ಕ್ರಿಸ್ ಮಸ್ ಹೊಸ ವರ್ಷದ ಪಾರ್ಟಿಗಳಿಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಚಿಕನ್ ಟಿಕ್ಕಾ ಮಸಾಲ.! ಇಲ್ಲಿದೆ ಸರಳ ರೆಸಿಪಿ

Chicken Tikka Masala Recipe : ಚಿಕನ್ ಟಿಕ್ಕಾ ನಾನ್ ವೆಜ್ ಪ್ರಿಯರ ಅತ್ಯಂತ ಇಷ್ಟವಾದ ಅಡುಗೆ. ಇದಕ್ಕಾಗಿ ಬಹುತೇಕ ಮಂದಿ ಹೊಟೇಲ್ ಅನ್ನೇ ನೆಚ್ಚಿಕೊಳ್ಳುತ್ತಾರೆ. ಆದರೆ ನಾವಿಂದು ಮನೆಯಲ್ಲಿಯೇ ಸುಲಭವಾಗಿ ಚಿಕನ್ ಟಿಕ್ಕಾ ತಯಾರಿಸುವ ರೆಸಿಪಿಯನ್ನು ಹೇಳಲಿದ್ದೇವೆ. 

Written by - Ranjitha R K | Last Updated : Dec 23, 2022, 04:26 PM IST
  • ಇನ್ನೇನು ಎರಡು ದಿನಗಳಲಿ ಕ್ರಿಸ್ ಮಸ್ ಸಡಗರ.
  • ಅದು ಮುಗಿಯುತ್ತಿದ್ದಂತೆಯೇ ಹೊಸ ವರ್ಷದ ಸಂಭ್ರಮಾಚರಣೆ.
  • ಸುಲಭವಾಗಿ ಚಿಕನ್ ಟಿಕ್ಕಾ ತಯಾರಿಸುವ ರೆಸಿಪಿ
ಕ್ರಿಸ್ ಮಸ್  ಹೊಸ ವರ್ಷದ ಪಾರ್ಟಿಗಳಿಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಚಿಕನ್ ಟಿಕ್ಕಾ ಮಸಾಲ.! ಇಲ್ಲಿದೆ ಸರಳ ರೆಸಿಪಿ  title=
Chicken Tikka Masala Recipe

ಬೆಂಗಳೂರು : ಇನ್ನೇನು ಎರಡು ದಿನಗಳಲಿ ಕ್ರಿಸ್ ಮಸ್ ಸಡಗರ. ಅದು ಮುಗಿಯುತ್ತಿದ್ದಂತೆಯೇ ಹೊಸ ವರ್ಷದ ಸಂಭ್ರಮಾಚರಣೆ. ಈ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಪಾರ್ಟಿ ಮಾಡುತ್ತಾರೆ. ಹೀಗೆ ಪಾರ್ಟಿ ಮಾಡುವಾಗ ಮನೆಯಲ್ಲಿಯೇ ಸುಲಭವಾಗಿ ಸ್ಪೆಷಲ್ ಅಡುಗೆಗಳನ್ನು ಮಾಡಿದರೆ ತಿನ್ನಲೂ ರುಚಿ. ಖರ್ಚು ಕೂಡಾ ಕಡಿಮೆ. ಅಲ್ಲದೆ, ರುಚಿಯೊಂದಿಗೆ ಶುಚಿಯತ್ತ ಕೂಡಾ ಸಂಪೂರ್ಣ ಗಮನ ಹರಿಸಬಹುದು.  ಈ ಸಂದರ್ಭಗಳಲ್ಲಿ ಚಿಕನ್ ಐಟಂ ಮಾಡಲಾಗುತ್ತದೆ. ಇಂದು ನಾವು ಮನೆಯಲ್ಲಿಯೇ ಸುಲಭವಾಗಿ ಚಿಕನ್ ಟಿಕ್ಕಾ ತಯಾರಿಸುವ ರೆಸಿಪಿ ಹಂಚಿಕೊಳ್ಳುತ್ತಿದ್ದೇವೆ. ಈ ರೆಸಿಪಿ ಮಾಡುವ ವಿಧಾನವೂ ಸರಳ. ತಗಲುವ ಖರ್ಚು, ಸಮಯ ಎರಡೂ ಕಡಿಮೆ. 

ಚಿಕನ್ ಟಿಕ್ಕಾ ಮಸಾಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು : 
2  ಚಿಕನ್ ಬ್ರೆಸ್ಟ್ (ನೆನಪಿರಲಿ ಇದು ವಿದ್ ಸ್ಕಿನ್ ಇರಲಿ) 
3 ಟೀಸ್ಪೂನ್ ಸಿಂಗಲ್ ಕ್ರೀಮ್
2 ಟೀಸ್ಪೂನ್ - ಕರಿ ಅಥವಾ ತಂದೂರಿ ಪೇಸ್ಟ್
2 ಟೀಸ್ಪೂನ್ - ಮೊಸರು
3 ಟೀಸ್ಪೂನ್ ಆಲಿವ್ ಎಣ್ಣೆ
2  ಪಲಾವ್ ಎಲೆಗಳು
1 ಮಧ್ಯಮ ಗಾತ್ರದ ಈರುಳ್ಳಿ
200 ಗ್ರಾಂ - ಟೊಮೆಟೊ ಹಣ್ಣು 
1/2 ಟೀಸ್ಪೂನ್ ಜೀರಿಗೆ ಪುಡಿ 
1/2 ಟೀಸ್ಪೂನ್ ಕೊತ್ತಂಬರಿ ಪುಡಿ 
1 /2 ಟೀಸ್ಪೂನ್ ಗರಂ ಮಸಾಲಾ
2 ಟೀಸ್ಪೂನ್ ಶುಂಠಿ
2 ಬೆಳ್ಳುಳ್ಳಿ 
2 ಮಧ್ಯಮ ಗಾತ್ರದ ಕೆಂಪು ಮೆಣಸಿನಕಾಯಿಗಳು
1/4 ಟೀಸ್ಪೂನ್ ಅರಿಶಿನ
1/4 ಟೀಸ್ಪೂನ್ ಕೆಂಪುಮೆಣಸು
1/4 ಟೀಸ್ಪೂನ್ ಉಪ್ಪು

ಇದನ್ನೂ ಓದಿ : Weight Loss: ದಿನನಿತ್ಯ ಒಂದು ಕಪ್‌ ಈ ಟೀ ಕುಡಿಯಿರಿ, ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ

ಚಿಕನ್  ಟಿಕ್ಕಾ ಮಸಾಲಾ ತಯಾರಿಸುವ ವಿಧಾನ : 
-ಮೊದಲಿಗೆ ತಂದೂರಿ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ  ಬೀಟ್ ಮಾಡಿಕೊಳ್ಳಿ. 
-ಈಗ ಚಿಕನ್ ತುಂಡುಗಳನ್ನು ಆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ.  ನಂತರ ಈ ಮಿಶ್ರಣವನ್ನು ಫ್ರಿಜ್ ನಲ್ಲಿ 2 ಗಂಟೆಗಳ ಕಾಲ ಇರಿಸಿ.
- ಈಗ ಒವನ್  ಅನ್ನು 180 ಡಿಗ್ರಿ ಸೆಲ್ಸಿಯಸ್ ಗೆ ಸೇಟ್ ಮಾಡಿ ಚಿಕನ್ ಅನ್ನು 10 ನಿಮಿಷಗಳವರೆಗೆ ಬೇಕ್ ಮಾಡಿ. 
-ಈಗ ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಮತ್ತು  ಕ್ರೀಂ ಹಾಕಿ ರುಬ್ಬಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. 
- ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ,  ಪಲಾವ್ ಎಲೆ ಮತ್ತು ಈರುಳ್ಳಿ ಹಾಕಿ  ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಮಿಶ್ರಣಕ್ಕೆ ಮೆಣಸಿನಕಾಯಿ, ಅರಿಶಿನ, ಉಪ್ಪು, ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ ಪುಡಿಗಳನ್ನು ಸೇರಿಸಿ.
- ಈಗ ಮಸಾಲೆಗೆ ಚಿಕನ್ ಸೇರಿಸಿ ಫ್ರೈ ಮಾಡಿ. 5 ನಿಮಿಷಗಳ ನಂತರ ಟೊಮೆಟೊ ಮತ್ತು ಕ್ರೀಮ್ ಮಿಶ್ರಣವನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
- ಮಸಾಲೆ ಕೆಂಪಾಗಿ ಕ್ರೀಂ ಕಾಣಿಸಲು ಆರಂಭವಾದಾಗ ನೀರು ಸೇರಿಸಿ ಮತ್ತೆ  1 ನಿಮಿಷ ಬೇಯಿಸಿ. ನೀರು ಸೇರಿಸುವಾಗ ಕರಿ ದಪ್ಪವಾಗಿರಬೇಕು ಎನ್ನುವುದು ನೆನಪಿರಲಿ.  
- ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಗ್ಯಾಸ್ ನಿಂದ ಕೆಳಗಿಳಿಸಿ. 

ಇದನ್ನೂ ಓದಿ : Heart Attack: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗಲು ಈ ತರಕಾರಿ ಸೇವಿಸಿ

ಇಷ್ಟಾದ ಮೇಲೆ ನೀವು ಹೊಟೇಲ್ ನಲ್ಲಿ ಸವಿಯುವ ಚಿಕನ್ ಟಿಕ್ಕಾ ಮಸಾಲ ಮನೆಯಲ್ಲಿಯೇ ರೆಡಿಯಾಗಿರುತ್ತದೆ. ನಿಮಗಿಷ್ಟವಾದ ಕಾಂಬಿನೇಶನ್ ನೊಂದಿಗೆ ತಿನ್ನಲು ಬಡಿಸಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News