Foreign Trip plan: ನೀವು ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ಐದು ದೇಶಗಳ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿದುಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಪ್ರವಾಸವು ಸಖತ್ ಸ್ಪೆಷಲ್ ಆಗಿ ಕಾಣಬಹುದು.
ಸೇಂಟ್ ಲೂಸಿಯಾ ಪ್ರದೇಶವು ಕೆರಿಬಿಯನ್ ದ್ವೀಪದಲ್ಲಿದೆ. ಇದನ್ನು ಸೌಂದರ್ಯ ರಾಣಿ ದ್ವೀಪವೆಂದು ಕರೆಯಲಾಗುತ್ತದೆ. ಈ ದ್ವೀಪಗಳು ಬಂಡೆ, ಜಲಪಾತ ಮತ್ತು ಸುಂದರವಾದ ಬೆಟ್ಟಗಳಿಂದ ಕೂಡಿದ್ದು, ಇಲ್ಲಿಗೆ ಭೇಟಿ ನೀಡಿದರೆ ನಿಮ್ಮ ಪ್ರವಾಸ ಸ್ಮರಣೀಯವಾಗೋದು ಖಂಡಿತ.
ಮೆಕ್ಸಿಕೋ ಕೂಡ ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಒಂದು. ಇಲ್ಲಿನ ಸುಂದರವಾದ ಸ್ಥಳಗಳು ಎಂಥವರನ್ನೂ ಆಕರ್ಷಣೀಯಗೊಳಿಸುತ್ತದೆ. ಇವುಗಳಲ್ಲಿ ಒಂದು ಚಿಚೆನ್ ಇಟ್ಜಾ. ಇದು ವಿಶ್ವದ ಅದ್ಭುತಗಳ ಪಟ್ಟಿಯಲ್ಲಿ ಸೇರಿದೆ.
ಕೌಯಿ ದ್ವೀಪದಲ್ಲಿ ಪರ್ವತಗಳು, ಜಲಪಾತಗಳು ಮತ್ತು ಕಡಲತೀರಗಳನ್ನು ಕಾಣಬಹುದು. ಇದರಿಂದಾಗಿ ಕೌಯಿಯು ಸ್ವರ್ಗದಂತೆ ಕಾಣುತ್ತದೆ. ಇದು ದೊಡ್ಡ ದ್ವೀಪಗಳ ಹವಾಯಿಯನ್ ಸರಪಳಿಯ ಅತ್ಯಂತ ಹಳೆಯ ಮತ್ತು ಪಶ್ಚಿಮದ ದ್ವೀಪವಾಗಿದೆ. ಇಲ್ಲಿ ವಿವಿಧ ಸಸ್ಯಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ ಇದನ್ನು ಗಾರ್ಡನ್ ಐಲ್ಯಾಂಡ್ ಎಂದೂ ಕರೆಯುತ್ತಾರೆ.
ಗ್ರೀಸ್ ಪ್ರವಾಸ ಕೊಂಚ ದುಬಾರಿ ಎನಿಸಿದರೂ ಸಹ ಅಲ್ಲಿನ ಪ್ರಕೃತಿ ಸೌಂದರ್ಯ ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ. ಇಲ್ಲಿನ ಅಥೆನ್ಸ್, ಸ್ಯಾಂಟೋರಿನಿ, ಮೈಕೋನೋಸ್, ಮೆಟಿಯೋರಾ ಮತ್ತು ಡೆಲ್ಫಿ ಪ್ರದೇಶಗಳು ಪ್ರಸಿದ್ಧಿಯನ್ನು ಪಡೆದಿದೆ.
ಕ್ರೊಯೇಷಿಯಾ ಸುಂದರವಾದ ದೇಶವಾಗಿದ್ದು ಇದನ್ನು ಮ್ಯಾಜಿಕಲ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಹನಿಮೂನ್ ಟ್ರಿಪ್ ಗೆ ತೆರಳುವವರು ಈ ಸ್ಥಳವನ್ನು ಆಯ್ಕೆ ಮಾಡಬಹುದು. ಈ ದೇಶದಲ್ಲಿ 2 ರಿಂದ 3 ಸಾವಿರ ರೂಪಾಯಿಗಳವರೆಗೆ ಖರ್ಚಾಗುವ ಹೋಟೆಲ್‌ಗಳನ್ನು ನೀವು ಸುಲಭವಾಗಿ ಕಾಣಬಹುದು. ಇಲ್ಲಿ ಆಹಾರ ಮತ್ತು ಪ್ರಯಾಣದ ಖರ್ಚು ತೀರಾ ಕಡಿಮೆ.