Mary Kom: ಸಾಮಾಜಿಕ ಮಾಧ್ಯಮ ಕೂ ನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು, ಮಾಡು ಇಲ್ಲವೇ ಮಡಿ... ಪ್ರಯತ್ನ ಅಥವಾ ಯಾವುದೇ ಶಾರ್ಟ್ಕಟ್ ಇಲ್ಲಿಲ್ಲ.. ಕೇವಲ ಕಠಿಣ ಪರಿಶ್ರಮ ಎಂದು ಬರೆದುಕೊಂಡಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 51 ಕೆಜಿ ವಿಭಾಗದ ಫೈನಲ್ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಕಜಕಿಸ್ತಾನದ ನಾಜಿಮ್ ಕಿಜೈಬೆ ವಿರುದ್ಧ ಸೋಲು ಅನುಭವಿಸಿದ ನಂತರ ಬೆಳ್ಳಿಗೆ ತೃಪ್ತಿಪಟ್ಟರು.
ಕರೋನಾವೈರಸ್ ಸಮುದಾಯ ಪ್ರಸರಣದ ಸಾಧ್ಯತೆಯ ಬಗ್ಗೆ ಆತಂಕದ ಮಧ್ಯೆ, ಏಸ್ ಬಾಕ್ಸರ್ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ ಅವರು 14 ದಿನಗಳ ಸಂಪರ್ಕ ತಡೆಯನ್ನು( ಕ್ವಾರಂಟೈನ್ )ಪ್ರೋಟೋಕಾಲ್ ಅನ್ನು ಮುರಿದಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಪ್ರಪಂಚದಾದ್ಯಂತದ ಹಲವು ದೇಶಗಳು ಕ್ವಾರಂಟೈನ್ ನ್ನು ಕಡ್ಡಾಯಗೊಳಿಸಿವೆ.
ಮುಂದಿನ ವರ್ಷದ ಟೋಕಿಯೊ ಅರ್ಹತಾ ಪಂದ್ಯಗಳಿಗಾಗಿ ಮೇರಿ ಕೋಮ್ ವಿರುದ್ಧದ ಟ್ರಯಲ್ ಪಂದ್ಯಕ್ಕಾಗಿ ನಿಖತ್ ಜರೀನ್ ಅವರನ್ನು ಬೆಂಬಲಿಸಿದ್ದಕಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕೋಮ್ ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 51 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್ ಟರ್ಕಿಯ ಬುಸೆನಾಜ್ ಕ್ಯಾಕಿರೊಗ್ಲು ವಿರುದ್ಧ ಸೋಲನ್ನು ಅನುಭವಿಸಿದರು. ಆ ಮೂಲಕ ಅವರು ಕೇವಲ ಕಂಚಿನ ಪದಕಕ್ಕೆ ಸಮಾಧಾನಪಡುವಂತಾಯಿತು
ಭಾರತದ ಮೇರಿ ಕೋಮ್ ಬಾಕ್ಸಿಂಗ್ ನಲ್ಲಿ ಆರು ವಿಶ್ವ ಚಾಂಪಿಯನ್ಶಿಪ್ಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿ ಪಡೆದ ಎರಡು ತಿಂಗಳ ನಂತರ ಗುರುವಾರದಂದು ಬಾಕ್ಸಿಂಗ್ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಬಾಕ್ಸರ್ ಮೇರಿ ಕೊಮ್ ಅವರು ಉಕ್ರೇನ್ನ ಹನ್ನಾ ಒಖೋಟಾ ಅವರನ್ನು ಸೋಲಿಸುವ ಮೂಲಕ ದಾಖಲೆ ಆರನೇ ಬಾರಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿಗೆ ಪಾತ್ರರಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.