Samantha : ಮೊದಲ ಬಾರಿಗೆ ಮನೆಯಿಂದ ಹೊರಬಂದ ಸಮಂತಾ... ಹೇಗಿದೆ ಆರೋಗ್ಯ..!

Samantha Ruth Prabhu : ಮಯೋಸಿಟಿಸ್‌ ಖಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಸಾಕಷ್ಟು ಗ್ಯಾಪ್‌ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಸ್ಯಾಮ್‌ ಫೋಟೋ ಮತ್ತು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಶುಕ್ರವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾದಲ್ಲಿ ಸಮಂತಾ ಸೆರೆಯಾಗಿದ್ದಾರೆ.

Written by - Krishna N K | Last Updated : Jan 6, 2023, 03:24 PM IST
  • ಮಯೋಸಿಟಿಸ್‌ ಖಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ
  • ಸಾಕಷ್ಟು ಗ್ಯಾಪ್‌ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಯಾಮ್‌
  • ಸಮಂತಾ ಮಯೋಸಿಟಿಸ್‌ ಖಾಯಿಲೆಯಿಂದ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ
Samantha : ಮೊದಲ ಬಾರಿಗೆ ಮನೆಯಿಂದ ಹೊರಬಂದ ಸಮಂತಾ... ಹೇಗಿದೆ ಆರೋಗ್ಯ..! title=

Samantha Ruth Prabhu : ಮಯೋಸಿಟಿಸ್‌ ಖಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಸಾಕಷ್ಟು ಗ್ಯಾಪ್‌ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಸ್ಯಾಮ್‌ ಫೋಟೋ ಮತ್ತು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಶುಕ್ರವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾದಲ್ಲಿ ಸಮಂತಾ ಸೆರೆಯಾಗಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಸಮಂತಾ ಮಯೋಸಿಟಿಸ್‌ ಎಂಬ ಖಾಯಿಲೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೊನೆಯ ಬಾರಿಗೆ ಶಾಕುಂತಲಂ ಸಿನಿಮಾವನ್ನು ಹೇಗೆ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಫೋಟೋ ಹಂಚಿಕೊಂಡು ತಮ್ಮ ಫ್ಯಾನ್ಸ್‌ಗೆ ತೋರಿಸಿದರು. ಹಾಸಿಗೆಯ ಮೇಲೆ ಮಲಗಿ ಸಮಂತಾ ʼಶಕುಂತಲಂʼ ಸಿನಿಮಾದ ಡಬ್ಬಿಂಗ್ ಮಾಡುತ್ತಿದ್ದರು. ಆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. 

ಇದನ್ನೂ ಓದಿ: Thalapathy Vijay : ಪತ್ನಿಗೆ ಇಳಯದಳಪತಿ ವಿಜಯ್‌ ಡೈವೋರ್ಸ್‌.. ಅಸಲಿ ವಿಷಯವೇನು...?

ಆದರೆ ಸಡನ್ನಾಗಿ ಸಮಂತಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ. ಈ ಹಿಂದೆ ʼಯಶೋದಾʼ ಪ್ರಚಾರಕ್ಕೆ ಸಮಂತಾ ಬಂದಿರಲಿಲ್ಲ. ತಾನು ಮಯೋಸಿಟಿಸ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿದರು. ಮಯೋಸಿಟಿಸ್‌ ಖಾಯಿಲೆ ಬಂದ್ರೆ ಸರಿಯಾಗಿ ನಡೆಯಲು, ನಿಲ್ಲಲು ಸಾಧ್ಯವಾಗಲ್ಲ ಅಂತ ಎಲ್ಲರಿಗೂ ತಿಳಿದಿತ್ತು. ಈಗ ಸಮಂತಾ ಮಯೋಸಿಟಿಸ್‌ ಖಾಯಿಲೆಯಿಂದ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ ಎನಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News