CM Bommai on Controversial graffiti: CFI ಸೇರುವಂತೆ ಪೋಸ್ಟರ್ ಹಾಕಿದವರ ವಿರುದ್ಧ ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ

CM Bommai on Controversial graffiti: ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, “ಶಿವಮೊಗ್ಗದಲ್ಲಿ ಪಿಎಫ್ಐ ಅಂಗಸಂಸ್ಥೆ ಸಿಎಫ್ಐ ಸೇರಿ ಎಂಬ ಪೋಸ್ಟರ್ ಗಳನ್ನು ಅಂಟಿಸಿರುವವರ ವಿರುದ್ಧ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ” ಎಂದರು.

Written by - Prashobh Devanahalli | Edited by - Bhavishya Shetty | Last Updated : Dec 5, 2022, 02:41 PM IST
    • ಶಿವಮೊಗದಲ್ಲೂ ವಿವಾದಾತ್ಮಕ ಗೋಡೆ ಬರಹ ಪತ್ತೆ
    • ಸಿಎಫ್‍ಐ ಸಂಘಟನೆ ಸೇರುವಂತೆ ಗೋಡೆ ಬರಹ
    • ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸೂಚನೆ
CM Bommai on Controversial graffiti: CFI ಸೇರುವಂತೆ ಪೋಸ್ಟರ್ ಹಾಕಿದವರ ವಿರುದ್ಧ ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ title=
CFI organization

CM Bommai on Controversial graffiti: ಬೆಂಗಳೂರು: ಮಂಗಳೂರು ಬಳಿಕ ಶಿವಮೊಗದಲ್ಲೂ ವಿವಾದಾತ್ಮಕ ಗೋಡೆ ಬರಹ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯೊಂದನ್ನು ನೀಡಿದ್ದಾರೆ. ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು  ನಿಷೇಧಿತ ಪಿಎಫ್‍ಐನ ಅಂಗಸ್ಥೆಯಾಗಿರುವ ಸಿಎಫ್‍ಐ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದಿದ್ದರು. ಪಟ್ಟಣದ ಸುಮಾರು 9ಕ್ಕೂ ಹೆಚ್ಚು ಕಡೆಗಳಲ್ಲಿ ‘JOIN CFI’ ಎಂಬ ಗೋಡೆ ಬರಹ ಕಂಡುಬಂದಿದ್ದು, ನೀಲಿ ಮತ್ತು ಕೆಂಪು ಬಣ್ಣದಲ್ಲಿ ಬರೆದು ಸ್ಟಾರ್ ಮಾರ್ಕ್ ಮಾಡಲಾಗಿದೆ.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಟ್ರಕ್: 6 ಮಂದಿ ಸಾವು, ಅನೇಕರಿಗೆ ಗಾಯ!

ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, “ಶಿವಮೊಗ್ಗದಲ್ಲಿ ಪಿಎಫ್ಐ ಅಂಗಸಂಸ್ಥೆ ಸಿಎಫ್ಐ ಸೇರಿ ಎಂಬ ಪೋಸ್ಟರ್ ಗಳನ್ನು ಅಂಟಿಸಿರುವವರ ವಿರುದ್ಧ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ” ಎಂದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದರೊಂದಿಗೆ ಈ ವಿಚಾರದ ಕುರಿತು ಮಾತನಾಡಿದರು. “ಪಿಎಫ್ಐ ರದ್ದು ಮಾಡಿದ ನಂತರ ಹತಾಶರಾಗಿ ಈ ರೀತಿ ಗೋಡೆಯ ಮೇಲೆ ಬರೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ” ಎಂದು ಕಠಿಣವಾಗಿ ನುಡಿದರು.

‘ಮಹಾ’ ಮಂತ್ರಿ ಬರುತ್ತಿರುವುದು ಸೂಕ್ತವಲ್ಲ:

ಮಹಾರಾಷ್ಟ್ರ ಮಂತ್ರಿಗಳು ಬೆಳಗಾವಿಗೆ ಬರುವುದು ಸೂಕ್ತವಲ್ಲ ಎಂದು ಲಿಖಿತವಾಗಿ ಸೂಚಿಸಿದ್ದರೂ ಆಗಮಿಸುತ್ತಿರುವುದು ಸೂಕ್ತವಲ್ಲ. ಯಾರು ಎಲ್ಲಿ ಬೇಕಾದರೂ ಓಡಾಡುವ ಸ್ವಾತಂತ್ರ್ಯವಿದೆ ಎಂದು ನಮಗೂ ತಿಳಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂಬಂಧಪಟ್ಟ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲವು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ” ಎಂದರು.

ಕಾನೂನಾತ್ಮಕ  ಹೋರಾಟ

“ಈ ರೀತಿಯ ಕ್ರಮ ಸರಿಯಾದುದಲ್ಲ. ಗಡಿ ವಿವಾದ ಬಗೆಹರಿದಿದ್ದರೂ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಹೂಡಿದ್ದಾರೆ. ಕಾನೂನಾತ್ಮಕವಾಗಿ ಇಬ್ಬರೂ ಹೋರಾಡುತ್ತೇವೆ. ಆದರೆ ಎರಡೂ ರಾಜ್ಯದ ಜನರು ಸಾಮರಸ್ಯದಿಂದಿದ್ದು, ಇಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಯಾವುದೇ ಕೆಲಸ ಮಾಡಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ:

ಮತ್ತೊಮ್ಮೆ ಮಹಾರಾಷ್ಟ್ರ ಸಿಎಂ ಜೊತೆ ಮಾತುಕತೆ:

ಮಹಾರಾಷ್ಟ್ರ ಹಾಗೂ ಕರ್ನಾಟಕದ ಜನರ ಮಧ್ಯೆ ಸಾಮರಸ್ಯವಿದೆ. ಅದೇ ಸಂದರ್ಭದಲ್ಲಿ ಗಡಿ ವಿವಾದವೂ ಇದೆ. ಆದರೆ ಮಹಾರಾಷ್ಟ್ರ ಕ್ಯಾತೆ ತೆಗೆದು ಸುಪ್ರೀಂ ಕೋರ್ಟಿಗೆ ಹೋಗಿದೆ. ಈಗಿನ ಸಂದರ್ಭದಲ್ಲಿ ಪ್ರವಾಸ ಮಾಡುವುದು ಪ್ರಚೋದನಕಾರಿ ಕೆಲಸ. ಜನರಲ್ಲಿ ಭಾವನೆಗಳನ್ನು ಕೆರಳಿಸುವ ಕೆಲಸವಾಗುತ್ತದೆ. ಮತ್ತೊಮ್ಮೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News