Diabetes Control Tips: ಮಧುಮೇಹಿಗಳು ಈ ಹಣ್ಣುಗಳನ್ನು ಅಪ್ಪಿತಪ್ಪಿ ಕೂಡ ತಿನ್ನಲೇಬಾರದು

Diabetes Control Tips: ಡಯಾಬಿಟಿಸ್ ಸಮಸ್ಯೆ ಇರುವವರು ಯಾವುದೇ ಹಣ್ಣು ತರಕಾರಿಗಳನ್ನು ಸೇವಿಸುವಾಗಲೂ ಕೂಡ ಎಚ್ಚರಿಕೆಯಿಂದ ಇರಬೇಕು. ಕಾರಣ, ಕೆಲವು ಹಣ್ಣುಗಳು ಡಯಾಬಿಟಿಸ್ ರೋಗಿಗಳಿಗೆ ವಿಷಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಹಣ್ಣುಗಳು ಯಾವುವು? ಡಯಾಬಿಟಿಸ್ ರೋಗಿಗಳು ಯಾವ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯೋಣ...

Diabetes Control Tips: ಭಾರತದಲ್ಲಿ ಅತಿ ಹೆಚ್ಚು ಮಂದಿಯನ್ನು ಕಾಡಿಸುತ್ತಿರುವ ಕಾಯಿಲೆ ಎಂದರೆ ಅದು ಮಧುಮೇಹ. ಒಮ್ಮೆ ಡಯಾಬಿಟಿಸ್ ಬಂತೆಂದರೆ ಆ ವ್ಯಕ್ತಿ ಜೀವನ ಪರ್ಯಂತ ತನ್ನ ಆಹಾರ ಪಾನೀಯಗಳ ಬಗ್ಗೆ ತುಂಬಾ ನಿಗಾವಹಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ವಾಸ್ತವವಾಗಿ, ಉತ್ತಮ ಆರೋಗ್ಯಕ್ಕೆ ಹಣ್ಣು ತರಕಾರಿಗಳ ಸೇವನೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಆದರೆ, ಡಯಾಬಿಟಿಸ್ ಸಮಸ್ಯೆ ಇರುವವರು ಯಾವುದೇ ಹಣ್ಣು ತರಕಾರಿಗಳನ್ನು ಸೇವಿಸುವಾಗಲೂ ಕೂಡ ಎಚ್ಚರಿಕೆಯಿಂದ ಇರಬೇಕು. ಕಾರಣ, ಕೆಲವು ಹಣ್ಣುಗಳು ಡಯಾಬಿಟಿಸ್ ರೋಗಿಗಳಿಗೆ ವಿಷಕಾರಿ ಎಂದು ಸಾಬೀತುಪಡಿಸಬಹುದು.  ಅಂತಹ ಹಣ್ಣುಗಳು ಯಾವುವು? ಡಯಾಬಿಟಿಸ್ ರೋಗಿಗಳು ಯಾವ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಮಾವಿನ ಹಣ್ಣು: ಮಾವು ರುಚಿಯಲ್ಲಿ ಹುಳಿ. ಎಂತಹವರಿಗೇ ಆದರೂ ಇದರ ಹೆಸರು ಕೇಳಿದೊಡನೆ ಬಾಯಿಯಲ್ಲಿ ನೀರೂರುತ್ತದೆ. ಆದರೆ, ಮಧುಮೇಹಿಗಳು ಮಾವಿನಹಣ್ಣನ್ನು ತಿನ್ನಬಾರದು. ಮಾವಿನಲ್ಲಿ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ವಸ್ತುಗಳು ಕಂಡು ಬರುತ್ತವೆ. ಹಾಗಾಗಿ, ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. 

2 /5

ಅನಾನಸ್: ನಮ್ಮಲ್ಲಿ ಹಲವರು ಅನಾನಸ್ ತಿನ್ನಲು ಇಷ್ಟಪಡುತ್ತಾರೆ. ಆದರೆ, ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಅನಾನಸ್ ವಿಷಕಾರಿ ಎಂದು ಸಾಬೀತುಪಡಿಸಬಹುದು. 

3 /5

ಬಾಳೆ ಹಣ್ಣು: ಮಾಗಿದ ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟ ಹೆಚ್ಚು. ಇವು ತಕ್ಷಣವೇ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿಯೇ ಸಕ್ಕರೆ ರೋಗಿಗಳಿಗೆ ಬಾಳೆ ಹಣ್ಣನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ.  

4 /5

ಸಪೋಟ: ಸಪೋಟ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಮಟ್ಟ ಹೆಚ್ಚಾಗಿರುತ್ತದೆ. ಹಾಗಾಗಿ, ಈ ಹಣ್ಣು ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಮಧುಮೇಹಿಗಳು ಸಪೋಟ ಹಣ್ಣನ್ನು ತಿನ್ನುವುದರಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆ.

5 /5

ಲೀಚಿ: ಲೀಚಿ ಹಣ್ಣು ಕೂಡ ಬ್ಲಡ್ ಶುಗರ್ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾಗಿ, ಡಯಾಬಿಟಿಸ್ ಇರುವವರು ಈ ಹಣ್ಣನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.