ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಸಂತೋಷದಿಂದ ಬದುಕಲು ಬಯಸುತ್ತಾನೆ. ಕುಟುಂಬಕ್ಕೆ ಸುಖ-ಸಂತೋಷ ಮತ್ತು ಎಲ್ಲಾ ಸೌಕರ್ಯಗಳು ಬೇಕಾದರೆ ಲಕ್ಷ್ಮಿದೇವಿಯ ಆಶೀರ್ವಾದ ಬೇಕಾಗುತ್ತದೆ. ಇದಕ್ಕಾಗಿ ಕಷ್ಟಪಟ್ಟು ಶ್ರಮಿಸಬೇಕು. ಆದರೆ ಅನೇಕ ಬಾರಿ ಕೆಲವರು ಅದೃಷ್ಟದ ಬೆಂಬಲ ಪಡೆಯಲು ಸಾಧ್ಯವಾಗುವುದಿಲ್ಲ. ಇಂತವರಿಗೆ ಆರ್ಥಿಕ ಸಮಸ್ಯೆ ಕಾಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಮ್ಮೆ ಇದು ವಾಸ್ತು ದೋಷಗಳಿಂದ ಸಂಭವಿಸುತ್ತದೆ. ನಿಮಗೂ ಇದೇ ರೀತಿ ಆಗುತ್ತಿದ್ದರೆ ನೀವು ಉದ್ವೇಗಕ್ಕೆ ಒಳಗಾಗುವ ಅಗತ್ಯವಿಲ್ಲ. ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಯಾರೇ ಆಗಲಿ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಪೈಕಿ ನಿಂಬೆ ಪರಿಹಾರವೂ ಒಂದಾಗಿದೆ.
ಅದೃಷ್ಟ ಬೆಳಗಿಸುವ ನಿಂಬೆ
ವ್ಯಾಪಾರ ಬೆಳವಣಿಗೆಗೆ: ಕಠಿಣ ಪರಿಶ್ರಮದ ನಂತರವೂ ನಿಮಗೆ ವ್ಯಾಪಾರದಲ್ಲಿ ಯಶಸ್ಸು ಸಿಗದಿದ್ದರೆ ಶನಿವಾರದಂದು ನಿಂಬೆಹಣ್ಣಿನಿಂದ ಕಚೇರಿ ಅಥವಾ ಅಂಗಡಿಯ 4 ಗೋಡೆಗಳನ್ನು ಸ್ಪರ್ಶಿಸಿ. ನಂತರ ನಿಂಬೆಯನ್ನು 4 ತುಂಡುಗಳಾಗಿ ಕತ್ತರಿಸಿ, ಅಡ್ಡಹಾದಿಯ ಎಲ್ಲಾ 4 ದಿಕ್ಕುಗಳಿಗೆ ತಲಾ ಒಂದು ತುಂಡು ಎಸೆಯಿರಿ. ಈ ಪರಿಹಾರ ಮಾಡುವುದರಿಂದ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ವ್ಯಕ್ತಿಯ ವ್ಯವಹಾರವು ಸುಗಮವಾಗಿ ನಡೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಉದ್ದನೆಯ ಕಾಂತಿಯುಕ್ತ ಕೂದಲಿಗೆ ದುಬಾರಿ ಶಾಂಪೂ ಅಲ್ಲ ಈ ಒಂದು ವಸ್ತು ಬಳಸಿ
ಅದೃಷ್ಟವನ್ನು ಬೆಳಗಿಸಲು: ಪ್ರತಿಯೊಂದರಲ್ಲೂ ನೀವು ವೈಫಲ್ಯ ಅನುಭವಿಸುತ್ತಿದ್ದರೆ, ಅದೃಷ್ಟಕ್ಕಾಗಿ ನಿಂಬೆ ತೆಗೆದುಕೊಂಡು ನಿಮ್ಮ ತಲೆಗೆ 7 ಬಾರಿ ಹೊಡೆದುಕೊಳ್ಳಿರಿ. ನಂತರ ಈ ನಿಂಬೆಯನ್ನು 2 ತುಂಡುಗಳಾಗಿ ವಿಂಗಡಿಸಿ ನಿರ್ಜನ ಸ್ಥಳದಲ್ಲಿ ಎಸೆಯಿರಿ. ಬಲಗೈಯ ನಿಂಬೆಯನ್ನು ಎಡಭಾಗದಲ್ಲಿ ಮತ್ತು ಎಡಗೈಯ ನಿಂಬೆಯನ್ನು ಬಲಕ್ಕೆ ಎಸೆಯಿರಿ. ಇದರ ನಂತರ ನೇರವಾಗಿ ಮನೆಗೆ ಬನ್ನಿ. ಈ ಪರಿಹಾರ ಮಾಡುವುದರಿಂದ ವ್ಯಕ್ತಿಯ ಅದೃಷ್ಟದ ಭಾಗ್ಯವು ಎಚ್ಚರಗೊಳ್ಳುತ್ತದೆ.
ದುಷ್ಟ ಕಣ್ಣಿನಿಂದ ದೂರವಿರಲು: ಯಾವುದೇ ಒಬ್ಬ ವ್ಯಕ್ತಿ ಕೆಟ್ಟಕಣ್ಣು ಸಮಸ್ಯೆ ಹೊಂದಿದ್ದರೆ ನಿಂಬೆ ತೆಗೆದುಕೊಂಡು ಅದನ್ನು ತಲೆಯಿಂದ ಕಾಲಿಗೆ 7 ಬಾರಿ ದೃಷ್ಟಿ ತೆಗೆಯಿರಿ. ಅದನ್ನು 4 ಭಾಗಗಳಾಗಿ ಕತ್ತರಿಸಿ ಅಡ್ಡಹಾದಿಯಲ್ಲಿ ಎಸೆಯಿರಿ. ಈ ಪರಿಹಾರ ಮಾಡಿದ ನಂತರ ಹಿಂತಿರುಗಿ ನೋಡಬೇಡಿ.
ಇದನ್ನೂ ಓದಿ: Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಸಿಗುವುದೇ ಇಲ್ಲ ಪೂಜಾಫಲ
ಕೆಲಸದಲ್ಲಿ ಯಶಸ್ಸು ಪಡೆಯಲು: ನಿಮ್ಮ ಕೆಲಸದಲ್ಲಿ ನೀವು ಯಶಸ್ವಿಯಾಗದಿದ್ದರೆ ಬೆಳಗ್ಗೆ ನಿಂಬೆಹಣ್ಣು ತೆಗೆದುಕೊಂಡು ಅದರಲ್ಲಿ 4 ಲವಂಗ ಹಾಕಿರಿ. ನಂತರ ಹನುಮಂತನ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು ಪಠಿಸಿ. ಹನುಮಾನ್ ಮಂತ್ರವನ್ನು ಪಠಿಸಿ ಭಕ್ತಿಯಿಂದ ಪ್ರಾರ್ಥಿಸಿ. ಈ ಪರಿಹಾರ ಮಾಡುವುದರಿಂದ ವ್ಯಕ್ತಿಯ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.