ಈ ಅಂಶಗಳು ನಿಮ್ಮ ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸಿ ಬಿಡಬಹುದು...

Parenting: ಪೋಷಕರಾಗಿ ನಮ್ಮ ಪಾತ್ರವು ನಮ್ಮ ಮಕ್ಕಳ ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ಆರೈಕೆಯನ್ನು ಒದಗಿಸುವುದು ಮಾತ್ರವಲ್ಲದೆ ನಮ್ಮ ಮಕ್ಕಳ ಬಾವನೆಗಳಿಗೆ ಬೆಲೆ ನೀಡಿ ಅದಕ್ಕನುಗುಣವಾಗಿ ನಡೆದುಕೊಳ್ಳುವುದು ಕೂಡ ಆಗಿರುತ್ತದೆ. 

Written by - Zee Kannada News Desk | Last Updated : Jan 6, 2024, 12:26 PM IST
  • ಪೋಷಕರಾಗಿ ನಮ್ಮ ಪಾತ್ರ ಮಕ್ಕಳ ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ಆರೈಕೆಯನ್ನು ಒದಗಿಸುವುದು ಮಾತ್ರವಲ್ಲ.
  • ನಿಮ್ಮ ಮಗುವಿನ ಮೇಲೆ ನಿಮ್ಮ ಆಕಾಂಕ್ಷೆಗಳನ್ನು ಮತ್ತು ನಿಮ್ಮ ಕನಸುಗಳನ್ನ ಹೇರಬೇಡಿ.
  • ಕೇವಲ ಟೀಕೆಗಳನ್ನು ನೀಡುವುದರಿಂದ ಮಕ್ಕಳಲ್ಲಿ ಅದು ಸ್ವಯಂ-ಅನುಮಾನಕ್ಕೆ ಕಾರಣವಾಗಬಹುದು.
ಈ ಅಂಶಗಳು ನಿಮ್ಮ ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸಿ ಬಿಡಬಹುದು... title=

Childs Confidence: ಪೋಷಕರಾಗಿ ನಮ್ಮ ಪಾತ್ರವು ನಮ್ಮ ಮಕ್ಕಳ ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ಆರೈಕೆಯನ್ನು ಒದಗಿಸುವುದು ಮಾತ್ರವಲ್ಲದೆ ನಮ್ಮ ಮಕ್ಕಳ ಬಾವನೆಗಳಿಗೆ ಬೆಲೆ ನೀಡಿ ಅದಕ್ಕನುಗುಣವಾಗಿ ನಡೆದುಕೊಳ್ಳುವುದು ಕೂಡ ಆಗಿರುತ್ತದೆ. ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಮಗುವಿನ ಆತ್ಮವಿಶ್ವಾಸವನ್ನು ಋಣಾತ್ಮಕವಾಗಿ ನೀವು ಹೆಚ್ಚಿಸ ಬಹುದು. ಆ ಅಂಶಗಳು ಯಾವುದು ಎಂದು ನೋಡೋಣ...

ನಿಮ್ಮ ಕನಸುಗಳನ್ನು ಹೇರುವುದು
ನಿಮ್ಮ ಮಗುವಿನ ಮೇಲೆ ನಿಮ್ಮ ಆಕಾಂಕ್ಷೆಗಳನ್ನು ಮತ್ತು ನಿಮ್ಮ ಕನಸುಗಳನ್ನ ಹೇರುವುದರಿಂದ  ಅವರ ಪ್ರತ್ಯೇಕತೆಯನ್ನು ನಿಗ್ರಹಿಸಿದಂತಾಗುತ್ತದೆ. ಅವರ ಭಾವೋದ್ರೇಕಗಳನ್ನು ಬೆಂಬಲಿಸಿ ಮತ್ತು ಅವರ ಆಸಕ್ತಿಗಳನ್ನು ಗೌರವಿಸಿ ಅವರಿಗೆ ಬೆಂಬಲ ನೀಡಿ.

ಬೌಂಡರಿ 
ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದರ ಬಗ್ಗೆ ಸ್ಪಷ್ಟವಾದ ಬೌಂಡರಿ ರೂಪಿಸಿಕೊಳ್ಳಿ. ನಿಮಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಐಡಿಯಾ ಇಲ್ಲದಿದ್ದರೆ ಇದು ಮಕ್ಕಳಲ್ಲಿ ಗೊಂದಲ ಮತ್ತು ಅಭದ್ರತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಮಕ್ಕಳನ್ನು ಬೆಳೆಸುವಲ್ಲಿ ಪೌಷ್ಟಿಕಾಂಶದ ಪದಾರ್ಥಗಳು ಎಷ್ಟು ಮುಖ್ಯವಾಗುತ್ತವೆ ಗೊತ್ತಾ ?

ಭಾವನೆಗಳನ್ನು ನಿರ್ಲಕ್ಷಿಸುವುದು
ನಿಮ್ಮ ಮಗುವಿನ ಭಾವನೆಗಳನ್ನು ನಿರ್ಲಕ್ಷಿಸುವುದರಿಂದ ಅವರ ಭಾವನೆಗಳಿಗೆ ದಕ್ಕೆ ತಂದಂತಾಗುತ್ತದೆ. ಅವರ ಭಾವನೆಗಳನ್ನು ಅಂಗೀಕರಿಸಿ ಮತ್ತು ಅವರ ಭಾವನೆಗಳಿಗೆ ಬೆಲೆ ನೀಡಿ.

ಷರತ್ತುಬದ್ಧ ಪ್ರೀತಿ
ಸಾಧನೆಗಳ ಆಧಾರದ ಮೇಲೆಷ್ಟೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಅಲ್ಲದೆ  ನಿಮ್ಮ ಮಗುವಿಗೆ ಎಲ್ಲಾ ಸಮಯದಲ್ಲಿಯೂ ಒಂದೇ ರೀತಿಯಾದ ಪ್ರೀತಿ ವ್ಯಕ್ತ ಪಡಿಸುವುದು ಬಹಳ ಮುಖ್ಯ.

ಹೋಲಿಕೆಗಳು
ನಿಮ್ಮ ಮಗುವನ್ನು ಇತರರೊಂದಿಗೆ ಹೋಲಿಸುವುದು ಅವರಿಗೆ ಅಸಮರ್ಪಕ ಭಾವನೆಯನ್ನು ಉಂಟುಮಾಡಬಹುದು. ಅವರ ವಿಶಿಷ್ಟ ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದರೊಂದಿಗೆ ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸಿ.

ಇದನ್ನೂ ಓದಿ: Mobile Addiction: ಮಕ್ಕಳು- ಪೋಷಕರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತಿ ಮೊಬೈಲ್ ಫೋನ್: ಸಮೀಕ್ಷೆ

ಅತಿಯಾದ ವಿಮರ್ಶಾತ್ಮಕ ಪ್ರತಿಕ್ರಿಯೆ
ನಿಮ್ಮ ಮಕ್ಕಳಿಗೆ ಒಳ್ಳೆಯ ಪ್ರತಿಕ್ರಿಯೆ ಅಲ್ಲದೆ ಕೇವಲ ಟೀಕೆಗಳನ್ನು ನೀಡುವುದು ಸ್ವಯಂ-ಅನುಮಾನಕ್ಕೆ ಕಾರಣವಾಗಬಹುದು. ನಿಮ್ಮ ಮಕ್ಕನ್ನ ಗದರುವುದು ಮಾತ್ರವಲ್ಲದೆ, ಹೊಗಳಿಕೆಯೊಂದಿಗೆ ಎರಡನ್ನೂ ಸಮತೋಲನಗೊಳಿಸಬೇಕು.

ಹೆಚ್ಚಾದ ನಿರೀಕ್ಷೆ
ನೀವು ಮಕ್ಕಳ ಮೇಲೆ ಏರುವ ನಿರೀಕ್ಷೆಗಳು ಅನಗತ್ಯ ಒತ್ತಡವನ್ನು ಉಂಟುಮಾಡಬಹುದು. ನಿಮ್ಮ ಮಗುವಿನ ಸಾಮರ್ಥ್ಯಗಳು ಮತ್ತು ಬೆಳವಣಿಗೆಯ ಹಂತಕ್ಕೆ ಹೊಂದಿಕೊಳ್ಳುವಂತಹ ಗುರಿಗಳನ್ನ ನೀಡಿ. ಹೆಚ್ಚಾದ ಒತ್ತಡ ಬೇಡ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News