Auspicious Colors According To Days : ಬಣ್ಣಗಳಿಗೆ ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಬಣ್ಣಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ನಾವು ನಮಗಿಷ್ಟವಾದ ಬಣ್ಣದ ಬಟ್ಟೆಗಳನ್ನು ಆರಿಸಿಕೊಳ್ಳುತ್ತೇವೆ. ಆದರೆ ಅದು ಜ್ಯೋತಿಷ್ಯದ ಪ್ರಕಾರ ತಪ್ಪು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಎನ್ನುವ ನಿಯಮ ಕೂಡಾ ಇದೆಯಂತೆ. ಹೀಗೆ ನಿಯಮಾನುಸಾರವಾಗಿ ಬಟ್ಟೆ ಧರಿಸಿದರೆ ಯಶಸ್ಸು ಖಂಡಿತಾ ಎನ್ನುತ್ತದೆ ಜ್ಯೋತಿಷ್ಯ.
ಭಾನುವಾರ :
ಈ ದಿನವು ಸೂರ್ಯನಿಗೆ ಅರ್ಪಣೆ. ಭಾನುವಾರ ಗುಲಾಬಿ, ತಿಳಿ ಕೆಂಪು, ಹಳದಿ ಅಥವಾ ತಿಳಿ ಕೇಸರಿ ಬಣ್ಣದ ಬಟ್ಟೆ ಧರಿಸಬೇಕು. ಗಾಢವಾದ ಕೇಸರಿ ಬಣ್ಣದ ಬಟ್ಟೆ ಧರಿಸುವುದರಿಂದ ಹಾನಿಯಾಗಬಹುದು.
ಇದನ್ನೂ ಓದಿ : Shani Gochar: 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಸಖತ್ ಲಾಭ
ಸೋಮವಾರ :
ಈ ದಿನ ಈಶ್ವರ ದೇವರರಿಗೆ ಅರ್ಪಣೆ. ಹಾಗೆಯೇ ಈ ದಿನವನ್ನು ಚಂದ್ರನಿಗೆ ಸಮರ್ಪಿಸಲಾಗಿದೆ. ಈ ದಿನ ನೀವು ತಿಳಿ ನೀಲಿ ಅಥವಾ ಬಿಳಿ ಬಣ್ಣದ ಬಟ್ಟೆ ಧರಿಸಬಹುದು.
ಮಂಗಳವಾರ :
ಹಿಂದೂ ನಂಬಿಕೆಗಳ ಪ್ರಕಾರ, ಮಂಗಳವಾರ ಆಂಜನೇಯನನ್ನು ಪೂಜಿಸಲಾಗುತ್ತದೆ. ಮಂಗಳವನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಈ ದಿನ ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಧರಿಸುವುದು ಮಂಗಳಕರ. .
ಬುಧವಾರ :
ಬುಧ ಗ್ರಹವನ್ನು ವ್ಯಾಪಾರ, ಅಧ್ಯಯನ, ಬುದ್ಧಿವಂತಿಕೆ, ವಾಕ್ಚಾತುರ್ಯ ಮತ್ತು ಪರೀಕ್ಷೆಗಳ ಅಂಶವೆಂದು ಹೇಳಲಾಗುತ್ತದೆ. ಈ ದಿನ ಹಸಿರು ಬಣ್ಣದ ಅಂಗಿಯನ್ನು ಧರಿಸಬೇಕು.
ಇದನ್ನೂ ಓದಿ : Monthly Horoscope: ಡಿಸೆಂಬರ್ ತಿಂಗಳಲ್ಲಿ ಈ 5 ರಾಶಿಯವರಿಗೆ ಹಣದ ಸುರಿಮಳೆ
ಗುರುವಾರ :
ಈ ದಿನ ಗುರುವಿನ ದಿನ. ಜಾತಕದಲ್ಲಿ ಗುರು ಗ್ರಹ ಬಲವಾಗಿದ್ದರೆ ಉಳಿದ ಯಾವ ದೋಷಗಳು ಕೂಡಾ ಹೆಚ್ಚು ಪ್ರಭಾವ ಬೀರುವುದಿಲ್ಲ. ಗುರು ಗ್ರಹದ ಆಶೀರ್ವಾದ ಪಡೆಯಲು ಗುರುವಾರದಂದು ಹಳದಿ ಬಣ್ಣದ ಬಟ್ಟೆ ಧರಿಸಬೇಕು.
ಶುಕ್ರವಾರ :
ಶುಕ್ರ ಐಷಾರಾಮಿ ಜೀವನವನ್ನು ಪ್ರತಿನಿಧಿಸುತ್ತದೆ. ಈ ದಿನ ಕೆನೆ ಬಣ್ಣ, ಬಿಳಿ ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಬೇಕು.
ಶನಿವಾರ :
ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನ ಕೃಪೆಗೆ ಪಾತ್ರರಾದರೆ ಎಲ್ಲಾ ದುಃಖಗಳು ದೂರವಾಗುತ್ತವೆ. ಶನಿದೇವನ ಆಶೀರ್ವಾದ ಪಡೆಯಲು ಈ ದಿನ ನೀಲಿ ಅಥವಾ ಕಪ್ಪು ಶರ್ಟ್ ಧರಿಸಬೇಕು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.