ಬಾತ್‌ ರೂಮ್‌ನಲ್ಲಿ ಫೋನ್ ಬಳಸುತ್ತೀರಾ..? ಈ ವಿಚಾರ ತಿಳಿದರೆ ಜನ್ಮದಲ್ಲೇ ಬಳಸುವುದಿಲ್ಲ ಬಿಡಿ..

Using Phone in Toilet side effects : ನೀವು ಬಾತ್ ರೂಂನಲ್ಲಿ ಫೋನ್ ಬಳಸುತ್ತಿದ್ದೀರಾ..? ಹೌದು.. ಅಂದ್ರೆ, ನೀವು ಇದನ್ನು ತಿಳಿದಿರಬೇಕು. ಆರೋಗ್ಯ ತಜ್ಞರ ಪ್ರಕಾರ, ಟಾಯ್ಲೆಟ್‌ ರೂಮ್‌ನಲ್ಲಿ ಫೋನ್ ಬಳಸುವುದರಿಂದ ಪೈಲ್ಸ್ ಉಂಟಾಗುತ್ತದೆಯಂತೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ಓದಿ..

Written by - Krishna N K | Last Updated : Aug 31, 2024, 10:26 PM IST
    • ಹಲವರು ಫೋನ್ ಅನ್ನು ಟಾಯ್ಲೆಟ್‌ ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ.
    • ಟಾಯ್ಲೆಟ್‌ ರೂಮ್‌ನಲ್ಲಿ ಫೋನ್ ಬಳಸುವುದರಿಂದ ಪೈಲ್ಸ್ ಉಂಟಾಗುತ್ತದೆ
    • ಹಲವು ಗಂಭೀರ ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಬಾತ್‌ ರೂಮ್‌ನಲ್ಲಿ ಫೋನ್ ಬಳಸುತ್ತೀರಾ..? ಈ ವಿಚಾರ ತಿಳಿದರೆ ಜನ್ಮದಲ್ಲೇ ಬಳಸುವುದಿಲ್ಲ ಬಿಡಿ.. title=

Using smartphone in toilet : ನಮ್ಮಲ್ಲಿ ಹಲವರು ಫೋನ್ ಅನ್ನು ಟಾಯ್ಲೆಟ್‌ ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಫೋನ್‌ ಬಳಸುವ ಮೂಲಕ ಸಮಯವನ್ನು ಕಳೆಯುತ್ತಾರೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. 

ಈ ಅಭ್ಯಾಸದಿಂದ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ಮೊಬೈಲ್ ಪರದೆಯನ್ನು ಹತ್ತಿರದಿಂದ ನೋಡುವುದರಿಂದ ಕಣ್ಣಿಗೆ ಆಯಾಸ ಮತ್ತು ಕಣ್ಣುಗಳು ಕೆಂಪಾಗುವಂತಹ ಸಮಸ್ಯೆಗಳು ಉಂಟಾಗಬಹುದು. ಟಾಯ್ಲೆಟ್ ಸೀಟ್ ಮೇಲೆ ಕುಳಿತು ಮೊಬೈಲ್ ಬಳಸುವುದರಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

ಇದನ್ನೂ ಓದಿ:ಅಂಗಡಿಗಿಂತ ಮನೆಯಲ್ಲಿಯೇ ಈ ರೀತಿ ಚಿನ್ನದ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು..! ಹಣ ಉಳಿಯುತ್ತೆ..

ಅಲ್ಲದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಮೇಲಾಗಿ ತುಂಬಾ ಸಮಯ ಸೋಷಿಯಲ್ ಮೀಡಿಯಾ ಬಳಸುವುದರಿಂದ ಮನಸ್ಸಿಗೂ ಬೇಸರವಾಗುತ್ತದೆ. ಇದು ಖಿನ್ನತೆಗೆ ಕಾರಣವಾಗಬಹುದು. ಇದನ್ನು ಮಾಡುವುದರಿಂದ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತದೆ.. ಇದು ನಮ್ಮ ಸಂಬಂಧಗಳನ್ನು ಹಾಳು ಮಾಡುತ್ತದೆ.

ಸಾಮಾನ್ಯವಾಗಿ, ಶೌಚ ಗೃಹದಲ್ಲಿ ಮೊಬೈಲ್ ಬಳಸುವುದನ್ನು ವೈಧ್ಯರು ಶಿಫಾರಸು ಮಾಡುವುದಿಲ್ಲ. ಕೆಲವೊಮ್ಮೆ ಫೋನ್ ಬಳಸುವ ಅಗತ್ಯವಿದ್ದಲ್ಲಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಬಳಸಬಹುದು. ಮೊದಲನೆಯದಾಗಿ ಬಾತ್‌ ರೂಮ್‌ನಲ್ಲಿ ಹೆಚ್ಚಿನ ಆರ್ದ್ರತೆಯ ಮಟ್ಟದಿಂದಾಗಿ ಮೊಬೈಲ್ ಶಾರ್ಟ್ ಸರ್ಕ್ಯೂಟ್ನ ಅಪಾಯವಿದೆ. ಹಾಗಾಗಿ ಆರ್ದ್ರತೆಯ ಮಟ್ಟ ಕಡಿಮೆ ಇದ್ದಾಗ ಫೋನ್ ಬಳಸಬೇಕು. 

ಇದನ್ನೂ ಓದಿ:ಗೊರಕೆ ಹೊಡೆಯುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ..! ಕೂಡಲೇ ಎಚ್ಚರ ವಹಿಸಿ

ಸ್ನಾನ ಮಾಡುವಾಗ ಮೊಬೈಲ್ ಬಳಸಿದರೆ ಜಾರಿ ಬೀಳುವ ಅಪಾಯವಿದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾತ್ ರೂಂ ಫೋನ್ ಹೋಲ್ಡರ್ ಬಳಸುವುದು ತುಂಬಾ ಒಳ್ಳೆಯದು. ತೇವಾಂಶವು ಮೊಬೈಲ್ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಆ ಸಮಯದಲ್ಲಿ ಫೋನ್ ಬಳಕೆಯಲ್ಲಿಲ್ಲದಿದ್ದರೆ ಉತ್ತಮ. 

ಆರೋಗ್ಯದ ಅಪಾಯಗಳು: ಬಾತ್ ರೂಂನಲ್ಲಿ ಹೆಚ್ಚು ಹೊತ್ತು ಫೋನ್ ಬಳಸುವುದರಿಂದ ಪೈಲ್ಸ್ ಬರುವ ಅಪಾಯವಿದೆ. ಜತೆಗೆ ಮಲ ಹೊರಸೂಸುವ ಜಾಗದಲ್ಲಿ ಊತವೂ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಗುದನಾಳದ ಪ್ರದೇಶದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ರಕ್ತ ಬರಬಹುದು. ಅಲ್ಲದೆ, ಅರ್ಧ ಗಂಟೆ ಅಥವಾ ನಲವತ್ತೈದು ನಿಮಿಷ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ. ಇದು ಕಾಲರಾ, ಟೈಫಾಯಿಡ್ ಮತ್ತು ಹೆಪಟೈಟಿಸ್‌ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News