ನಿಮಗೆ ಹಸಿವಾಗುತ್ತಿಲ್ಲವೇ, ಹಾಗಾದರೇ ಅದೂ ಕೂಡ ಒಂದು ಖಾಯಿಲೆ ...!

Helath Tips: ದೇಹದ ಮೊದಲ ಅವಶ್ಯಕತೆ ಆಹಾರ. ತಿನ್ನುವುದು ನಮಗೆ ಕೆಲಸ ಮಾಡಲು ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತದೆ. ಆರೋಗ್ಯಕರವಾಗಿರಲು ಸರಿಯಾಗಿ ತಿನ್ನುವುದು ಅತ್ಯಗತ್ಯ, ಆದರೆ ಒತ್ತಡದ ಜೀವನಶೈಲಿ ಆಹಾರ ಪದ್ಧತಿಯನ್ನು ಹದಗೆಡಿಸಿದೆ. ಸರಿಯಾದ ಆಹಾರವನ್ನು ಸೇವಿಸದ ಕಾರಣ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.  ಸರಿಯಾದ ಪ್ರಮಾಣದ ಆಹಾರವನ್ನು ಸೇವಿಸದಿರುವುದು ಆಯಾಸ ಮತ್ತು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ.   

Written by - SHILPA RAJAN | Edited by - Yashaswini V | Last Updated : Nov 17, 2022, 07:20 AM IST
  • ಹಸಿವು ಕಡಿಮೆಯಾಗಲು ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಕೂಡ ಒಂದು ಕಾರಣ.
  • ಇದರಲ್ಲಿ ವೈರಲ್ ಸೋಂಕಿನಿಂದಾಗಿ ಹೊಟ್ಟೆಯಲ್ಲಿ ಉರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
  • ಒತ್ತಡ ಮತ್ತು ಖಿನ್ನತೆ ಇದ್ದರೆ, ಅದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ.
ನಿಮಗೆ ಹಸಿವಾಗುತ್ತಿಲ್ಲವೇ, ಹಾಗಾದರೇ ಅದೂ ಕೂಡ ಒಂದು ಖಾಯಿಲೆ ...! title=
Reasons You Don t Feel Hungry

Helath Tips: ಹಸಿವು ಎನ್ನುವುದು ಮಾನವನ ಸಹಜ ಭಾವನೆ. ಹೊಟ್ಟೆಯಲ್ಲಿರುವ ಆಹಾರ ಜೀರ್ಣವಾದಾಗ ಸಹಜವಾಗಿ ಹಸಿವಿನ ಭಾವನೆ ಮೆದುಳಿಗೆ ಬರುತ್ತದೆ. ಆದರೆ, ನೀವು ಖಾಲಿ ಹೊಟ್ಟೆಯಲ್ಲಿದ್ದರೂ ನಿಮಗೆ ಹಸಿವಾಗುತ್ತಿಲ್ಲ ಎಂದರೆ ಎಚ್ಚರ ನಿಮ್ಮ ದೇಹದಲ್ಲಿ ಎಲ್ಲವೂ ಸರಿ ಇಲ್ಲ ಎಂದರ್ಥ. ತಿನ್ನುವ ಆಸಕ್ತಿಯ ಕೊರತೆ ಅನೇಕ ರೋಗಗಳ ಲಕ್ಷಣ. ಒಂದೊಂದ್ಸಾರಿ ಏನನ್ನೂ ತಿನ್ನೋಕೆ ಮನಸಾಗುವುದಿಲ್ಲ ಅದು ಬೇರೆ ವಿಷಯ. ಆದರೆ ಈ ಸಮಸ್ಯೆ ಪ್ರತಿದಿನ ಮರುಕಳಿಸಿದರೆ ನೀವು ಗಮನವಹಿಸಬೇಕಾಗತ್ತೆ. ಏಕೆಂದರೆ ಇದು ಅನೋರೆಕ್ಸಿಯಾ ನರ್ವೋಸಾ ಎಂಬ ಖಾಯಿಲೆಯ ಲಕ್ಷಣವೂ ಆಗಿರಬಹುದು.

ಏನಿದು ಅನೋರೆಕ್ಸಿಯಾ ನರ್ವೋಸಾ?
ಸಮಯಕ್ಕೆ ಸರಿಯಾಗಿ ನಿಮಗೆ ಹಸಿವಾಗದಿದ್ದರೆ ಅದು ಅನೋರೆಕ್ಸಿಯಾ ನರ್ವೋಸಾ ಖಾಯಿಲೆಯ ಲಕ್ಷಣ. ಹೌದು ಕೆಲವರು ಎಲ್ಲಿ ಹೆಚ್ಚಾಗಿ ತಿಂದರೆ ತೂಕ ಹೆಚ್ಚಾಗತ್ತೋ ಅನ್ನೋ ಭಯದಲ್ಲಿ ತುಂಬಾ ಕಡಿಮೆ ಆಹಾರವನ್ನು ಸೇವಿಸುತ್ತಾರೆ. ತುಂಬಾ ಕಡಿಮೆ ಎನ್ನುವುದಕ್ಕಿಂತ ಅವರು ಆರೋಗ್ಯವಾಗಿರಲು ಸಾಕಾಗುವಷ್ಟು ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ಈ ಖಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ.

ಬುಲಿಮಿಯಾ ನರ್ವೋಸಾದಲ್ಲಿ, ಒಬ್ಬ ವ್ಯಕ್ತಿಯು ತನಗೆ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾನೆ ಮತ್ತು ಯಾವಾಗಲೂ ತೂಕದ ಬಗ್ಗೆ ಚಿಂತೆ ಮಾಡುತ್ತಾನೆ. ಅನೇಕ ಬಾರಿ ಅಂತಹ ಜನರು ಆಹಾರ ವಿಷಯದಲ್ಲಿ ದೂರವಿರುತ್ತಾರೆ, ಆದರೆ ತೂಕವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ ಅದರೆ  ಅವರಿಗೆ  ತಮ್ಮ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅನೋರೆಕ್ಸಿಯಾ ಮತ್ತು ಬುಲಿಮಿಯಾ ಸಾಮಾನ್ಯವಾಗಿ 15 ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ 10 ಪಟ್ಟು ಹೆಚ್ಚು ಸಾಮಾನ್ಯವಾಗಿದೆ.

ಇದನ್ನೂ ಓದಿ- Back Pain: ಬೆನ್ನು ನೋವು ಈ ವಿಟಮಿನ್ ಕೊರತೆಯ ಸಂಕೇತವೂ ಆಗಿರಬಹುದು!

- ಇನ್ನು ಹಸಿವು ಕಡಿಮೆಯಾಗಲು ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಕೂಡ ಒಂದು ಕಾರಣ. ಇದರಲ್ಲಿ ವೈರಲ್ ಸೋಂಕಿನಿಂದಾಗಿ ಹೊಟ್ಟೆಯಲ್ಲಿ ಉರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಒತ್ತಡ ಮತ್ತು ಖಿನ್ನತೆ ಇದ್ದರೆ, ಅದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಜ್ವರದ ಸಮಯದಲ್ಲಿ ಕೂಡ ಹಸಿವು ಕಡಿಮೆಯಾಗುತ್ತದೆ.  ಹಸಿವು ಕಡಿಮೆಯಾಗುತ್ತಿದ್ದರೆ ಮತ್ತು ತೂಕದಲ್ಲಿ ನಿರಂತರ ಇಳಿಕೆ ಕಂಡುಬಂದರೆ, ಅದು ಟಿಬಿಯ ಲಕ್ಷಣವೂ ಆಗಿರಬಹುದು. ದಿನವಿಡೀ ಒತ್ತಡ, ರಾತ್ರಿ ನಿದ್ರೆ ಇಲ್ಲದಿರುವುದು ಸಹ ಹಸಿವಿನ ಕೊರತೆಗೆ ಕಾರಣವಾಗಬಹುದು. ಸರಿಯಾಗಿ ತಿನ್ನದೇ ಇದ್ದರೆ ದೇಹದಲ್ಲಿ ದಣಿವು ಉಂಟಾಗುತ್ತದೆ. 

- ದೇಹದ ಮೊದಲ ಅವಶ್ಯಕತೆ ಆಹಾರ. ತಿನ್ನುವುದು ನಮಗೆ ಕೆಲಸ ಮಾಡಲು ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತದೆ. ಆರೋಗ್ಯಕರವಾಗಿರಲು ಸರಿಯಾಗಿ ತಿನ್ನುವುದು ಅತ್ಯಗತ್ಯ, ಆದರೆ ಒತ್ತಡದ ಜೀವನಶೈಲಿ ಆಹಾರ ಪದ್ಧತಿಯನ್ನು ಹದಗೆಡಿಸಿದೆ. ಸರಿಯಾದ ಆಹಾರವನ್ನು ಸೇವಿಸದ ಕಾರಣ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.  ಸರಿಯಾದ ಪ್ರಮಾಣದ ಆಹಾರವನ್ನು ಸೇವಿಸದಿರುವುದು ಆಯಾಸ ಮತ್ತು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. 

- ಆಹಾರವನ್ನು ಜೀರ್ಣಿಸಿಕೊಳ್ಳುವುದರಿಂದ ಹಿಡಿದು ಶಕ್ತಿ ನೀಡುವವರೆಗೆ ಎಲ್ಲದರಲ್ಲೂ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ. ಹಾರ್ಮೋನುಗಳು ಹಸಿವನ್ನು ನಿಯಂತ್ರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಾರ್ಮೋನುಗಳ ಅಸಮತೋಲನವು ಹಸಿವಾಗದೇ  ಇರುವಂತೆ ಮಾಡುತ್ತದೆ.

- ಇದಲ್ಲದೆ, ಮಾನಸಿಕ ಒತ್ತಡವು ಹಸಿವನ್ನು ಕಡಿಮೆ ಮಾಡುತ್ತದೆ. ಕೆಲಸದ ಒತ್ತಡ ಮತ್ತು ಕೆಲಸದ ಹೊರೆ ಹಸಿವು ಕಡಿಮೆಯಾಗಲು ಮುಖ್ಯ ಕಾರಣಗಳು. ಇದರಿಂದಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೀರ್ಘಕಾಲದ ಕಾಯಿಲೆಗಳು ಮತ್ತು ಅವುಗಳ ಔಷಧಿಗಳು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

ಇದನ್ನೂ ಓದಿ- ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅವಶ್ಯವಾಗಿ ತಿನ್ನಿಸಬೇಕು ಈ ಐದು ಸೂಪರ್‌ಫುಡ್‌

ಹಾಗಾದರೆ ಹಸಿವನ್ನು ಹೆಚ್ಚಿಸಲು ಈ ರೀತಿ ಮಾಡಿ: 
ದಾಲ್ಚಿನ್ನಿ, ಕರಿಮೆಣಸು, ಪುದೀನ ಮತ್ತು ಸೆಲರಿಯಂತಹ ಮಸಾಲೆಗಳು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಅವುಗಳನ್ನು ಯಾವುದೇ ರೀತಿಯ ಆಹಾರದಲ್ಲಿ ಸೇವಿಸಬಹುದು. ಕೊತ್ತಂಬರಿಯು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಹೆಚ್ಚಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಕೊತ್ತಂಬರಿ ಸೊಪ್ಪಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಹಸಿವು ಹೆಚ್ಚಾಗಲು ಸಹಾಯ ಮಾಡುತ್ತದೆ. ಹಸಿವನ್ನು ಹೆಚ್ಚಿಸಲು ಶುಂಠಿ ರಾಮಬಾಣ. ಕೊತ್ತಂಬರಿ ಸೊಪ್ಪು ಮತ್ತು ಶುಂಠಿಯ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರ ರಸವನ್ನು ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ.

- ದಿನಕ್ಕೆ ಮೂರು ಬಾರಿ ಆಹಾರವನ್ನು ಸೇವಿಸಿ ಮತ್ತು ಅದು ಪೌಷ್ಟಿಕವಾಗಿರಬೇಕು.
- ಸರಿಯಾದ ಸಮಯಕ್ಕೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಮಾಡಿ.
- ಮೊಸರು, ಹಣ್ಣುಗಳು, ಮಜ್ಜಿಗೆ ಹೊರತುಪಡಿಸಿ, ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.
- ನಿಮಗೆ ತಿನ್ನಲು ಮತ್ತು ಕುಡಿಯಲು ತೊಂದರೆ ಇದ್ದರೆ, ನಿಧಾನವಾಗಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. 
- ಆರೋಗ್ಯಕರವಾದದ್ದನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News