White Topaz Benefits - ಶುಕ್ರನಿಗೆ ಸಂಬಂಧಿಸಿದ ಈ ರತ್ನ ಧರಿಸುವುದರಿಂದ ಹಣದ ಹೊಳೆಯೇ ಹರಿದುಬರುತ್ತದೆ, ಆದರೆ ಈ 3 ರಾಶಿಯವರು ಎಂದಿಗೂ ಧರಿಸಬೇಡಿ

Silver Topaz Benefits - ಬಿಳಿ ಬಣ್ಣದ ನೀಲಮಣಿ (White Topaz) ಧರಿಸುವುದರಿಂದ ಜೀವನ ಸಾಕಷ್ಟು ಸಂಪನ್ನಭರಿತವಾಗುತ್ತದೆ. ಇದರೊಂದಿಗೆ ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಶುಕ್ರನ ಅಶುಭ ಪ್ರಭಾವವನ್ನು ಕಡಿಮೆ ಮಾಡಲು ಈ ರತ್ನವನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ.

Written by - Nitin Tabib | Last Updated : Mar 5, 2022, 07:01 PM IST
  • ಈ ಮಣಿ ಶುಕ್ರನಿಗೆ ಸಂಬಂಧಿಸಿದೆ
  • ಜೀವನ ಸಂಪನ್ನಭರಿತವಾಗುತ್ತದೆ
  • ಈ ಮೂರು ರಾಶಿಯವರು ಧರಿಸಬಾರದು
White Topaz Benefits - ಶುಕ್ರನಿಗೆ ಸಂಬಂಧಿಸಿದ ಈ ರತ್ನ ಧರಿಸುವುದರಿಂದ ಹಣದ ಹೊಳೆಯೇ ಹರಿದುಬರುತ್ತದೆ, ಆದರೆ ಈ 3 ರಾಶಿಯವರು ಎಂದಿಗೂ ಧರಿಸಬೇಡಿ title=
Silver Topaz, Silver Topaz Benefits

ನವದೆಹಲಿ: White Topaz Wearing Rules - ಜ್ಯೋತಿಷ್ಯದಲ್ಲಿ (Astrology), ಪ್ರತಿಯೊಂದು ಗ್ರಹಕ್ಕೂ ವಿಭಿನ್ನ ರತ್ನಗಳನ್ನು ಹೇಳಲಾಗಿದೆ. ವಜ್ರವನ್ನು ಹೊರತುಪಡಿಸಿ, ಶುಕ್ರ ಗ್ರಹವನ್ನು ಬಲಪಡಿಸಲು ಮತ್ತು ಐಷಾರಾಮಿ ಜೀವನಕ್ಕಾಗಿ ಬಿಳಿ ನೀಲಮಣಿಯನ್ನು (Gemstone Benefits)ಧರಿಸಲಾಗುತ್ತದೆ. ಈ ಹರಳಿನ ಪ್ರಭಾವದಿಂದ ಸುಖ ಸಂತೋಷವು ಪ್ರಾಪ್ತಿಯಾಗುತ್ತದೆ. ಇದರೊಂದಿಗೆ ಜೀವನದಲ್ಲಿ ಎಲ್ಲಾ ಐಷಾರಾಮಿ ಸಾಧನಗಳು ಲಭ್ಯವಾಗುತ್ತವೆ. ಬಿಳಿ ನೀಲಮಣಿಯ ಅನುಕೂಲಗಳು, ಅನಾನುಕೂಲಗಳು ಮತ್ತು ಅದನ್ನು ಧರಿಸುವ ಸರಿಯಾದ ವಿಧಾನ ಯಾವುದು ತಿಳಿದುಕೊಳ್ಳೋಣ ಬನ್ನಿ.

ಸಂಪತ್ತು ಮತ್ತು ಜ್ಞಾನದಲ್ಲಿ ಹೆಚ್ಚಳ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಿಳಿ ನೀಲಮಣಿ ಧರಿಸುವುದರಿಂದ ಜೀವನದಲ್ಲಿ ಸಮೃದ್ಧಿ ಬರುತ್ತದೆ. ಅಲ್ಲದೆ ಕಲೆಗಾರರು, ಸಂಗೀತಗಾರರು, ಕಲಾವಿದರು, ಗಾಯಕರು, ಬರಹಗಾರರು ಬಿಳಿ ನೀಲಮಣಿ ಧರಿಸಬಹುದು. ಮತ್ತೊಂದೆಡೆ, ಜಾತಕದಲ್ಲಿ ಶುಕ್ರ ಅಶುಭ ಪರಿಣಾಮಗಳನ್ನು ನೀಡುತ್ತಿದ್ದರೆ, ಬಿಳಿ ನೀಲಮಣಿ ಧರಿಸಬಹುದು.

ಬಿಳಿ ನೀಲಮಣಿಯ ಇತರ ಪ್ರಯೋಜನಗಳು
ಮಕ್ಕಳ ಮತ್ತು ಗಂಡನ ಸುಖದ ಕೊರತೆಯಿರುವವರು ನೀಲಮಣಿ ಧರಿಸುವುದರಿಂದ ಪ್ರಯೋಜನ ಸಿಗಲಿದೆ. ಇದಲ್ಲದೆ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಮದುವೆಯಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ.  

ಬಿಳಿ ನೀಲಮಣಿಯನ್ನು ಯಾರು ಧರಿಸಬಾರದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಬಿಳಿ ನೀಲಮಣಿಯನ್ನು ಧರಿಸಬಾರದು. ಏಕೆಂದರೆ ಈ ರಾಶಿಯೊಂದಿಗೆ ಶುಕ್ರನಿಗೆ (Venus Planet) ವೈರತ್ವದ ಸಂಬಂಧವಿದೆ. ಇದರೊಂದಿಗೆ ಕುಂಭ ರಾಶಿಯವರು ಕೂಡ ಈ ರತ್ನವನ್ನು ಧರಿಸುವುದನ್ನು ತಪ್ಪಿಸಬೇಕು. ಮಕರ ರಾಶಿಯವರು ಕೂಡ ಈ ರತ್ನವನ್ನು ಧರಿಸುವುದರಿಂದ ದೂರವಿರಬೇಕು.

ಇದನ್ನೂ ಓದಿ-Health Tips: ನೀವೂ ಸಹ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುತ್ತೀರಾ..?

ಬಿಳಿ ನೀಲಮಣಿ (Silver Topaz) ಧರಿಸುವುದು ಹೇಗೆ?
ಬಿಳಿ ನೀಲಮಣಿಯನ್ನು ಬೆಳಗ್ಗೆ ಸ್ನಾನ ಮಾಡಿದ ನಂತರವೇ ಧರಿಸಬೇಕು. ಇದನ್ನು ಧರಿಸುವ ಮೊದಲು, ಈ ರತ್ನಕ್ಕೆ ಸಂಬಂಧಿಸಿದ ಗ್ರಹದ ಮೂಲಮಂತ್ರ, ಬೀಜ ಮಂತ್ರ ಅಥವಾ ವೇದಮಂತ್ರವನ್ನು 108 ಬಾರಿ ಜಪಿಸಬೇಕು. ಅದರ ನಂತರವೇ ಅದನ್ನು ಧರಿಸಬೇಕು. ಬಿಳಿ ನೀಲಮಣಿಯನ್ನು ಪುರುಷರು ತನ್ನ ಬಲಗೈಯಲ್ಲಿ ಮತ್ತು ಮಹಿಳೆಯಾರು  ತಮ್ಮ ಎಡಗೈಯಲ್ಲಿ ಧರಿಸಬೇಕು.

ಇದನ್ನೂ ಓದಿ-Shukra Gochar 2022: ಶುಕ್ರನ ಕೃಪೆಯಿಂದ ಕೆಲವೇ ದಿನಗಳಲ್ಲಿ ಸಿರಿವಂತರಾಗಲಿದ್ದಾರೆ ಈ 3 ರಾಶಿಯವರು

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Cholesterol: ಕೊಲೆಸ್ಟ್ರಾಲ್ ಹೆಚ್ಚಾಗುವಿಕೆ ಅಪಾಯದ ಗಂಟೆ! ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News