ಹೊಸ ವರ್ಷದಲ್ಲಿ ರಾಶಿ ಬದಲಿಸಲಿರುವ ಮಂಗಳ, ಈ ಐದು ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ

ಧನು ರಾಶಿಯಲ್ಲಿ ಮಂಗಳದ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದರೊಂದಿಗೆ ಆರ್ಥಿಕ ಲಾಭವೂ ಇರುತ್ತದೆ. 

Written by - Ranjitha R K | Last Updated : Dec 27, 2021, 02:16 PM IST
  • ಹೊಸ ವರ್ಷದಲ್ಲಿ ಧನು ರಾಶಿ ಪ್ರವೇಶಿಸಲಿರುವ ಮಂಗಳ
  • ಈ ರಾಶಿಯವರ ಜೀವನದಲ್ಲಿ ಆಗಲಿದೆ ಧನಾತ್ಮಕ ಬದಲಾವಣೆ
  • 5 ರಾಶಿಯವರಿಗೆ ಮಂಗಳ ಸಂಚಾರವು ಶುಭಕರವಾಗಿರಲಿದೆ
ಹೊಸ ವರ್ಷದಲ್ಲಿ ರಾಶಿ ಬದಲಿಸಲಿರುವ ಮಂಗಳ, ಈ ಐದು ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ title=
ಹೊಸ ವರ್ಷದಲ್ಲಿ ಧನು ರಾಶಿ ಪ್ರವೇಶಿಸಲಿರುವ ಮಂಗಳ (file photo)

ನವದೆಹಲಿ : ಮಂಗಳನ ರಾಶಿಚಕ್ರವು (mars transit) ಬದಲಾಗಲಿದೆ. ಮಂಗಳ ಗ್ರಹವು ಪ್ರಸ್ತುತ ವೃಶ್ಚಿಕ ರಾಶಿಯಲ್ಲಿದೆ. ಆದರೆ ಜನವರಿ 16, 2022 ರಂದು ಮಂಗಳವು ಧನು ರಾಶಿಯನ್ನು (Sagitarius) ಪ್ರವೇಶಿಸುತ್ತದೆ. ಧನು ರಾಶಿಯಲ್ಲಿ ಮಂಗಳದ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದರೊಂದಿಗೆ ಆರ್ಥಿಕ ಲಾಭವೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಮಂಗಳ ಮಂಗಳಕರ ಸ್ಥಾನದಲ್ಲಿದ್ದರೆ, ವ್ಯಕ್ತಿಗೆ ತುಂಬಾ ಅದೃಷ್ಟಶಾಲಿಯಾಗಿ ಸಾಬೀತಾಗಲಿದೆ. ಮತ್ತೊಂದೆಡೆ, ಮಂಗಳವು ಪ್ರತಿಕೂಲವಾಗಿದ್ದರೆ ಅಥವಾ ಜಾತಕದಲ್ಲಿ ಅಶುಭ ಮನೆಯಲ್ಲಿದ್ದರೆ, ಅದು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಮೇಷ ರಾಶಿ ((Aries):
ಮಂಗಳನ ಬದಲಾವಣೆಯು (Mars transit) ಮೇಷ ರಾಶಿಯವರಿಗೆ ಮಂಗಳಕರವಾಗಿ ಸಾಬೀತಾಗಲಿದೆ. ಮಂಗಳ ಸಂಚಾರದ ಪ್ರಭಾವದಿಂದ ಧನ, ಸ್ಥಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಅಲ್ಲದೆ, ಹೂಡಿಕೆಯಿಂದ ಆರ್ಥಿಕ ಲಾಭವೂ ಇರುತ್ತದೆ. ಇದಲ್ಲದೇ ಈ ರಾಶಿಯವರಿಗೆ (Zodiac sign) ಮಂಗಳ ಬದಲಾವಣೆಯು ಶುಭಕರವಾಗಿರುತ್ತದೆ. 

ಇದನ್ನೂ ಓದಿ : Horoscope 2022: ಮುಂದಿನ ವರ್ಷ ಯಾರ ವೃತ್ತಿ ಜೀವನ ಹೊಳೆಯಲಿದೆ? 2022 ನಿಮಗೆ ಹೇಗಿರುತ್ತದೆ ಎಂದು ತಿಳಿಯಿರಿ

ಮಿಥುನ ರಾಶಿ (Gemini) :
2022 ರಲ್ಲಿ ಮಂಗಳನ ರಾಶಿ (Mars) ಬದಲಾವಣೆಯು ಲಾಭದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಜನವರಿ 16 ರಂದು ಮಂಗಳನು ​​ಧನು ರಾಶಿಗೆ ಪ್ರವೇಶಿಸಿದ ತಕ್ಷಣ ಹಣಕಾಸಿನ ವಿಚಾರದಲ್ಲಿ ಲಾಭದಾಯಕವಾಗಿರುತ್ತದೆ. ಇದರೊಂದಿಗೆ, ವ್ಯಾಪಾರ ಉದ್ಯೋಗದಲ್ಲಿ ಯಶಸ್ಸು ಮತ್ತು ಖ್ಯಾತಿ ಸಿಗಲಿದೆ. ಮಂಗಳ ಸಂಚಾರದ ಸಮಯದಲ್ಲಿ ಆದಾಯ ಹೆಚ್ಚಾಗುತ್ತದೆ. ಇದಲ್ಲದೇ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ಸಿಂಹ   (Leo) :
ಸಿಂಹ ರಾಶಿಯ (Leo) ಜನರಿಗೆ ಮಂಗಳನ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಮಂಗಳನ ರಾಶಿಯ ಬದಲಾವಣೆಯಿಂದ ಈ ರಾಶಿಯವರು ಲಾಭ ಪಡೆಯಲಿದ್ದಾರೆ. ಇದಲ್ಲದೆ, ಉದ್ಯೋಗ ಮತ್ತು ವ್ಯವಹಾರವು ವೇಗವಾಗಿ ಪ್ರಗತಿ ಹೊಂದುತ್ತದೆ.  ಹೂಡಿಕೆಯಿಂದ ಉತ್ತಮ ಲಾಭವಾಗುವ ನಿರೀಕ್ಷೆಯಿದೆ. 

ಕನ್ಯಾರಾಶಿ (Virgo):
ಮಂಗಳನ ರಾಶಿಯ ಬದಲಾವಣೆಯಿಂದ ಕನ್ಯಾ ರಾಶಿಯ (Virgo) ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಮೊದಲಿಗಿಂತ ಉತ್ತಮ ಅವಕಾಶಗಳು ದೊರೆಯಲಿವೆ. ಮಂಗಳನ ಶುಭ ಪರಿಣಾಮವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಕುಟುಂಬದಲ್ಲಿ ಒಡಹುಟ್ಟಿದವರ ಬೆಂಬಲ ಇರುತ್ತದೆ. 

ಇದನ್ನೂ ಓದಿ : ಈ ಎರಡು ರಾಶಿಯವರಿಗೆ ಭಾರೀ ಅದೃಷ್ಟ ತರಲಿದೆ ಈ ವಾರ , ನಿಮ್ಮ ರಾಶಿಯನ್ನೊಮ್ಮೆ ನೋಡಿಕೊಳ್ಳಿ

ಮೀನ ರಾಶಿ (Pisces) :
ಮಂಗಳನ ರಾಶಿಯ ಬದಲಾವಣೆಯು ಮೀನ ರಾಶಿಯವರಿಗೂ (Pisces) ಸಹ ಮಂಗಳಕರವಾಗಿ ಸಾಬೀತಾಗಲಿದೆ. ಜೀವನದಲ್ಲಿ ನಡೆಯುತ್ತಿರುವ ಹಣಕಾಸಿನ ತೊಂದರೆಗಳಿಂದ ಪರಿಹಾರ ಸಿಗಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.  ಕಠಿಣ ಪರಿಶ್ರಮದಿಂದ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಎಲ್ಲಾ ಕಾರ್ಯಗಳಲ್ಲೂ ಪೋಷಕರು ಬೆಂಬಲ ನೀಡುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News