ಆಸಿಡಿಟಿ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತದೆ ಈ ನಾಲ್ಕು ವಸ್ತುಗಳು

ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆಸಿಡಿಟಿ ಸಮಸ್ಯೆಯನ್ನು ತಕ್ಷಣ ಪರಿಹರಿಸಿಕೊಳ್ಳಬಹುದು. 

Written by - Ranjitha R K | Last Updated : Dec 1, 2022, 02:35 PM IST
  • ನಮ್ಮ ದೇಶ ವಿವಿಧ ಬಗೆಯ ಖಾದ್ಯಗಳಿಗೂ ಹೆಸರುವಾಸಿಯಾಗಿದೆ.
  • ಇದೀಗ ಚಳಿಗಾಲ ಆರಂಭವಾಗಿದೆ.
  • ಮಲಬದ್ದತೆಯಿಂದ ಆಸಿಡಿಟಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಆಸಿಡಿಟಿ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತದೆ ಈ ನಾಲ್ಕು ವಸ್ತುಗಳು  title=
Gastritis Relief Tips

ಬೆಂಗಳೂರು : ನಮ್ಮ ದೇಶ ವಿವಿಧ ಬಗೆಯ ಖಾದ್ಯಗಳಿಗೂ ಹೆಸರುವಾಸಿಯಾಗಿದೆ. ಇದೀಗ ಚಳಿಗಾಲ ಆರಂಭವಾಗಿದೆ. ಸಾಮಾನ್ಯವಾಗಿ ಚಳಿಗಾಲವೆಂದರೆ ಬೆಚ್ಚಗೆ ಏನನ್ನಾದರೂ ತಿನ್ನುತ್ತಾ ಇರಬೇಕು ಎಂದೆನಿಸುತ್ತದೆ. ಪರಿಣಾಮವಾಗಿ ಕರಿದ ಹುರಿದ  ಆಹಾರ, ಮಸಾಲೆ ಪದಾರ್ಥಗಳ ಸೇವನೆ ಹೆಚ್ಚಾಗುತ್ತದೆ. ಇನ್ನು ಹೆಚ್ಚಿನವರು ಹೊರಗಿನ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ತಿನ್ನಲು ಇಷ್ಟ ಪಡುತ್ತಾರೆ. ಮೈದಾ ಬಳಕೆಯ ತಿನಿಸುಗಳನ್ನು ಹೆಚ್ಚು ಸೇವನೆ ಮಾಡುವುದರ ಪರಿಣಾಮ ಮಲಬದ್ಧತೆ ಉಂಟಾಗುತ್ತದೆ. ಮಲಬದ್ದತೆಯಿಂದ ಆಸಿಡಿಟಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  ಹೀಗೆ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಉತ್ಪತ್ತಿಯಾಗುತ್ತದೆ. ಹೀಗಾದಾಗ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆಸಿಡಿಟಿ ಸಮಸ್ಯೆಯನ್ನು ತಕ್ಷಣ ಪರಿಹರಿಸಿಕೊಳ್ಳಬಹುದು. 

ಗ್ಯಾಸ್  ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರ ಸೇವಿಸಿ : 
1.  ಎಳನೀರು : 
ಯಾರೇ ಆಗಲಿ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಎಳ ನೀರು ಸೇವನೆ ಮಾಡಬೇಕು. ಇದು ನೈಸರ್ಗಿಕ ಮತ್ತು ತುಂಬಾ ಆರೋಗ್ಯಕರ ಪಾನೀಯವಾಗಿದೆ. ಇದನ್ನು ದಿನಕ್ಕೆ 2-3 ಬಾರಿ ಕುಡಿದರೆ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಅಲ್ಲದೆ ಎಳನೀರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆದರೆ ಮಲಬದ್ದತೆ ಸಮಸ್ಯೆ ಉಂಟಾಗುವುದಿಲ್ಲ. ಗ್ಯಾಸ್ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : Foods For Liver: ಆರೋಗ್ಯಕರ ಲಿವರ್ ನಿಮ್ಮದಾಗಬೇಕೇ? ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು

2. ಸೌತೆಕಾಯಿ:
ಸೌತೆಕಾಯಿ ಅತಿ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ತರಕಾರಿಯಾಗಿದೆ. ಇದನ್ನೂ ಹಸಿಯಾಗಿಯೇ ತಿನ್ನಬಹುದು. ಅಥವಾ ಮೊಸರು ಬಜ್ಜಿ ಮಾಡಿಕೊಂಡು ಬೇಕಾದರೂ ತಿನ್ನಬಹುದು. ಅಲ್ಲದೆ ಚಪಾತಿ ಹಿಟ್ಟು ಕಲಸುವಾಗ ಸೌತೆಕಾಯಿಯನ್ನು ತುರಿದು ಹಾಕಿ ಚಪಾತಿ ಮಾಡಿಕೊಂಡು ಕೂಡಾ ಸೇವಿಸಬಹುದು. ಮೊದಲೇ ಹೇಳಿದಂತೆ ಇದರಲ್ಲಿ ಹೆಚ್ಚು ನೀರಿನ ಅಂಶ ಇರುವುದರಿಂದ  ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮಾತ್ರವಲ್ಲ ಯಾವುದೇ ರೀತಿಯಲ್ಲಿಯೂ ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳಲು ಬಿಡುವುದಿಲ್ಲ. 

3. ನಿಂಬೆ  ಶರಬತ್ತು : 
ಗ್ಯಾಸ್ ನಿಂದ ಶೀಘ್ರ ಉಪಶಮನ ಬೇಕಿದ್ದರೆ ನಿಂಬೆ ಶರಬತ್ತನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯಾ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಚುರುಕುಗೊಳಿಸಲು ಕೂಡಾ ನಿಂಬೆ ರಸವನ್ನು ಬಳಸಲಾಗುತ್ತದೆ. ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ನಿಂಬೆರಸವನ್ನು ಸೇರಿಸಿ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕುಡಿದರೆ ಆಸಿಡಿಟಿಯಾಗುವುದಿಲ್ಲ. 

ಇದನ್ನೂ ಓದಿ : Winter Health Tips : ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಈ 5 ಪ್ರಯೋಜನಗಳು!

4. ಬಾಳೆಹಣ್ಣು :
 ಇನ್ನು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ತಿನ್ನುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.  ಬಾಳೆಹಣ್ಣಿನಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಲ್ಲಿರುವ ಫೈಬರ್ ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದೆ ಕಾರಣಕ್ಕೆಪ್ರತಿ ದಿನ ಒಂದು ಬಾಳೆ ಹಣ್ಣು ಸೇವಿಸುವಂತೆ ಸೂಚಿಸಲಾಗುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News