ಭೂಮಿ ನಾಶವಾಗುವ ಸಮಯವನ್ನು ಹೇಳುತ್ತದೆಯಂತೆ ಈ ದೇವಸ್ಥಾನ..! ಇಲ್ಲಿಯ ಶಿವಲಿಂಗದ ವಿಶೇಷತೆ ತಿಳಿದಿದೆಯಾ ?

ಇಲ್ಲಿಯ ಶಿವಲಿಂಗ ನಿರಂತರವಾಗಿ ದೊಡ್ಡದಾಗುತ್ತಿರುವುದರಿಂದ ಈ ಶಿವಲಿಂಗವನ್ನು 'ಜೀವಂತ ಶಿವಲಿಂಗ' ಎಂದೇ ಕರೆಯಲಾಗುತ್ತದೆ. ಇದರ ಎತ್ತರ 9 ಅಡಿಗಳಿಗಿಂತ ಹೆಚ್ಚು.

Written by - Ranjitha R K | Last Updated : Aug 3, 2021, 04:11 PM IST
  • ವಿಶ್ವದ ಏಕೈಕ ಜೀವಂತ ಶಿವಲಿಂಗ ಖಜುರಾಹೊದಲ್ಲಿದೆ
  • ಪ್ರತಿ ವರ್ಷ ಈ ಶಿವಲಿಂಗ ಬೆಳೆಯುತ್ತದೆ
  • ಭೂಮಿಯ ಅಂತ್ಯದ ಸಂಕೇತವನ್ನೂ ನೀಡುತ್ತದೆಯಂತೆ ಈ ಶಿವಲಿಂಗ
ಭೂಮಿ ನಾಶವಾಗುವ ಸಮಯವನ್ನು ಹೇಳುತ್ತದೆಯಂತೆ ಈ ದೇವಸ್ಥಾನ..! ಇಲ್ಲಿಯ ಶಿವಲಿಂಗದ  ವಿಶೇಷತೆ ತಿಳಿದಿದೆಯಾ ?     title=
ವಿಶ್ವದ ಏಕೈಕ ಜೀವಂತ ಶಿವಲಿಂಗ ಖಜುರಾಹೊದಲ್ಲಿದೆ (photo zee news)

ನವದೆಹಲಿ : ಭೂಮಿಯ ಮೇಳೆ ಅನೇಕ ರಹಸ್ಯಗಳಿವೆ. ಕೆಲವು ರಹಸ್ಯಗಳನ್ನು ಭೇದಿಸಲು ಇಲ್ಲಿವರೆಗೆ ವಿಜ್ಞಾನಕ್ಕೂ ಸಾಧ್ಯವಾಗಲಿಲ್ಲ. ಇದು ಅಮರನಾಥ ಗುಹೆಯಲ್ಲಿ ಪ್ರತಿವರ್ಷ ಮೂಡುವ ಹಿಮ ಶಿವಲಿಂಗವಾಗಿರಬಹುದು ಅಥವಾ ಮಧ್ಯಪ್ರದೇಶದ ದೇವಸ್ಥಾನದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಲಿಂಗವೇ (Growing shivalinga) ಆಗಿರಬಹುದು. ಹೌದು, ಮಧ್ಯಪ್ರದೇಶದ ಖಜುರಾಹೊದಲ್ಲಿರುವ (Khajuraho) ಮಾತಂಗೇಶ್ವರ ದೇವಾಲಯದ ಶಿವಲಿಂಗವು ನಿರಂತರವಾಗಿ ಬೆಳೆಯುತ್ತಲೇ ಇದೆ. 

ಇದನ್ನು ಜೀವಂತ ಶಿವಲಿಂಗ ಎಂದೇ ಕರೆಯಲಾಗುತ್ತದೆ :
ಇಲ್ಲಿಯ ಶಿವಲಿಂಗ (Shivalinga) ನಿರಂತರವಾಗಿ ದೊಡ್ಡದಾಗುತ್ತಿರುವುದರಿಂದ ಈ ಶಿವಲಿಂಗವನ್ನು 'ಜೀವಂತ ಶಿವಲಿಂಗ' (Living Shivalinga) ಎಂದೇ ಕರೆಯಲಾಗುತ್ತದೆ. ಇದರ ಎತ್ತರ 9 ಅಡಿಗಳಿಗಿಂತ ಹೆಚ್ಚು. ಈ ಶಿವಲಿಂಗವು ಪ್ರತಿ ವರ್ಷ ಸುಮಾರು 1 ಇಂಚು ಬೆಳೆಯುತ್ತದೆ. ಈ ಶಿವಲಿಂಗದ ಮತ್ತೊಂದು ವಿಶೇಷವೆಂದರೆ, ಇದು ಭೂಮಿಯ ಮೇಲೆ ಎಷ್ಟು ದೊಡ್ಡದಾಗಿ ಬೆಳೆದಿದೆಯೋ, ಭೂಮಿಯೊಳಗೆ ಕೂಡಾ ಅಷ್ಟೇ ಆಳವಾಗಿ ಚಾಚಿಕೊಂಡಿದೆ.   ಭೂಮಿಯ ಒಳಗೆ ಚಾಚಿಕೊಂಡಿರುವ ಈ ಶಿವಲಿಂಗ ಯಾವ ದಿನ ಪಾತಾಳ ಲೋಕವನ್ನು ತಲುಪುತ್ತದೆಯೋ, ಆ ದಿನ ಈ ಭೂಮಿ (End of earth) ನಾಶವಾಗುತ್ತದೆ ಎನ್ನುವುದು ನಂಬಿಕೆ. 

ಇದನ್ನೂ ಓದಿ : Shukra Rashi Parivartan:ಶುಕ್ರದೇವನ ಕೃಪೆಯಿಂದ ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಬರಲಿವೆ 'ಅಚ್ಛೆ ದೀನ್', ಆರ್ಥಿಕ ಸ್ಥಿತಿ ಬಲವರ್ಧನೆ

ಏನು ಹೇಳುತ್ತದೆ ಪೌರಾಣಿಕ ಕತೆ : 
ಇಲ್ಲಿಯ ಶಿವಲಿಂಗ ಬೆಳೆಯುತ್ತಿರುವ ಹಿಂದಿನ ಕಾರಣವನ್ನು ಪುರಾಣದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಪಾಂಡವರ ಹಿರಿಯ ಸಹೋದರ ಯುಧಿಷ್ಠಿರನಿಗೆ ಶಿವನು (Lord shiva) ಅದ್ಭುತವಾದ ರತ್ನವನ್ನು ನೀಡಿದ್ದನಂತೆ. ಅದನ್ನು ಯುಧಿಷ್ಠಿರನು ಮಾತಂಗ ಋಷಿಗೆ ಕೊಡುತ್ತಾನೆ. ನಂತರ ಈ ರತ್ನ  ರಾಜ ಹರ್ಷವರ್ಮನಿಗೆ ಸಿಗುತ್ತದೆ. ಅವನು ಅದನ್ನು ಈ ನೆಲದಲ್ಲಿ ಹೂತಿಡುತ್ತಾನೆ. ಆ ರತ್ನದಿಂದಲೇ ಈ ಜೀವಂತ ಶಿವಲಿಂಗ ಹುಟ್ಟಿಕೊಂಡಿದೆ ಎನ್ನಲಾಗಿದೆ.  ಮಾತಂಗ ಋಷಿಯ ಹೆಸರಿನ ನಂತರ ಇದನ್ನು ಮಾತಂಗೇಶ್ವರ ಶಿವಲಿಂಗ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : Sun Transit In Ashlesha: ಶೀಘ್ರವೇ ಅಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಈ ನಾಲ್ಕು ರಾಶಿಯ ಜನರಿಗೆ ಆರ್ಥಿಕ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News