ಕೆಲವೊಂದು ಆಹಾರ ವಸ್ತುಗಳು ಎಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಈ ಆಹಾರ ವಸ್ತುಗಳು ಆರೋಗ್ಯ ಬಿಗಡಾಯಿಸಲು ಕಾರಣವಾಗಬಹುದು.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಶೈಲಿ ಬದಲಾಗುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಜನ ತಮ್ಮ ಬಟ್ಟೆ, ಸೌಂದರ್ಯ, ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ತಮ್ಮ ಆರೋಗ್ಯ, ಆಹಾರದ ಬಗ್ಗೆ ಮಾತ್ರ ಅಸಡ್ಡೆ ತೋರುತ್ತಾರೆ. ಕೈಗೆ ಏನು ಸಿಗುತ್ತದೆಯೋ ಅದನ್ನು ಆ ಹೊತ್ತಿನ ಹಸಿವು ನೀಗಿಸಲು ತಿನ್ನುವಂಥಹ ಸ್ಥಿತಿ ಇಂದಿನ ಜನರೇಶನ್ ನ ಹವ್ಯಾಸವಾಗಿದೆ. ಆದರೆ ಕೆಲವೊಂದು ಆಹಾರ ವಸ್ತುಗಳು ಎಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಈ ಆಹಾರ ವಸ್ತುಗಳು ಆರೋಗ್ಯ ಬಿಗಡಾಯಿಸಲು ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೊಮ್ಯಾಟೋವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಏಕೆಂದರೆ ಇದರಲ್ಲಿರುವ ಗ್ಯಾಸ್ಟ್ರೋಇನ್ ಟೆಸ್ಟೈಲ್ ಹೊಟ್ಟೆಯಲ್ಲಿ ಆಸಿಡ್, ಗ್ಯಾಸ್, ಕಿಡ್ನಿ ಸ್ಟೋನ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಾಲು ಮತ್ತು ಬಾಳೆಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದರಿಂದ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಇದು ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕೂಡಾ ತಂದೊಡ್ಡಬಹುದು.
ತಂಪು ಪಾನೀಯವನ್ನು ಸೇವಿಸುವ ಮೂಲಕ ಯಾವುದೇ ಕಾರಣಕ್ಕೂ ನಿಮ್ಮ ದಿನದ ಆರಂಭವನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
ಮಸಾಲೆಯುಕ್ತ ಆಹಾರ ತಿನ್ನಲು ಬಲು ರುಚಿ. ಆದರೆ ಇದನ್ನೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅದು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು.
ಈ ಋತುವಿನಲ್ಲಿ ಸಿಹಿ ಗೆಣಸು ಹೇರಳವಾಗಿ ಸಿಗುತ್ತದೆ. ಸಿಹಿ ಗೆಣಸು ಆರೋಗ್ಯಕ್ಕೆ ಅತ್ಯಂತ ಪ್ರಯೋಜನ ನೀಡುವ ಪದಾರ್ಥವಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಈ ಹಣ್ಣನ್ನು ತಿನ್ನಬಾರದು. ಏಕೆಂದರೆ ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)