Tuesday Remedies: ಜೀವನದಲ್ಲಿನ ಸಂಕಷ್ಟಗಳನ್ನು ನಿವಾರಿಸಲು ಇಂದೇ ಮಾಡಿ ಈ ತುಳಸಿ ಪರಿಹಾರ

Tuesday Remedies: ಪ್ರತಿ ವಾರದಂತೆ ಮಂಗಳವಾರದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಕೆಲವು ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಹನುಮಂತನಿಗೆ ಮೀಸಲಾದ ಮಂಗಳವಾರದಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಕಷ್ಟಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Nov 29, 2022, 08:34 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರವನ್ನು ಭಗವಾನ್ ಹನುಮಂತನಿಗೆ ಮೀಸಲಿಡಲಾಗಿದೆ.
  • ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯಬಹುದು.
  • ಮಾತ್ರವಲ್ಲ, ಜಾತಕದಲ್ಲಿ ಕೆಲವು ಗ್ರಹಗಳನ್ನು ಕೂಡ ಬಲಪಡಿಸಬಹುದು.
Tuesday Remedies: ಜೀವನದಲ್ಲಿನ ಸಂಕಷ್ಟಗಳನ್ನು ನಿವಾರಿಸಲು ಇಂದೇ ಮಾಡಿ ಈ ತುಳಸಿ ಪರಿಹಾರ
Tuesday Remedies

Tuesday Remedies: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೂ, ಮೇಲಿಂದ ಮೇಲೆ ಕಷ್ಟ ಬರುತ್ತಿದ್ದರೆ ಜೀವನವೇ ಸಾಕು ಎಂಬಂತಾಗುತ್ತದೆ. ಆದರೆ, ಪ್ರತಿಯೊಂದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಲು ಮಂಗಳವಾರದಂದು ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ಮಂಗಳವಾರದಂದು ಈ ಕೆಲವು ಸರಳ ತಂತ್ರಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಎದುರಾಗಿರುವ ಕಷ್ಟಗಳು ಬೆಣ್ಣೆಯಂತೆ ಕರಗುತ್ತವೆ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರವನ್ನು ಭಗವಾನ್ ಹನುಮಂತನಿಗೆ ಮೀಸಲಿಡಲಾಗಿದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯಬಹುದು. ಮಾತ್ರವಲ್ಲ, ಜಾತಕದಲ್ಲಿ ಕೆಲವು ಗ್ರಹಗಳನ್ನು ಕೂಡ ಬಲಪಡಿಸಬಹುದು. ಇದರಿಂದ ವ್ಯಕ್ತಿಯು ಜೀವನದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆದು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ. ಇದಕ್ಕಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ತಿಳಿಯಿರಿ.

ಮಂಗಳವಾರದಂದು ಈ ಕೆಲಸ ಮಾಡುವುದರಿಂದ ಸಿಗುತ್ತೆ ಕಷ್ಟಗಳಿಂದ ಪರಿಹಾರ:-
* ದೀರ್ಘಾವಧಿಯಿಂದ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಮಂಗಳವಾರದನು ಒಂದು ಹನುಮಂತನ ಮೂರ್ತಿಯ ಮುಂದೆ ಒಂದು ಪಾತ್ರೆಯನ್ನು ಇರಿಸಿ. ಇದರ ನಂತರ 26 ಅಥವಾ 21 ದಿನಗಳ ಕಾಲ ನಿರಂತರವಾಗಿ ಹನುಮಾನ್ ಬಾಹುಕ್ ಪಠಿಸಿ. ಪಾರಾಯಣ ಮಾಡಿದ ನಂತರ ಪಾತ್ರೆಯಲ್ಲಿಟ್ಟ ನೀರನ್ನು ತೆಗೆದುಕೊಂಡರೆ ರೋಗದಿಂದ ಪ್ರಯೋಜನವಾಗುತ್ತದೆ. 

ಇದನ್ನೂ ಓದಿ- Sun Transit 2022 Effect: 18 ದಿನಗಳ ಬಳಿಕ ಅಪಾರ ಸಂಪತ್ತು ಗಳಿಸಲಿದ್ದಾರೆ ಈ ರಾಶಿಯ ಜನ

* ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವಾರದಂದು ಶುದ್ಧ ಮನಸ್ಸಿನಿಂದ ಹನುಮಂತನನ್ನು ಆರಾಧಿಸುವುದರಿಂದ ಶತ್ರುಗಳ ವಿರುದ್ಧ ವಿಜಯ ಸಾಧಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ನೆನಪಿಡಿ, ಬಜರಂಗಬಾನ್ ಪಠಣವನ್ನು ಒಂದೇ ಸ್ಥಳದಲ್ಲಿ ಕುಳಿತು 21 ದಿನಗಳವರೆಗೆ ಮಾಡಲಾಗುತ್ತದೆ. 21 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿ ಬಜರಂಗಬಾನ್ ಪಠಣ ಮಾಡುವುದರಿಂದ ಪ್ರಯೋಜನಕಾರಿ ಆಗಿದೆ. ಅಲ್ಲದೆ, ಈ ಪಾಠವನ್ನು ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು, ಒಬ್ಬರು ಸತ್ಯದ ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು.

* ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ಈ ಸಮಯದಲ್ಲಿ ಹುರಿದ ಕಾಳುಗಳನ್ನು ಕೋತಿಗಳು ಅಥವಾ ಕೆಂಪು ಬಣ್ಣದ ಹಸುಗಳಿಗೆ ತಿನ್ನಿಸಿ. ಶಾಸ್ತ್ರಗಳ ಪ್ರಕಾರ, ಕೆಂಪು ಬಣ್ಣದ ಹಸುವಿಗೆ ಮಂಗಳವಾರದಂದು ಬೆಲ್ಲ ನೀಡುವುದರಿಂದ ಸೂರ್ಯ ದೇವರು ಸಂತೋಷಗೊಳ್ಳುತ್ತಾರೆ.

* ಧರ್ಮಗ್ರಂಥಗಳ ಪ್ರಕಾರ,  ಯಾವ ವ್ಯಕ್ತಿಗೆ ಹನುಮಂತನ ಆಶೀರ್ವಾದ ಇರುತ್ತದೆಯೋ ಅಂತಹ ವ್ಯಕ್ತಿಗೆ ಕರ್ಮಫಲ ದಾತ ಶನಿ ಮತ್ತು ಯಮರಾಜ ಇಬ್ಬರೂ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. . ಅಂತಹ ಪರಿಸ್ಥಿತಿಯಲ್ಲಿ, ಶನಿಯ ಕೋಪವನ್ನು ತಪ್ಪಿಸಲು, ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ. ಅಲ್ಲದೆ, ಈ ದಿನ ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಪಠಿಸಿ. 

ಇದನ್ನೂ ಓದಿ- Guru Margi 2022: ಗುರುವಿನ ನೇರ ನಡೆಯಿಂದ 'ಗಜಕೇಸರಿ ಯೋಗ', ಈ 3 ರಾಶಿಯವರಿಗೆ ಭಾರೀ ಅದೃಷ್ಟ

* ಮಂಗಳವಾರದಂದು ತುಳಸಿ ಎಲೆಗಳ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿದರೆ ಪ್ರಯೋಜನವಾಗುತ್ತದೆ. ಮಂಗಳವಾರದಂದು ತುಳಸಿಯ 108 ಎಲೆಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಮಾಲೆಯನ್ನು ಮಾಡಿ ಮತ್ತು ಹನುಮಾನ್ ದೇವಸ್ಥಾನಕ್ಕೆ ಹೋಗಿ ಬಜರಂಗಬಲಿಗೆ ಅರ್ಪಿಸಿ. ಇದರಿಂದ ಮಂಗಳ ಗ್ರಹದ ದುಷ್ಪರಿಣಾಮಗಳು ನಿವಾರಣೆಯಾಗಿ ಶನಿದೇವನ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News