Instagram-Facebookಗೆ ಟಕ್ಕರ್ ನೀಡಲು ಸಜ್ಜಾಗಿದೆ ಜಿಯೋ .! 10 ಸೆಕೆಂಡುಗಳ ವೀಡಿಯೊಗೆ ಸಿಗುವುದು ಬಂಪರ್ ಹಣ

ಮೆಟಾದ ರೀಲ್ಸ್ ವೈಶಿಷ್ಟ್ಯದೊಂದಿಗೆ ಸ್ಪರ್ಧಿಸಲು ಜಿಯೋ ತನ್ನದೇ ಆದ  ಶಾರ್ಟ್ ವೀಡಿಯೊ ಪ್ಲಾಟ್‌ಫಾರ್ಮ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಆ appಗೆ 'ಪ್ಲಾಟ್‌ಫಾರ್ಮ್' ಎಂದು ಹೆಸರಿಡಲಿದೆ.

Written by - Ranjitha R K | Last Updated : Nov 29, 2022, 10:50 AM IST
  • ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಟಕ್ಕರ್ ನೀಡಲು ಜಿಯೋ ಸಜ್ಜಾಗಿದೆ.
  • ಜಿಯೋ ಶಾರ್ಟ್ ವೀಡಿಯೊ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಿದೆ.
  • ಆ appಗೆ 'ಪ್ಲಾಟ್‌ಫಾರ್ಮ್' ಎಂದು ಹೆಸರಿಡಲಿದೆ.
Instagram-Facebookಗೆ ಟಕ್ಕರ್ ನೀಡಲು ಸಜ್ಜಾಗಿದೆ ಜಿಯೋ .! 10 ಸೆಕೆಂಡುಗಳ ವೀಡಿಯೊಗೆ ಸಿಗುವುದು ಬಂಪರ್ ಹಣ   title=
Jio short video app

ಬೆಂಗಳೂರು : ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಟಕ್ಕರ್ ನೀಡಲು ಜಿಯೋ ಸಜ್ಜಾಗಿದೆ. ಸಾಮಾಜಿಕ ಮಾಧ್ಯಮವನ್ನಾಳುವ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಟೆಲಿಕಾಂ ಕಂಪನಿ ಹೇಗೆ ಟಕ್ಕರ್ ನೀಡಲಿದೆ ಎಂದು ಒಂದು ಕ್ಷಣಕ್ಕೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ.  ಮೆಟಾದ ರೀಲ್ಸ್ ವೈಶಿಷ್ಟ್ಯದೊಂದಿಗೆ ಸ್ಪರ್ಧಿಸಲು ಜಿಯೋ ತನ್ನದೇ ಆದ  ಶಾರ್ಟ್ ವೀಡಿಯೊ ಪ್ಲಾಟ್‌ಫಾರ್ಮ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಆ appಗೆ 'ಪ್ಲಾಟ್‌ಫಾರ್ಮ್' ಎಂದು ಹೆಸರಿಡಲಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ರೀಲ್‌ಗಳಂತೆಯೇ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ.

ಆರ್ಗಾನಿಕ್ ಗ್ರೋಥ್ ಮತ್ತು ಸ್ಟಡಿ ಮಾನಿಟೈಸೇಶನ್ ಗಾಗಿ 'ಸ್ಟಾರ್ ಎಂಟರ್‌ಟೈನರ್‌ಗಳಿಗೆ ಈ app ಸಹಾಯವಾಗಲಿದೆ. ಗಾಯಕರು, ಸಂಗೀತಗಾರರು, ನಟರು, ಹಾಸ್ಯ ಕಲಾವಿದರು, ನೃತ್ಯಗಾರರು, ಫ್ಯಾಷನ್ ವಿನ್ಯಾಸಕರಿಗೆ ಇದೊಂದು ಉತ್ತಮ ಸಾಮಾಜಿಕ ಮಾಧ್ಯಮವಾಗಿರಲಿದೆ ಎಂದು ಪ್ಲಾಟ್ ಫಾರಂ ಹೇಳಿದೆ. ಆದರೆ ಕಂಪನಿಯು ಇನ್ನೂ ಇಂಟರ್ಫೇಸ್ ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಇದು Instagram ನ ರೀಲ್ಸ್‌ನಂತೆಯೇ ಇರಲಿದೆ ಎಂದು ಹೇಳಲಾಗುತ್ತದೆ. ಬಳಕೆದಾರರಿಗೆ  ಹಣಗಳಿಕೆ ಆಯ್ಕೆಯನ್ನು ನೀಡಲು ಎಲ್ಲಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. 

ಇದನ್ನೂ ಓದಿ : Nothing Phone 1: ಕೇವಲ ರೂ.9999 ಕ್ಕೆ ಖರೀದಿಸಿ ಪಾರದರ್ಶಕ ವಿನ್ಯಾಸದ ಈ ಸ್ಮಾರ್ಟ್ ಫೋನ್!

ಯಾವಾಗ  ಲಾಂಚ್ ಆಗಲಿದೆ ಜಿಯೋ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ :
ಜಿಯೋ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್‌ನ ಬೀಟಾ ಆವೃತ್ತಿ ಲಭ್ಯವಿದೆ.  ಸ್ಟೇಬಲ್ ಅನ್ನು ಜನವರಿ 2023 ರಲ್ಲಿ ಪ್ರಾರಂಭಿಸಲಾಗುವುದು. ಆದರೆ, ಇನ್ನು ಕೂಡಾ ಇದಕ್ಕೆ ಲಾಗಿನ್ ಆಗುವುದು ಸಾಧ್ಯವಾಗುತ್ತಿಲ್ಲ. ಮೊದಲ  100 ಸಂಸ್ಥಾಪಕ ಸದಸ್ಯರು  ಇನ್ವೈಟ್ ವ್ಯವಸ್ಥೆಯ ಮೂಲಕ ಮಾತ್ರ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಗೋಲ್ಡ್ ಟಿಕ್ ವೆರಿಫಿಕೆಶನ್ ಮೂಲಕ ಅವರನ್ನು ಗುರುತಿಸಲಾಗುವುದು ಎಂದು ಜಿಯೋ ಹೇಳಿದೆ. ಅವರು ಹೊಸ ಸದಸ್ಯರನ್ನು ಸೇರಿಸಲು ರಿಕ್ವೆಸ್ಟ್ ಕಳುಹಿಸುತ್ತಾರೆ. ಆಗ  ರೆಫರಲ್ ಪ್ರೋಗ್ರಾಂ ಮೂಲಕ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಹೀಗೆ ಜಾಯಿನ್ ಆದವರಿಗೆ ನಂತರ ಹೊಸ ವೈಶಿಷ್ಟ್ಯಗಳನ್ನು ನೀಡಲಾಗುವುದು. 

ಇದನ್ನೂ ಓದಿ : Hackers ಕೈ ಸೇರಿದ 50 ಕೋಟಿ WhatsApp ಬಳಕೆದಾರ ಡೇಟಾ! ಆ ಕರೆ-ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ

ಈ ಆ್ಯಪ್‌ನಿಂದ ಹೆಚ್ಚು ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ ಎಂದು ಕಂಪನಿ ಕ್ರೀಯೇಟರ್ ಗಳಿಗೆ ವಿಶ್ವಾಸದಿಂದ ಹೇಳಿದೆ. ಇಲ್ಲಿ ರ‍್ಯಾಂಕ್‌   ಮತ್ತು ಖ್ಯಾತಿಯ ಆಧಾರದ ಮೇಲೆ ಹಣವನ್ನು ನೀಡಲಾಗುವುದು.   ಕ್ರೀಯೇಟರ್ ಗಳು ತಮ್ಮ ಪ್ರೊಫೈಲ್‌ನಲ್ಲಿ 'ಬುಕ್ ನೌ' ಬಟನ್ ಅನ್ನು ಪಡೆಯುತ್ತಾರೆ. ಇದು ಬಳಕೆದಾರರು, ಅಭಿಮಾನಿಗಳು ಮತ್ತು ಬ್ರ್ಯಾಂಡ್‌ಗಳಿಗೆ ಕಲಾವಿದರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News