ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬಾಕ್ಸರ್ ಮೇರಿ ಕೊಮ್ ಅವರು ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸುವ ಮೂಲಕ ದಾಖಲೆ ಆರನೇ ಬಾರಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಗೆ ಪಾತ್ರರಾದರು.
35 ವರ್ಷದ ಮೇರಿಕೊಮ್ ಅವರು ಉಕ್ರೇನ್ ನ ಹನ್ನಾ ಒಖೋಟಾ ಅವರನ್ನು 48ಕೆಜಿ ವಿಭಾಗದಲ್ಲಿ ಸೋಲಿಸುವ ಮೂಲಕ ಈಗ ಆರು ಪ್ರಶಸ್ತಿಗಳನ್ನು ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಇದಕ್ಕೂ ಮೊದಲು ಐರ್ಲೆಂಡ್ ನ ಕೇಟೀ ಟೇಲರ್ ಅವರು ಐದು ಪ್ರಶಸ್ತಿಗಳನ್ನು ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು,
ಇದಲ್ಲದೆ,ಕ್ಯೂಬನ್ ಬಾಕ್ಸಿಂಗ್ ದಂತಕಥೆ ಫೆಲಿಕ್ಸ್ ಸಾವೊನ್ ಅವರನ್ನು ವಿಶ್ವ ಚಾಂಪಿಯನ್ಶಿಪ್ (ಪುರುಷ ಮತ್ತು ಮಹಿಳೆ) ಇತಿಹಾಸದಲ್ಲಿ ಸರಿಗಟ್ಟಿದ ಸಾಧನೆಯನ್ನು ಮಾಡಿದ್ದಾರೆ.ಉತ್ತರ ಕೊರಿಯಾದ ಕಿಮ್ ಹೈಯಾಂಗ್ ಮಿ ಅವರನ್ನು ಸೆಮಿ-ಫೈನಲ್ನಲ್ಲಿ ಸೋಲಿಸಿ ಮೇರಿ ಕೊಂ ಫೈನಲ್ ಗೆ ತಲುಪಿದ್ದರು.