Heart Attack Symptoms: ಇವೇ ನೋಡಿ ಹೃದಯಾಘಾತದ 5 ಮೂಲ ಲಕ್ಷಣಗಳು..!

ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತವನ್ನು ಪಡೆಯದ ಸ್ಥಿತಿಯನ್ನು ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯಲಾಗುತ್ತದೆ.

ಹೃದಯಾಘಾತ ಎಂದರೇನು?: ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತವನ್ನು ಪಡೆಯದಿದ್ದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ (CAD) ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿದೆ. ಇದರ ಸಾಮಾನ್ಯ ಕಾರಣವೆಂದರೆ ಹೃದಯ ಸ್ನಾಯುಗಳಿಗೆ ರಕ್ತದ ಹರಿವನ್ನು ನಿಲ್ಲಿಸುವ ಪರಿಧಮನಿಯ ತೀವ್ರವಾದ ಸೆಳೆತ ಅಥವಾ ಹಠಾತ್ ಸಂಕೋಚನ. ಹೃದಯಾಘಾತದ 5 ಮೂಲಭೂತ ಲಕ್ಷಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಎದೆ ನೋವು ಅಥವಾ ತೀವ್ರ ಅಸ್ವಸ್ಥತೆ ಉಂಟಾಗುವಿಕೆಯು ಹೃದಯಾಘಾತದ ಪ್ರಮುಖ ಲಕ್ಷಣಗಳಾಗಿವೆ. ಹೆಚ್ಚಿನ ಹೃದಯಾಘಾತಗಳು ಎದೆಯ ಮಧ್ಯದಲ್ಲಿ ಅಥವಾ ಎಡಭಾಗದಲ್ಲಿ ಕೆಲ ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಅಸ್ವಸ್ಥತೆಯನ್ನು ಒಳಗೊಂಡಿರುತ್ತದೆ.

2 /5

ಹಠಾತ್ ಆಗಿ ನಿಮಗೆ ದೌರ್ಬಲ್ಯ ಉಂಟಾಗುವಿಕೆ ಅಥವಾ ಮೂರ್ಛೆ ಭಾವನೆ ಬಂದರೆ ಅದು ಹೃದಯಾಘಾತ ಲಕ್ಷಣವಾಗಿರುತ್ತದೆ. ನೀವು ತಣ್ಣನೆಯ ಬೆವರಿನಿಂದ ಕೂಡ ಬಳಲಬಹುದು. ಈ ರೀತಿ ಆದಾಗ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸಬೇಕು.

3 /5

ದವಡೆ, ಕುತ್ತಿಗೆ ಅಥವಾ ಬೆನ್ನಿನಲ್ಲಿ ನೋವು ಅಥವಾ ಅಸ್ವಸ್ಥತೆ ಉಂಟಾಗುವುದು ಸಹ ಹೃದಯಾಘಾತದ ಲಕ್ಷಗಳಾಗಿವೆ.

4 /5

ಹಠಾತ್ ಹೃದಯಾಘಾತ ಸಂಭವಿಸುವವರಲ್ಲಿ ಸಾಮಾನ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾದಾಗ ಕೂಡಲೇ ನೀವು ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

5 /5

ಒಂದು ಅಥವಾ ಎರಡೂ ತೋಳುಗಳು ಮತ್ತು ಭುಜಗಳಲ್ಲಿ ನೋವು ಅಥವಾ ಅಸ್ವಸ್ಥತೆ ಉಂಟಾಗುವಿಕೆ ಸಹ ಹೃದಯಾಘಾತದ ಲಕ್ಷಣಗಳಾಗಿರುತ್ತವೆ. ಪ್ರಾರಂಭಿಕ ಹಂತದಲ್ಲಿಯೇ ನೀವು ಚಿಕಿತ್ಸೆ ಪಡೆದುಕೊಂಡರೆ ಹೃದಯಾಘಾತವನ್ನು ತಪ್ಪಿಸಬಹುದು.