ಧಾರವಾಡ: ಇಲ್ಲಿನ ಕೃ.ವಿ.ವಿ.ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ ಪ್ರಾಯೋಜಿತ ರಿವಾರ್ಡ್: ಕೃಷಿಯ ಸುಸ್ಥಿರತೆಗಾಗಿ ಜಲಾನಯನ ಪ್ರದೇಶಗಳನ್ನು ಪುನಃಶ್ಚೇತನಗೊಳಿಸುವುದು- ಯೋಜನೆಯಡಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ (ಕನ್ಸಲ್ಟೆಂಟ್- ಜಿ.ಐ.ಎಸ್.; ಎಸ್.ಆರ್.ಎಫ್- ಮಣ್ಣು ವಿಶ್ಲೇಷಣೆ ಹಾಗೂ ಜಿ.ಐ.ಎಸ್., ಯೋಜನಾ ಸಹಾಯಕರು-ಮಣ್ಣು ವಿಶ್ಲೇಷಣೆ, ಜಿ.ಐ.ಎಸ್. ಹಾಗೂ ಪಿ.ಎಂ.ಸಿ.; ಸಹಾಯಕರು- ಮಣ್ಣು ವಿಶ್ಲೇಷಣೆ, ಪಿ.ಎಂ.ಸಿ. ಹಾಗೂ ಹೈಡ್ರಾಲಜಿ) ಅರ್ಹ ಅಭ್ಯರ್ಥಿಗಳಿಂದ ನೇರಸಂದರ್ಶನ ಮತ್ತು ಕೌಶಲ್ಯ, ಲಿಖಿತ ಪರೀಕ್ಷೆ ಮೂಲಕ ಡಿಸೆಂಬರ್ 1, 2, 3, 2022 ರಂದು ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ಬಳ್ಳಾರಿ ‘ನವಶಕ್ತಿ ಸಮಾವೇಶ’ದ ಯಶಸ್ಸು ಕಾಂಗ್ರೆಸ್ ಪಕ್ಷಕ್ಕೆ ತಳಮಳ ಮೂಡಿಸಿದೆ: ಬಿಜೆಪಿ
ಹೆಚ್ಚಿನ ವಿವರಗಳಿಗಾಗಿ ಕೃ.ವಿ.ವಿ., ಧಾರವಾಡದ ಅಂತರ್ಜಾಲ <http://www.uasd.edu> ನ್ನು ಸಂಪರ್ಕಿಸಬಹುದೆಂದು ಸಹ ಸಂಶೋಧನಾ ನಿರ್ದೇಶಕರು (ಕೇಂದ್ರ ಸ್ಥಾನ), ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.