Shukra Gochar in Dhanu 2022 : ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು ಮತ್ತು ಸಮೃದ್ಧಿಯನ್ನು ದಯಪಾಲಿಸುವವನು ಎಂದು ಹೇಳಲಾಗುತ್ತದೆ. ಶುಕ್ರ ಪ್ರೀತಿ-ಪ್ರಣಯ, ಸೌಂದರ್ಯ ಮತ್ತು ಆಕರ್ಷಣೆಯ ಪ್ರತೀಕ ಕೂಡಾ ಹೌದು. ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದಾಗ ಅಥವಾ ಬೇರೆ ಗ್ರಹಗಳೊಂದಿಗೆ ಸಂಯೋಗಗೊಂಡಾಗ, ಅದು ಎಲ್ಲರ ಜನ್ಮ ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಡಿಸೆಂಬರ್ 5 ರಂದು, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಕಾರಣದಿಂದಾಗಿ 4 ರಾಶಿಯವರಿಗೆ ಶುಕ್ರ ಸಂಕ್ರಮಣವು ಶುಭ ಫಲವನ್ನೇ ಕರುಣಿಸಲಿದ್ದಾನೆ.
ಶುಕ್ರ ಸಂಚಾರದಿಂದ ಬೆಳಗುವುದು ಈ ರಾಶಿಯವರ ಅದೃಷ್ಟ :
ಮೇಷ ರಾಶಿ : ಶುಕ್ರ ಸಂಕ್ರಮಣವು ಮೇಷ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗಲಿದೆ. ಆದಾಯ ಹೆಚ್ಚಲಿದೆ. ಶುಕ್ರನ ದಯೆಯಿಂದ ದುಬಾರಿ ವಸ್ತುಗಳನ್ನು ಖರೀದಿಸಬಹುದು. ವೈವಾಹಿಕ ಜೀವನದಲ್ಲೂ ಸಂತೋಷ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.
ಇದನ್ನೂ ಓದಿ : Astro Tips: ಜಾತಕದಲ್ಲಿ ಈ ಗ್ರಹದ ದುರ್ಬಲ ಸ್ಥಾನ ಕೆಲಸ ಕಾರ್ಯಗಳಲ್ಲಿ ವಿಘ್ನಕ್ಕೆ ಕಾರಣ, ಈ ನಾಲ್ಕು ಉಪಾಯ ಅನುಸರಿಸಿ
ವೃಶ್ಚಿಕ ರಾಶಿ : ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಬಟ್ಟೆ ಮತ್ತು ಆಭರಣಗಳನ್ನು ಖರೀದಿಸಬಹುದು. ಆರ್ಥಿಕವಾಗಿ ಬಹಳಷ್ಟು ಲಾಭವಾಗಲಿದೆ. ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇದೆ. ಸಂಸಾರದಲ್ಲಿ ಸಂತಸ ಮೂಡಲಿದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿಯೂ ಯಶಸ್ಸು ಸಿಗಲಿದೆ.
ಸಿಂಹ ರಾಶಿ : ಸಿಂಹ ರಾಶಿಯವರ ಪ್ರೇಮ ಜೀವನಕ್ಕೆ ಸಂಬಂಧಿಸಿದಂತೆ ಶುಕ್ರ ಶುಭ ಫಲ ನೀಡಲಿದ್ದಾನೆ. ಹೊಸ ಉದ್ಯೋಗ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ. ನಿಮ್ಮ ನೀರೀಕ್ಷೆಗಳು ನಿಜವಾಗಲಿದೆ. ಆದಾಯವನ್ನು ಹೆಚ್ಚಿಸುವ ಅವಕಾಶಗಳು ನಿಮಗೆ ಒದಗಿ ಬರುತ್ತವೆ.
ಇದನ್ನೂ ಓದಿ : Chanakya Niti : ಈ ವಸ್ತುಗಳು ಕೊಳೆಯಲ್ಲಿ ಬಿದ್ದರೆ, ತೆಗೆದುಕೊಳ್ಳಲು ಹಿಂಜರಿಯದಿರಿ, ಇದರಿಂದಿದೆ ಅದೃಷ್ಟ!
ಕುಂಭ ರಾಶಿ : ಶುಕ್ರನು ತನ್ನ ರಾಶಿಯನ್ನು ಬದಲಿಸಿ ಧನು ರಾಶಿ ಪ್ರವೇಶಿಸುತ್ತಿರುವುದು ಕುಂಭ ರಾಶಿಯವರಿಗೆ ಶುಭ ಪರಿಣಾಮ ಬೀರುತ್ತದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಹರಿದು ಬರುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಮಾಧುರ್ಯ ಹೆಚ್ಚಾಗುತ್ತದೆ. ಸಾಲದಿಂದ ಮುಕ್ತಿ ಸಿಗಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.