ ಮತ್ತು ಮೀನ ರಾಶಿಯ ಜನರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನವೆಂಬರ್‌ನಲ್ಲಿ ಆದಷ್ಟು ಜಾಗರೂಕರಾಗಿರಿ

ನವೆಂಬರ್ ತಿಂಗಳ ಸಂಪೂರ್ಣ ಚಂದ್ರಗ್ರಹಣ(Chandra Grahan In 2022)ವು ವೃಶ್ಚಿಕ ಮತ್ತು ವೃಷಭ ರಾಶಿಯವರಿಗೆ ವಿಶೇಷವಾಗಿ ತೊಂದರೆದಾಯಕವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಆದಷ್ಟು ಪ್ರಯಾಣವನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಪ್ರೇಮ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವಾತ-ಪಿತ್ತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಸಂಧಿವಾತ, ಅಜೀರ್ಣ, ಚರ್ಮರೋಗ ಸಮಸ್ಯೆ ಕಾಣಿಸಿಕೊಳ್ಳಬಹುದು. ಗರ್ಭಿಣಿಯರು, ವೃದ್ಧರು, ಮಕ್ಕಳು ಕೂಡ ಗ್ರಹಣದ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಒಳ್ಳೆಯದು. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಗ್ರಹಣವು 48 ರಿಂದ 52 ವರ್ಷ ವಯಸ್ಸಿನ ಮಹಿಳೆಯರು ಮತ್ತು ಸ್ವಭಾವತಃ ತುಂಬಾ ಭಾವನಾತ್ಮಕವಾಗಿರುವ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ರಾಶಿ ಬದಲಿಸಲಿರುವ ಮಂಗಳ, ಈ ಐದು ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ

ಗ್ರಹಣದ ಋಣಾತ್ಮಕ ಪರಿಣಾಮ ತಪ್ಪಿಸಲು ಪರಿಹಾರ

  • ಗ್ರಹಣದ ದಿನ ಮನೆಯಿಂದ ಹೊರಗೆ ಬರಬೇಡಿ.
  • ಗ್ರಹಣದ ದಿನ ಉಪವಾಸವಿದ್ದು, ಗ್ರಹಣದ ಬಳಿಕ ಸ್ನಾನ ಮಾಡಿದ ನಂತರವೇ ಆಹಾರ ಸೇವಿಸಿ.
  • ಗ್ರಹಣದ ದಿನ ಹಸುವಿನ ಹಾಲಿಗೆ ಲವಂಗ, ಕರ್ಪೂರ, ತುಪ್ಪ ಮತ್ತು ಶುದ್ಧ ಗುಗ್ಗುಲ ಧೂಪವನ್ನಿಟ್ಟು ಹೊಗೆ ಮಾಡಬೇಕು. ಇದು ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ.
  • ಗ್ರಹಣದ 11 ದಿನಗಳ ಹಿಂದಿನಿಂದ 11 ದಿನಗಳ ನಂತರ ನಿಮ್ಮ ಆಜ್ಞಾ ಚಕ್ರವನ್ನು ಕೇಂದ್ರೀಕರಿಸುವ ಮೂಲಕ ‘ಓಂ ಮೂಲಂ ಸುಹ್ವಾ ಅಸ್ತು’ ಮಂತ್ರವನ್ನು ಪ್ರತಿದಿನ 28 ಬಾರಿ ಜಪಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News