Thalapathy Vijay : ಪತ್ನಿಗೆ ಇಳಯದಳಪತಿ ವಿಜಯ್‌ ಡೈವೋರ್ಸ್‌.. ಅಸಲಿ ವಿಷಯವೇನು...?

ಕಾಲಿವುಡ್‌ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ವಾರಿಸು ಸಿನಿಮಾದೊಂದಿಗೆ ತೆರೆಗೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ವಂಶಿ ಪೈಡಿಪಲ್ಲಿ ನಾಯಕರಾಗಿರುವ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಚಿತ್ರ ಸಂಕ್ರಾಂತಿ ಹಬ್ಬದಂದು (ಜನವರಿ 11) ಬಿಡುಗಡೆಯಾಗುತ್ತಿದೆ. ಹೀಗಿರುವಾಗ ವಿಜಯ್‌ ಪತ್ನಿ ಸಂಗೀತಾ ಡೈವೋರ್ಸ್‌ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ಅಪ್‌ ಡೇ ಆಗುತ್ತಿದೆ. 

Written by - Krishna N K | Last Updated : Jan 6, 2023, 02:11 PM IST
  • ದಳಪತಿ ವಿಜಯ್ ಡೈವೋರ್ಸ್‌ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ಅಪ್‌ ಡೇ ಆಗುತ್ತಿದೆ.
  • 23 ವರ್ಷಗಳ ಹಿಂದೆ ಮದುವೆಯಾದ ಈ ಜೋಡಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.
  • ವಿಜಯ್‌ - ಸಂಗೀತಾ ಡೈವೋರ್ಸ್‌ ಮ್ಯಾಟರ್‌ ಯಾಕೆ ಬಂತು? ಹೇಗೆ ಬಂತು? ಎನ್ನುವ ವಿಷಯವೇ ಅರ್ಥವಾಗುತ್ತಿಲ್ಲ.
Thalapathy Vijay : ಪತ್ನಿಗೆ ಇಳಯದಳಪತಿ ವಿಜಯ್‌ ಡೈವೋರ್ಸ್‌.. ಅಸಲಿ ವಿಷಯವೇನು...? title=

Thalapathy Vijay Divorce : ಕಾಲಿವುಡ್‌ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ವಾರಿಸು ಸಿನಿಮಾದೊಂದಿಗೆ ತೆರೆಗೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ವಂಶಿ ಪೈಡಿಪಲ್ಲಿ ನಾಯಕರಾಗಿರುವ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ನ್ಯಾಷುನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಚಿತ್ರ ಸಂಕ್ರಾಂತಿ ಹಬ್ಬದಂದು (ಜನವರಿ 11) ಬಿಡುಗಡೆಯಾಗುತ್ತಿದೆ. ಹೀಗಿರುವಾಗ ವಿಜಯ್‌ ಪತ್ನಿ ಸಂಗೀತಾ ಡೈವೋರ್ಸ್‌ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ಅಪ್‌ ಡೇ ಆಗುತ್ತಿದೆ. 

ಬಹುನೀರಿಕ್ಷಿತ ʼವಾರಿಸುʼ ಸಿನಿಮಾದ ಪ್ರಚಾರ ಬಿರುಸಿನಿಂದ ಸಾಗುತ್ತಿರುವಾಗಲೇ ವಿಜಯ್ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. 23 ವರ್ಷಗಳ ಹಿಂದೆ ಮದುವೆಯಾದ ಈ ಜೋಡಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ, ಇವರಿಬ್ಬರ ನಡುವೆ ಡೈವೋರ್ಸ್‌ ಮ್ಯಾಟರ್‌ ಯಾಕೆ ಬಂತು? ಹೇಗೆ ಬಂತು? ಎನ್ನುವ ವಿಷಯವೇ ಅರ್ಥವಾಗುತ್ತಿಲ್ಲ. ಇವರಿಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಅನಿರೀಕ್ಷಿತ ಸುದ್ದಿ ವಿಜಯ್‌ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಇದನ್ನೂ ಓದಿ: ಅಮ್ಮನ ಮಡಿಲಲ್ಲಿ ʼವಮಿಕಾʼ ತುಂಟಾಟ.. ʼವಿರುಷ್ಕಾʼ ಬೇಬಿ ವಿಡಿಯೋ ವೈರಲ್‌..!

ಅಲ್ಲದೆ, ದಳಪತಿ ಫ್ಯಾನ್ಸ್‌ ಇದು ಶುದ್ಧ ಸುಳ್ಳು. ಈ ರೀತಿಯ ಸುದ್ದಿಯನ್ನು ಏಕೆ ಸೃಷ್ಟಿಸುತ್ತಿದ್ದೀರಿ ಎಂದು ಮಾಧ್ಯಮದವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ವಿಜಯ್ - ಸಂಗೀತಾ ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ, ವಿಚ್ಛೇದನದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ, ಇದು ಕೇವಲ ವದಂತಿ ಎಂದು ಹೇಳಲಾಗಿದೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ವಿಜಯ್ ನಟನೆಯ ಮುಂಬರುವ ವಾರಿಸು ಸಿನಿಮಾದ ಆಡಿಯೋ ಲಾಂಚ್ ಮತ್ತು ಡೈರೆಕ್ಟರ್‌ ಅಟ್ಲಿ ಪತ್ನಿ ಪ್ರಿಯಾ  ಬೇಬಿ ಶವರ್ ಸಮಾರಂಭದಲ್ಲಿ ಸಂಗೀತಾ ಇಲ್ಲದಿರುವುದು ಡೈವೋರ್ಸ್‌ ವದಂತಿಗಳಿಗೆ ಉತ್ತೇಜನ ನೀಡಿತ್ತು. ಆದರೆ ಸಂಗೀತಾ ತಮ್ಮ ಕುಟುಂಬದೊಂದಿಗೆ ಯುಎಸ್‌ಗೆ ತೆರಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ..  1999 ಅಗಸ್ಟ್‌ 25 ರಂದು ವಿಜಯ್ ಶ್ರೀಲಂಕಾ ಮೂಲಕ ತಮಿಳು ಹುಡುಗಿ ಸಂಗೀತಾ ಸೋರ್ನಲಿಂಗಂ ಅವರನ್ನು ಪ್ರೀತಿಸಿ ಮದುವೆಯಾದರು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭೇಟಿಯಾಗಿದ್ದ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News