Karnataka Assembly Election Results 2023: ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆದ ಮತದಾನದ ಫಲಿತಾಂಶ ಇಂದು ಬಹುತೇಕ ಪ್ರಕಟಗೊಂಡಿದೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರ ಬರುವುದು ಬಹುತೇಕ ಖಚಿತವಾಗಿದೆ. ಏತನ್ಮಧ್ಯೆ ಚುನಾವಣಾ ಫಲಿತಾಂಶಗಳ ಕುರಿತು ಬಿಎಸ್ ಯಡಿಯೂರಪ್ಪ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡುವ ಪ್ರಯತ್ನ ಪಡ್ತಿದಾರೆ. ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮತದಾನಕ್ಕೂ ಮುನ್ನ ಸಿಎಂ ಬೊಮ್ಮಾಯಿ ಪೂಜೆ. ಗಾಯತ್ರಿ ತಪೋಭೂಮಿಗೆ ಬೊಮ್ಮಾಯಿ ಭೇಟಿ. ಶಿಗ್ಗಾವಿ ತಾ. ತಡಸ ಗ್ರಾಮದಲ್ಲಿರುವ ತಪೋಭೂಮಿ. ಗಾಯತ್ರಿ ದೇವಿ, ಆಂಜನೇಯನ ದರ್ಶನ ಪಡೆದ ಸಿಎಂ. ಪುತ್ರ ಭರತ್, ಪತ್ನಿ ಚೆನ್ನಮ್ಮ, ಮಗಳು ಅದಿತಿ ಸಾಥ್.
ಹುಬ್ಬಳ್ಳಿ, ಮೇ08: ಲಿಂಗಾಯತ ವೇದಿಕೆ ಎನ್ನುವುದು ಎಲ್ಲಿಯೂ ಇಲ್ಲ, ಅದೊಂದು ಕಾಲ್ಪನಿಕ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
Karnataka Election 2023: ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಜಯರಾಮ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ, ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ ಎಂದು ಹೇಳಿದರು.
ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ರಾಜಕೀಯ ಅಖಾಡ. ಸಕ್ಕರೆನಾಡಿನ ಅಖಾಡಕ್ಕೆ ಸಿಎಂ ಬೊಮ್ಮಾಯಿ ಎಂಟ್ರಿ. ಬಿಜೆಪಿ ಅಭ್ಯರ್ಥಿಗಳ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ. ಮಂಡ್ಯ ಮತ್ತು ಮದ್ದೂರಿನಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ. ಸಂಜೆ 5 ಗಂಟೆಗೆ ಮಂಡ್ಯ, 6 ಗಂಟೆಗೆ ಮದ್ದೂರಿನಲ್ಲಿ ಪ್ರಚಾರ.
Kichha Sudeep Fans : ಚುನಾವಣಾ ಪ್ರಚಾರ ಎಲ್ಲೆಡೆಯೂ ಅಬ್ಬರದಿಂದ ಸಾಗುತ್ತಿದೆ. ರಾಜಕೀಯ ಕಲಿಗಳ ಬೆಂಬಲಕ್ಕೆ ಸಿನಿಮಾ ನಟರು ನಿಂತಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ ನಟ ಕಿಚ್ಚ ಸುದೀಪ್ ತಾನು ಬಿಜೆಪಿ ಪಕ್ಷದ ಪರ ನಿಲ್ಲುವುದಾಗಿ ಹೇಳಿದ್ದರು. ಅದೇ ರೀತಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
Kichha Sudeep : ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಇಂದು ಅವಳಿ ನಗರದ ಸೆಂಟ್ರಲ್ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳು ಭರ್ಜರಿಯಾಗಿಯೇ ನಡೆದಿವೆ. ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ಇಳಿದಿರುವ ಸುದೀಪ್ಗೆ ಜನರಿಂದ ಉತ್ತಮ ರೆಸ್ಫಾನ್ಸ್ ದೊರಕುತ್ತಿದೆ. ಇಂದು ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಪ್ರಚಾರಕ್ಕೆ ಒಳ್ಳೆಯ ರೆಸ್ಫಾನ್ಸ್ ಸಿಗುವ ಸಾದ್ಯತೆ ಇದೆ.
CM Basavaraj Bommai on Congress: 150 ಸ್ಥಾನ ಯಾರಿಗೆ ಕೊಡಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮತ್ತು ಬೂತ್ ಮಟ್ಟದ ಗೆಲುವಿನ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು
CM Basavaraj Bommai: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಅವರ ಹೇಳಿಕೆಗೆ ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಲಿಂಗಾಯತ ಸಿಎಂ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.. ನನ್ನ ಹೇಳಿಕೆಯನ್ನ ಬಿಜೆಪಿಯವ್ರು ತಿರುಚಿದ್ದಾರೆ. ನಾನು ಬೊಮ್ಮಾಯಿ ಸಿಎಂ ಆದ ಬಳಿಕ ಭ್ರಷ್ಟರಾದ್ರು ಅಂದಿದ್ದೆ. ಆ ಹೇಳಿಕೆಯನ್ನ ತಿರುಚಲಾಗಿದೆ ಎಂದ ಸಿದ್ದರಾಮಯ್ಯ ಹೇಳಿದ್ದಾರೆ..
ಯಲಹಂಕದಿಂದ ಸಿಎಂ ಬೊಮ್ಮಾಯಿ ಎಲೆಕ್ಷನ್ ದಂಡಯಾತ್ರೆ. ಮೊದಲ ದಿನ 5 ಜಿಲ್ಲೆ.. 9 ಕ್ಷೇತ್ರ.. 260 ಕಿಲೋ ಮೀಟರ್ ಜಾಥಾ. ಮೊದಲ ದಿನ 260 ಕಿ.ಮೀ. ರೋಡ್ ಶೋ ನಡೆಸಲಿರುವ ಸಿಎಂ. ಯಲಹಂಕದಿಂದ ಆರಂಭವಾಗಿ ಕಡೂರು ಕ್ಷೇತ್ರದವರೆಗೂ ಪ್ರಚಾರ. ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಿಳಿದ ಪತ್ನಿ ಚನ್ನಮ್ಮ. ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಸಿಎಂ ಪರ ಪ್ರಚಾರ. ಹನುಮರಹಳ್ಳಿ ಮತ್ತು ಚಾಕಾಪುರ ಸೇರಿ ಹಲವೆಡೆ ಕ್ಯಾಂಪೇನ್. ಒಂದು ಕಡೆ ಪುತ್ರ ಭರತ್.. ಇನ್ನೊಂದು ಕಡೆ ಪತ್ನಿ ಪ್ರಚಾರ. ಇನ್ನೊಂದೆಡೆಗೆ ಪತ್ನಿ ಚನ್ನಮ್ಮ ಬೊಮ್ಮಾಯಿ ಮನೆ ಮನೆಗೆ ಭೇಟಿ.
ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ಹೆಣೆದಿದೆ. ಬಿಜೆಪಿ ಪ್ರಮುಖರ ಜೊತೆ ಅಮಿತ್ ಶಾ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
Karnataka Election 2023: ಕಾಂಗ್ರೆಸ್ ಲಿಂಗಾಯತರನ್ನೇ ಒಡೆದು ಛಿದ್ರ ಮಾಡಲು ಹೊರಟಿತ್ತು. ಕಾಂಗ್ರೆಸ್ ನ ಒಡೆದು ಆಳುವ ನೀತಿ ಯಾರೂ ಎಂದಿಗೂ ಮರೆಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶೆಟ್ಟರ್ ಫೈಟ್ ಎಲ್ಲಿ ಹೋಯ್ತು ಅನ್ನೋದು ಮುಖ್ಯ ಅಲ್ಲ. ಆದರ ಡೆಸ್ಟಿನೇಷನ್ ಮುಖ್ಯ ಎಂದ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಗೆ ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಶಾಸಕರು, ಸಚಿವರು. ಸಿಎಂ ಬದಲಾವಣೆ ಮಾಡೋ ಧೈರ್ಯ ಇರೋದು BJPಗೆ ಮಾತ್ರ ಎಂದಿದ್ದಾರೆ..
ಶೆಟ್ಟರ್ ರಾಜೀನಾಮೆ ತಪ್ಪು. ಅವರ ರಾಜೀನಾಮೆ ನಮಗೆ ಬಹಳ ನೋವು ತಂದಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು. ದೊಡ್ಡ ಸ್ಥಾನಮಾನ ನೀಡುವುದಾಗಿ ಶೆಟ್ಟರ್ಗೆ ಹೇಳಿದ್ವಿ. ಜಗದೀಶ್ ಶೆಟ್ಟರ್ ಹೇಳಿದವರಿಗೆ ಟಿಕೆಟ್ ಭರವಸೆ ನೀಡಿದ್ವಿ. ಜಗದೀಶ್ ಶೆಟ್ಟರ್ ನಮ್ಮ ಪಕ್ಷದ ಹಿರಿಯ ನಾಯಕರಿದ್ದಾರೆ. ಜನಸಂಘ ಪಕ್ಷದ ಕಾಲದಿಂದಲೂ ಅವರು ಇದ್ದಾರೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.