ಈ ದಿನ ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಸಮೃದ್ದಿಗಾಗಿ ಒಂದು ಕೆಲಸ ಮಾಡಿದರೆ ಸಾಕು..! ತಪ್ಪಿದರೆ ಮತ್ತೆ ಒಂದು ವರ್ಷ ಕಾಯಬೇಕು

ಪೌಷ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಈ ದಿನದಂದು ಉಪವಾಸ ಕೈಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 

Written by - Ranjitha R K | Last Updated : Dec 16, 2021, 09:41 AM IST
  • ಡಿಸೆಂಬರ್ 30 ರಂದು ಸಫಲ ಏಕಾದಶಿ
  • ಪ್ರಗತಿಯನ್ನು ಪಡೆಯಲು, ಈ ಪೂಜೆಯನ್ನು ಮಾಡಿ
  • ವಿಷ್ಣುವಿನ ಕೃಪೆಯಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ.
ಈ ದಿನ ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಸಮೃದ್ದಿಗಾಗಿ ಒಂದು ಕೆಲಸ ಮಾಡಿದರೆ ಸಾಕು..! ತಪ್ಪಿದರೆ ಮತ್ತೆ ಒಂದು ವರ್ಷ ಕಾಯಬೇಕು  title=
ಡಿಸೆಂಬರ್ 30 ರಂದು ಸಫಲ ಏಕಾದಶಿ (file photo)

ನವದೆಹಲಿ : 2021ನೇ ವರ್ಷಕ್ಕೆ ಕಾಲಿಡಲಿದ್ದು, ಹೊಸ ವರ್ಷ ಆರಂಭವಾಗಲಿದೆ. ಮುಂಬರುವ ವರ್ಷವು ಅತ್ಯಂತ ಯಶಸ್ವಿಯಾಗಿರಬೇಕು ಎಂದು ಬಯಸಿದರೆ ಇದಕ್ಕಾಗಿ ಉತ್ತಮ ಅವಕಾಶವಿದೆ. ಡಿಸೆಂಬರ್ 30 ರಂದು ಸಫಲ ಏಕಾದಶಿ (saphala ekadashi).  ಈ ದಿನದಂದು ವಿಶೇಷವಾದ ಕಾರ್ಯವನ್ನು ಮಾಡುವುದರಿಂದ ವಿಷ್ಣುವನ್ನು (Lord Vishnu) ಒಲಿಸಿಕೊಳ್ಳಬಹುದು. ಅಲ್ಲದೆ ವಿಷ್ಣು ನಮ್ಮ ಮನದ ಆಸೆಯನ್ನು ಈಡೆರಿಸುತ್ತಾನೆ. ಮಾರಾಲ್ಲ ಜೀವನದಲ್ಲಿ ಸಾಕಷ್ಟು ಪ್ರಗತಿ ಸಿಗುತ್ತದೆ. ಇದಲ್ಲದೆ, ಇದು 2021ರ ಕೊನೆಯ ಏಕಾದಶಿಯಾಗಿದೆ. 

 ಸಫಲ ಏಕಾದಶಿ ಅನದರೆ ಏನು ?  
ಪೌಷ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ (saphala ekadashi). ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ (Astrology), ಈ ದಿನದಂದು ಉಪವಾಸ ಕೈಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ದಿನದಂದು ಉಪವಾಸ ಆಚರಿಸುವವರ ಮೇಲೆ ವಿಷ್ಣುವಿನ (Lord Vishnu) ವಿಶೇಷ ಅನುಗ್ರಹವಿರುತ್ತದೆ. ಪುರಾಣಗಳ ಪ್ರಕಾರ, ಮಹಾಭಾರತಕ್ಕೂ ಮೊದಲು ಪಾಂಡವರು ಸಫಲ ಏಕಾದಶಿಯ ಉಪವಾಸವನ್ನು ಆಚರಿಸಿದ್ದರೂ ಎಂದು ಹೇಳಲಾಗುತ್ತದೆ.  

ಇದನ್ನೂ ಓದಿ : ನಾಳೆಯಿಂದ ಧನುರ್ ಮಾಸ ಆರಂಭ, ಈ ತಿಂಗಳಲ್ಲಿಯೂ ನಡೆಸಬಹುದು ಈ ಶುಭ ಕಾರ್ಯಗಳನ್ನು

ಮಂಗಳಕರ ಸಮಯ ಮತ್ತು ಪೂಜಾ ವಿಧಾನ : 
ಸಫಲ ಏಕಾದಶಿ ಡಿಸೆಂಬರ್ 29 ರಂದು ಸಂಜೆ 04:12 ರಿಂದ ಪ್ರಾರಂಭವಾಗಿ, ಡಿಸೆಂಬರ್ 30 ರಂದು ಮಧ್ಯಾಹ್ನ 01:40 ರವರೆಗೆ ಇರುತ್ತದೆ. ಪೂಜೆಗೆ ಶುಭ ಸಮಯ ಮಧ್ಯಾಹ್ನ 1 ಗಂಟೆಯ ಮೊದಲು ಇರುತ್ತದೆ. ಆದರೆ ಉಪವಾಸ ಪಾರಣ ಡಿಸೆಂಬರ್ 31 ರಂದು ಬೆಳಿಗ್ಗೆ 07:14 ರಿಂದ 09:18 ನಿಮಿಷಗಳವರೆಗೆ ಇರುತ್ತದೆ. ಸಫಲ ಏಕಾದಶಿಯ ದಿನ ಪ್ರಾತಃಕಾಲ ಸ್ನಾನ ಮಾಡಿ ವಿಷ್ಣುವಿನ (Lord Vishnu) ದರ್ಶನ ಪಡೆದು ವ್ರತವನ್ನು ಆರಂಭಿಸಬೇಕು. 

ಪೂಜೆಗಾಗಿ ಅರಿಶಿನ-ಅಕ್ಷತೆಯನ್ನು ದೇವರಿಗೆ ಅರ್ಪಿಸಿ. ನಂತರ ಧೂಪ-ದೀಪವನ್ನು ಬೆಳಗಬೇಕು. ಹಣ್ಣುಗಳು, ಪಂಚಾಮೃತ, ತೆಂಗಿನಕಾಯಿ, ವೀಳ್ಯದೆಲೆ, ಆಮ್ಲಾ, ದಾಳಿಂಬೆ ಮತ್ತು ಲವಂಗ ಇತ್ಯಾದಿಗಳನ್ನು ಅರ್ಪಿಸಿ. ಉಪವಾಸದ ದಿನದಂದು ಗರಿಷ್ಠ ಸಮಯದವರೆಗೆ ಶ್ರೀ ಹರಿ ನಾಮವನ್ನು ಜಪಿಸಲು ಪ್ರಯತ್ನಿಸಿ. ಇದಲ್ಲದೇ ಉಪವಾಸದ ಮರುದಿನ ಬಡವರಿಗೆ ಅನ್ನದಾನ ಮಾಡಿ. 

ಇದನ್ನೂ ಓದಿ : Vastu Shastra: ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದೇ? ನಿಮಗಿದು ಗೊತ್ತಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News