Woman Joined Adult Site To Buy Home: ಜನರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಶ್ರಮಿಸುತ್ತಾರೆ. ಸರಿಯಾದ ಯೋಜನೆ ಮತ್ತು ಹೂಡಿಕೆಯೊಂದಿಗೆ, ಅನೇಕ ಜನರು ತಮ್ಮ ಕನಸನ್ನು ನನಸಾಗಿಸುತ್ತಾರೆ. ಆದರೆ ಅಂತಹ ಮನೆ ಕಟ್ಟಲೆಂದು ಅಡಲ್ಟ್ ಚಿತ್ರ ಲೋಕಕ್ಕೆ ಕಾಲಿಡಲು ಬಯಸುತ್ತಾರೆಯೇ? ಈ ಮಾತು ಆಶ್ಚರ್ಯ ಎನಿಸಿದರೂ ಸತ್ಯ. ಇದು ಫ್ಯಾಂಟಸಿ ಅಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಎಮಿಲಿ ಎಂಬಾಕೆಯ ನಿಜವಾದ ಕಥೆ.
ಇದನ್ನೂ ಓದಿ: Ghost Video: ಮತ್ತೆ ಬಂದ ಮೃತಪಟ್ಟಿದ್ದ ವ್ಯಕ್ತಿ…ದೆವ್ವದ ಜೊತೆ ಮಾತನಾಡಿದ ಸಿಬ್ಬಂದಿ..ಕ್ಯಾಮರಾದಲ್ಲಿ ವಿಡಿಯೋ ಸೆರೆ
ಬ್ರಿಟಿಷ್ ಸುದ್ದಿ ವೆಬ್ಸೈಟ್ 'ಡೈಲಿ ಸ್ಟಾರ್' ಪ್ರಕಾರ, ಎಮಿಲಿ ಎಂಬಾಕೆಗೆ ಆರ್ಥಿಕ ಸಂಕಷ್ಟವಿದ್ದು, ಈ ಹಿನ್ನೆಲೆಯಲ್ಲಿ ನೀಲಿಚಿತ್ರ ಉದ್ಯಮಕ್ಕೆ ಬಂದಿದ್ದಾಳೆ. ಈಕೆ ಮಾಡೆಲ್ ಆಗಿದ್ದು, ತನ್ನ ಇತ್ತೀಚಿನ ಸಂದರ್ಶನದಲ್ಲಿ ಹೀಗೆ ಹೇಳಿದ್ದಳು. “ತನ್ನ ಹಿಂದಿನ ಗಳಿಕೆಯು ದೈನಂದಿನ ಖರ್ಚುಗಳಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಸ್ವಂತ ಮನೆ ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ನಿತ್ಯ 9 ರಿಂದ 5 ನೌಕರಿ ಬಿಟ್ಟು ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸಲು ಈ ಉದ್ಯಮಕ್ಕೆ ಬಂದಿದ್ದೇನೆ” ಎಂದಿದ್ದಾಳೆ
32 ವರ್ಷದ ಎಮಿಲಿ ಇಂದು ಅಡೆಲ್ಟ್ ರೂಪದರ್ಶಿಯಾಗಿ ಪ್ರತಿ ತಿಂಗಳು ಲಕ್ಷಗಟ್ಟಲೆ ರೂಪಾಯಿ ಸಂಪಾದಿಸುತ್ತಾಳೆ. ಎಮಿಲಿಗೆ ಒಬ್ಬ ಮಗನಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಈಕೆಯ ವಾರ್ಷಿಕ ಆದಾಯ ಸುಮಾರು 1 ಕೋಟಿ 75 ಲಕ್ಷ. ಒಬ್ಬ ಸರಳ ಹುಡುಗಿ ತನ್ನ ಮನೆಯನ್ನು ಕಟ್ಟಲು ಈ ಕೆಲಸವನ್ನು ಪ್ರಾರಂಭಿಸಬೇಕು ಎಂದು ಯೋಚಿಸಲಿಲ್ಲ. ವಾಸ್ತವವಾಗಿ, ಎಮಿಲಿ ಬಾಡಿಗೆ ಮನೆಯ ಜೊತೆಗೆ ಜಮೀನುದಾರನ ಗೇಲಿಗಳಿಂದ ಸಿಟ್ಟಾಗಿದ್ದಳು. ಆದ್ದರಿಂದ ಅವಳು ಸಾಧ್ಯವಾದಷ್ಟು ಬೇಗ ತನ್ನ ಸ್ವಂತ ಮನೆಯನ್ನು ಖರೀದಿಸಲು ಬಯಸಿದ್ದಳು.
ಇದನ್ನೂ ಓದಿ: Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ!
ಇಂದು ಎಮಿಲಿ ಆಸ್ಟ್ರೇಲಿಯಾದ ಟಾಪ್ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾಳೆ. ಆಕೆಗೆ ಹಣದ ಅವಶ್ಯಕತೆಯೂ ಇಲ್ಲ. ಇನ್ನು ಎಮಿಲಿಯ ಕುಟುಂಬ ಸದಸ್ಯರು ಅವಳ ಈ ನಿರ್ಧಾರವನ್ನು ವಿರೋಧಿಸಿದ್ದರು. ಈ ವೃತ್ತಿಯಿಂದ ದೂರ ಉಳಿಯುವಂತೆ ಹೇಳಿದ್ದರು. ವಾಸ್ತವವಾಗಿ ಎಮಿಲಿ ಸಾಂಪ್ರದಾಯಿಕ ಏಷ್ಯನ್ ಕುಟುಂಬದಿಂದ ಬಂದವರು. ಅಲ್ಲಿ ಆಚರಣೆಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಅವಶ್ಯಕತೆಯು ವ್ಯಕ್ತಿಯನ್ನು ಏನು ಬೇಕಾದರೂ ಮಾಡುತ್ತದೆ ಎಂಬುದಕ್ಕೆ ಎಮಿಲಿ ಬಹುದೊಡ್ಡ ಸಾಕ್ಷಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.