ಭಾರತದ 'ಬ್ರಹ್ಮೋಸ್' ಗಿಂತಲೂ ಬಲಿಷ್ಠ ಪಾಕ್ ಖರೀದಿಸುತ್ತಿರುವ ಈ ಮಿಸೈಲ್!

ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಗಿಂತಲೂ ಪವರ್ ಫುಲ್ ಆದ ಸೂಪರ್ ಸಾನಿಕ್ ಕ್ಷಿಪಣಿಯನ್ನು ಚೀನಾದ ಮೂಲಕ ಪಾಕಿಸ್ತಾನ ಖರಿದಿಸುತ್ತಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Last Updated : Oct 17, 2018, 06:32 PM IST
ಭಾರತದ 'ಬ್ರಹ್ಮೋಸ್' ಗಿಂತಲೂ ಬಲಿಷ್ಠ ಪಾಕ್ ಖರೀದಿಸುತ್ತಿರುವ ಈ ಮಿಸೈಲ್! title=

ನವದೆಹಲಿ: ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಗಿಂತಲೂ ಪವರ್ ಫುಲ್ ಆದ ಸೂಪರ್ ಸಾನಿಕ್ ಕ್ಷಿಪಣಿಯನ್ನು ಚೀನಾದ ಮೂಲಕ ಪಾಕಿಸ್ತಾನ ಖರಿದಿಸುತ್ತಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಹೆಚ್ಡಿ -1 ಕ್ಷಿಪಣಿಯು ಇತರ ಸೂಪರ್ಸಾನಿಕ್ ಕ್ಷಿಪಣಿಗಳಂತೆ ಇರುವುದಿಲ್ಲ, ಇದು ಕಡಿಮೆ ಇಂಧನದ ಜೊತೆಗೆ ಮತ್ತು ವೇಗವಾಗಿ ದೂರದ ಪ್ರದೇಶಕ್ಕೆ ಹಾರಬಲ್ಲದು ಎಂದು ಗ್ಲೋಬಲ್ ಟೈಮ್ಸ್ ನಲ್ಲಿ  ವರದಿ ಮಾಡಿದೆ. ಈ ಘೋಷಣೆಯ ನಂತರ ಪಾಕಿಸ್ಥಾನವು ಚೀನಾ ಜೊತೆಗೆ ಡ್ರೋನ್ ಒಪ್ಪಂದವನ್ನು ಸಹ ಮಾಡಲಾಗಿದೆ.ಈ ಒಪ್ಪಂದದ ಅಣತಿಯಂತೆ ಪಾಕಿಸ್ತಾನ ಚೀನಾದ ಮೂಲಕ ಒಟ್ಟು 48 ಡ್ರೋನ್ ಗಳನ್ನು ಖರೀದಿಸಲಿದೆ ಎನ್ನಲಾಗಿದೆ

ಕ್ಷಿಪಣಿಯ ಯಶಸ್ವಿ ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ಮಿಲಿಟರಿ ತಜ್ಞರು "ಎಚ್ಡಿ -1 ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ  ಸ್ಪರ್ಧೆಯನ್ನು ಒಡ್ಡಲಿದೆ" ಎಂದು ತಿಳಿಸಿದ್ದಾರೆ.ದಕ್ಷಿಣ ಚೀನಾ ಮೂಲದ ಗುವಾಂಗ್ಡಾಂಗ್ ಹಾಂಗ್ಡಾ ಬ್ಲಾಸ್ಟಿಂಗ್ ಕಂಪನಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು. ಉತ್ತರ ಚೀನಾ ಗುಪ್ತ ಸ್ಥಳವೊಂದರಲ್ಲಿ ಉಡಾವಣಾ ಪರೀಕ್ಷೆ , ಶಕ್ತಿ ಮತ್ತು ವಿಮಾನ ನಿಯಂತ್ರಣ ವ್ಯವಸ್ಥೆಯನ್ನು ಪರಿಶೀಲಿಸಿದೆ ಎಂದು ಗ್ಲೋಬಲ್ ಟೈಮ್ಸ್ ಕಂಪನಿಯ ಹೇಳಿಕೆಯನ್ನು ಉಲ್ಲೇಖಿಸಿದೆ.

ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿ ಹೆಚ್ಚು ವೆಚ್ಚದಾಯಕ, ಕಡಿಮೆ ಉಪಯುಕ್ತ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ, ಎಂದು ಬಿಜಿಂಗ್ ಮೂಲದ ಮಿಲಿಟರಿ ತಜ್ಞ ವೆಯಿ ತಿಳಿಸಿದ್ದಾರೆ.
 

Trending News