ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.
ಗುರುವಾರ, ಡಿಸೆಂಬರ್ 29ರಂದು ಭಾರತೀಯ ವಾಯು ಸೇನೆ (ಐಎಎಫ್) ಹೆಚ್ಚಿನ ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಆವೃತ್ತಿಯ ಪರೀಕ್ಷಾ ಪ್ರಯೋಗ ನಡೆಸಿತು. ಈ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ 400 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು.
Brahmos Missile - ಭಾರತವನ್ನು ಇಬ್ಭಾಗಿಸುವ ಕನಸು ಕಾಣುತ್ತಿರುವ ಪಾಕಿಸ್ತಾನದ ಪಾಲಿಗೆ ನಿದ್ದೆಗೆಡಿಸುವ ಸುದ್ದಿಯೊಂದು ಪ್ರಕಟವಾಗಿದೆ. ಭಾರತ ಬುಧವಾರ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿ ತನ್ನ 'ಬಾಹುಬಲಿ' ಕ್ಷಿಪಣಿ (Missile) ಪರೀಕ್ಷೆಯನ್ನು ಕೈಗೊಂಡಿದೆ. ಈ ಕ್ಷಿಪಣಿ ಯಾವುದೇ ಸುಳಿವು ನೀಡದೆ ಪಾಕ್ ಹಾಗೂ ಚೀನಾವನ್ನು (China) ಪ್ರವೇಶಿಸಿ ತನ್ನ ನಿರ್ಧಿಷ್ಟ ಗುರಿಯನ್ನು ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಚೀನಾದ ಪ್ರತಿಯೊಂದು ನಡೆಗೂ ಭಾರತ ಸೂಕ್ತ ಉತ್ತರ ನೀಡುತ್ತಿದೆ. ಈ ಬಾರಿ ಭಾರತವು ಇಂತಹ ಬ್ರಹ್ಮಾಸ್ತ್ರವನ್ನು ನಡೆಸಿದ್ದು, ಚೀನಾ ಉದ್ವಿಗ್ನತೆಗೆ ಒಳಗಾಗಿದೆ. ಅರೇಬಿಯನ್ ಸಮುದ್ರದಲ್ಲಿನ ಗುರಿಗಳನ್ನು ಧ್ವಂಸಗೊಳಿಸಿದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ, ಚೀನಾದ ಎಲ್ಲಾ ವಂಚನೆಗಳಿಗೆ ಸೂಕ್ತವಾದ ಪ್ರತಿಕ್ರಿಯೆಯಾಗಿದೆ.
ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಲಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಪ್ರಕಟಣೆಯಲ್ಲಿ ತಿಳಿಸಿದೆ.
ತಂಜಾವೂರಿನಲ್ಲಿ ಸುಖೋಯ್ ಇರುವಿಕೆಯು ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದ ಭದ್ರತೆಯನ್ನು ಬಲಪಡಿಸುತ್ತದೆ. ಆದ್ದರಿಂದ ಇಂದು ನಾವು ದಕ್ಷಿಣ ಭಾರತದಲ್ಲಿ ಸುಖೋಯ್ ಮತ್ತು ಬ್ರಹ್ಮೋಸ್ ಶುಭ ಆರಂಭದ ವಿಶ್ಲೇಷಣೆ ಮಾಡುತ್ತೇವೆ. ಇಂದು, ಮೊದಲ ಬಾರಿಗೆ, ಭಾರತೀಯ ವಾಯುಪಡೆಯು ತನ್ನ ಪ್ರಬಲ ಫೈಟರ್ ಜೆಟ್ ಸುಖೋಯ್ 30-MKIನ ಸ್ಕ್ವಾಡ್ರನ್(Squadron) ಅನ್ನು ದಕ್ಷಿಣ ಭಾರತದಲ್ಲಿ ನಿಯೋಜಿಸಿದೆ.
ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಗಿಂತಲೂ ಪವರ್ ಫುಲ್ ಆದ ಸೂಪರ್ ಸಾನಿಕ್ ಕ್ಷಿಪಣಿಯನ್ನು ಚೀನಾದ ಮೂಲಕ ಪಾಕಿಸ್ತಾನ ಖರಿದಿಸುತ್ತಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.