ನ್ಯಾಯಾಂಗದಲ್ಲಿ ದಲಿತ ಮತ್ತು ಮಹಿಳಾ ಪ್ರಾತಿನಿಧ್ಯತೆ ಇಲ್ಲದಿರುವಿಕೆ ಬಗ್ಗೆ ರಾಷ್ಟ್ರಪತಿ ಕಳವಳ

    

Last Updated : Nov 26, 2017, 10:51 AM IST
ನ್ಯಾಯಾಂಗದಲ್ಲಿ ದಲಿತ ಮತ್ತು ಮಹಿಳಾ ಪ್ರಾತಿನಿಧ್ಯತೆ ಇಲ್ಲದಿರುವಿಕೆ ಬಗ್ಗೆ ರಾಷ್ಟ್ರಪತಿ ಕಳವಳ title=

ನವದೆಹಲಿ:  ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ದಲಿತ ಮತ್ತು ಮಹಿಳೆಯರ ಪ್ರಾತಿನಿಧ್ಯತೆ ಇಲ್ಲದಿರುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿಗಳು ನ್ಯಾಯಾಂಗದ ಗುಣಮಟ್ಟತೆಗೆ ಕುಂದು ಬರದ ರೀತಿಯಲ್ಲಿ ಈ ಅಸಮಾನತೆಯನ್ನು ಸರಿಪಡಿಸಿ ಎಂದು ಅವರು ಸಲಹೆ ನೀಡಿದರು.

ಇಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಮತ್ತು ನೀತಿ ಆಯೋಗವು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ  ಕಾನೂನು ದಿನಾಚರಣೆಯ ಸಂದರ್ಭದಲ್ಲಿ ಎರಡು ದಿನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವು ನಂಬಲಾಗದ ರೀತಿಯ ಕನಿಷ್ಟ ಪ್ರಾತಿನಿಧ್ಯತೆಯನ್ನು ಈಗಿನ  ನ್ಯಾಯಾಂಗ ವ್ಯವಸ್ಥೆ ಹೊಂದಿದ್ದು, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳು, ಪ.ಜಾತಿ, ಪ.ಪಂಗಡಗಳ ಪ್ರಾತಿನಿಧ್ಯತೆ ಕಡಿಮೆ ಇರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇನ್ನು ಮುಂದುವರೆದು 17,000 ದೇಶದ ಜಿಲ್ಲಾ ,ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಧೀಶರಲ್ಲಿ 4,700 ರಷ್ಟು ಮಹಿಳಾ ನ್ಯಾಯಾಧೀಶರನ್ನು ಹೊಂದಿದೆ ಎಂದರು. 

ಒಂದು ಕಡೆ ನಮ್ಮ ಕೋರ್ಟ್ಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವ ಸಂಧರ್ಭದಲ್ಲಿ  ಬಡವರು ಕೋರ್ಟಿನ ವೆಚ್ಚ ಮತ್ತು ಸಮಯದ ಮಿತಿಯಿಂದಾಗಿ ಇದರಿಂದಾಗಿ ದೂರ ಉಳಿಯುತ್ತಿದ್ದಾರೆ  ಎಂದು ಈ ಸಂಧರ್ಭದಲ್ಲಿ ತಿಳಿಸಿದರು.ಇದೆ ಸಂದರ್ಭದಲ್ಲಿ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ರವರು ನ್ಯಾಯಾಂಗದಲ್ಲಿರುವ ಕೊಲಿಜಿಮ್ ಪದ್ದತಿಯನ್ನು ಪರಾಮರ್ಶಿಸಬೇಕೆಂದರು.  

Trending News