Rohit Sharma On T20 Career : ಟಿ20 ವಿಶ್ವಕಪ್ 2022 ರ ಸೋಲಿನ ನಂತರ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಟಿ20 ನಾಯಕತ್ವದ ಬಗ್ಗೆ ಅನುಮಾನಗಳು ಕಂಡು ಬರುತ್ತಿವೆ. ಈ ಟೂರ್ನಿಯ ನಂತರ ಅವರು ಭಾರತ ಪರ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ರೋಹಿತ್ ಶರ್ಮಾ ಇನ್ನು ಮುಂದೆ ಟಿ20 ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಹಲವು ಮಾಧ್ಯಮ ವರದಿ ಮಾಡಿವೆ. ಇದೆಲ್ಲದರ ನಡುವೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ತಮ್ಮ ಟಿ20 ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಟಿ20 ಸರಣಿ ಬಗ್ಗೆ ರೋಹಿತ್ ಶರ್ಮಾ ಮಹತ್ವದ ಹೇಳಿಕೆ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ತೊರೆಯುವ ಯಾವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : IND vs SL : ಶ್ರೀಲಂಕಾ ಸರಣಿಯ ಮೊದಲು ಭಾರತಕ್ಕೆ ಭಾರಿ ಹೊಡೆತ, ಈ ಮಾರಣಾಂತಿಕ ಬೌಲರ್ ಔಟ್!
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, 'ನಿರಂತರವಾಗಿ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂಬುದು ಮೊದಲನೆಯದು. ನೀವು ಅವರಿಗೆ (ಫಾರ್ಮ್ಯಾಟ್ಗಳಾದ್ಯಂತ ಆಟಗಾರರಿಗೆ) ಸಾಕಷ್ಟು ವಿಶ್ರಾಂತಿ ನೀಡಬೇಕಾಗಿದೆ. ನನ್ನ ವಿಷಯದಲ್ಲೂ ಅದೇ ಆಗಿದೆ. ನ್ಯೂಜಿಲೆಂಡ್ ವಿರುದ್ಧ ನಾವು ಮೂರು ಟಿ20 ಪಂದ್ಯಗಳನ್ನು ಆಡಬೇಕಿದೆ. ಈ ವಿಚಾರದಲ್ಲಿ ಐಪಿಎಲ್ ನಂತರ ಏನಾದರೂ ಯೋಚಿಸುತ್ತೇನೆ. ನಾನು ಟಿ20 ಮಾದರಿ ತೊರೆಯಲು ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನ ಭಾರಿ ಬದಲಾವಣೆ ಆಗಬಹುದು
ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವ ತಂಡವನ್ನು ಸಿದ್ಧಪಡಿಸಲು ಮಂಡಳಿ ತಯಾರಿ ನಡೆಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗಾಗಿ ರೋಹಿತ್, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಭವಿ ಕೆಎಲ್ ರಾಹುಲ್ ಅವರನ್ನು ಕಡಿಮೆ ಸ್ವರೂಪದ ತಂಡದಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ, ಮುಂಬರುವ ಟಿ20 ಸರಣಿಯಲ್ಲೂ ಅವಕಾಶ ಪಡೆಯುವುದು ಕಷ್ಟವಾಗುತ್ತಿದೆ.
ರೋಹಿತ್ ಶರ್ಮಾ ಅವರ ಟಿ20 ವೃತ್ತಿಜೀವನ
ರೋಹಿತ್ ಶರ್ಮಾ ಇದುವರೆಗೆ ಟೀಂ ಇಂಡಿಯಾ ಪರ 148 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ರೋಹಿತ್ ಶರ್ಮಾ 30.82 ಸರಾಸರಿಯಲ್ಲಿ 3853 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ ಟಿ20ಯಲ್ಲಿ ಭಾರತ ಪರ 29 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. ಟಿ20 ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ : Dwayne Pretorius retirement: ಕ್ರಿಕೆಟ್ ಜಗತ್ತಿಗೆ ದಿಢೀರ್ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.