ಬೆಂಗಳೂರು: ವಾರ್ಡ್ ಮರುವಿಂಗಡಣೆಯಿಂದ ಬಿಬಿಎಂಪಿಗೆ ಮತ್ತೆ ಬಹುದೊಡ್ಡ ಆರ್ಥಿಕ ಹೊರೆಯುಂಟಾಗಲಿದೆ ಅಂತಾ ಹೇಳಲಾಗಿದೆ. ವಾರ್ಡ್‍ಗಳನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದ್ದು ಬಿಬಿಎಂಪಿಗೆ ಮುಳುವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. 45 ವಾರ್ಡ್‍ಗಳ ಸಂಖ್ಯೆ ಹೆಚ್ಚಳದಿಂದ ಕೋಟಿ ಕೋಟಿ ರೂ. ವಾರ್ಷಿಕ ಆರ್ಥಿಕ ಹೊರೆ ಉಂಟಾಗಲಿದೆ ಎನ್ನಲಾಗುತ್ತಿದೆ.
ಸ್ವತಃ ಬಿಬಿಎಂಪಿಯೇ ವಾರ್ಷಿಕ ಆರ್ಥಿಕ ಹೊರೆಯ ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ. ಹೊಸ 45 ವಾರ್ಡ್‍ಗಳಿಗೆ ಎಷ್ಟು ಸಿಬ್ಬಂದಿ ಅವಶ್ಯಕತೆ ಇದೆ ಗೊತ್ತಾ..? ಯಾವ್ಯಾವ ವಿಭಾಗಕ್ಕೆ ಅಗತ್ಯವಿರೋ ಅಧಿಕಾರಿಗಳ ಸಂಖ್ಯೆ ಎಷ್ಟು? ಯಾವ ಯಾವ ವಿಭಾಗಕ್ಕೆ ವಾರ್ಷಿಕ ಉಂಟಾಗುವ ವೆಚ್ಚವೆಷ್ಟು..? ಈ ರೀತಿ ಅನೇಕ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ: Crime News: ರೈಲಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಸೂಸೈಡ್!
ಕೇವಲ ಸಿಬ್ಬಂದಿ ವೇತನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಬೇಕಾಗಿದೆ. ಸಿಬ್ಬಂದಿ ವೇತನ ಬಿಟ್ಟು ಕಚೇರಿ ಮತ್ತು ಇತರೆ ವೆಚ್ಚ ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ. ಬೇಕಾಗುತ್ತದೆ ಎನ್ನಲಾಗುತ್ತಿದೆ. ಹೆಚ್ಚು ಹುದ್ದೆ ಸೃಷ್ಟಿಸಿದ್ರೆ ಅದಕ್ಕೆ ಬಿಬಿಎಂಪಿಯೇ ವೇತನ ನೀಡ್ಬೇಕು. ಮೊದಲೇ ಆರ್ಥಿಕ ಸಂಕಷ್ಟದಲ್ಲಿರೋ ಪಾಲಿಕೆಗೆ ಇದು ಸಾಧ್ಯವಾಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.
ಪ್ರತಿವರ್ಷ ಸರ್ಕಾರದಿಂದ ಅನುದಾನ ಕೇಳುವ ಬಿಬಿಎಂಪಿ ಹೇಗೆ ವೇತನ ಕೊಡುತ್ತೆ..? ವಾರ್ಡ್ ವಿಂಗಡನೆ ಹೆಸರಲ್ಲಿ ಜೇನುಗೂಡಿಗೆ ಕೈ ಹಾಕೋ ಕೆಲ್ಸ ಮಾಡ್ತಾ ರಾಜ್ಯ ಸರ್ಕಾರ..? ಅನ್ನೂ ಪ್ರಶ್ನೆ ಕೂಡ ಮೂಡಿದೆ. ಹೀಗಾಗಿ ಯಾವಾಗ ಯಾವ ವಿಭಾಗಕ್ಕೆ ಎಷ್ಟೆಷ್ಟು ಸಿಬ್ಬಂದಿ ಮತ್ತು ಅವರಿಗೆಲ್ಲಾ ಎಷ್ಟೆಷ್ಟು ವೇತನ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
- ಕಂದಾಯ ವಿಭಾಗ - 163 ಹುದ್ದೆ - 7,92,02,184 ಕೋಟಿ ರೂ. ವಾರ್ಷಿಕ ವೇತನ
- ಕಾಮಗಾರಿ ವಿಭಾಗ - 71 ಹುದ್ದೆ - 5,77,37,124 ಕೋಟಿ ರೂ. ವಾರ್ಷಿಕ ವೇತನ
- ಆರೋಗ್ಯ ವಿಭಾಗ - 2295 ಹುದ್ದೆ - 73,41,15,960 ಕೋಟಿ ರೂ. ವಾರ್ಷಿಕ ವೇತನ
- ಸಾಮಾನ್ಯ ಆಡಳಿತ - 271 ಹುದ್ದೆ - 10,44,22,776 ಕೋಟಿ ರೂ. ವಾರ್ಷಿಕ ವೇತನ
- ಒಟ್ಟು ಹುದ್ದೆ - 2800 ಒಟ್ಟು - 97,54,78,044 ಕೋಟಿ ರೂ. ವಾರ್ಷಿಕ ವೇತನ
ವೇತನದ ಜೊತೆಗೆ ಇತರೆ ಖರ್ಚು ಎಷ್ಟು.!?
- ಸ್ವಂತ ಕಟ್ಟಡಗಳಿಲ್ಲದಿರೋದ್ರಿಂದ ಬಾಡಿಗೆ ಕಟ್ಟಡಕ್ಕೆ ಬಾಡಿಗೆ ಕಟ್ಟಬೇಕು
- ದೂರವಾಣಿ, ವಿದ್ಯುತ್, ಜಲಮಂಡಳಿಗೆ ಪ್ರತಿ ತಿಂಗಳು ಬಾಡಿಗೆ ನೀಡಬೇಕು
- ಅಧಿಕಾರಿಗಳಿಗೆ ಕಾರು, ಪೆಟ್ರೋಲ್ ಗೆ ಲಕ್ಷಾಂತರ ರೂ. ವೆಚ್ಚವಾಗಲಿದೆ
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ: ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಹತ್ಯೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.